23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ಮಹಾ ರಥೋತ್ಸವ

ನವಶಕ್ತಿ ಫ್ರೆಂಡ್ಸ್ ಬೆಳ್ತಂಗಡಿ ಅರ್ಪಿಸುವ ಕಾಶಿ ಪ್ಯಾಲೇಸ್ ಉಜಿರೆ ಪ್ರಾಯೋಜಕತ್ವ ದಲ್ಲಿ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ಮಹಾರಥೋತ್ಸವ ಪ್ರಯುಕ್ತ ಯೋಧರಿಗೊಂದು ನಮನ ಹಾಗೂ ಸಂಗೀತ ಸಂಭ್ರಮ ಫೆ.20ರಂದು ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿದೆ.


ಸಭಾಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜಾ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್.ಬರೋಡ ತುಳು ಸಂಘ ಅಧ್ಯಕ್ಷ ಹಾಗೂ ಉದ್ಯಮಿಗಳಾದ ಶಶಿಧರ್ ಶೆಟ್ಟಿ.
ನಾವೂರು ಆರೋಗ್ಯ ಕ್ಲಿನಿಕ್ ನ ಡಾ.ಪ್ರದೀಪ್ . ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸುನೀಲ್ ಶೆಣೈ. ಉಜಿರೆ ಲಕ್ಷ್ಮೀ ಗ್ರೂಪ್ಸ್ ಮಾಲಕರಾದ ಮೋಹನ್ ಕುಮಾರ್.ನಗರ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ ಉಪಾಧ್ಯಕ್ಷ ಜಯನಂದ ಗೌಡ. ಬೆಳ್ತಂಗಡಿ ಸಹಾಯಕ ಕಾರ್ಯಪಾಲಕ ಅಭಿಯಂತರರು ನಿತಿನ್ ಕುಮಾರ್. ಉದ್ಯಮಿ ಸಂತೋಷ್ ಕುಮಾರ್ ಜೈನ್.
ಚಿಂತಕರಾದ ಪ್ರಕಾಶ್ ಮಲ್ಪೆ ಭಾರತದ ಸೈನ್ಯ ಪರಂಪರೆ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ವೇದಿಕೆಯಲ್ಲಿ ಹುತಾತ್ಮ ಯೋಧ ಭೂಸೇನೆ ಕೃಷ್ಣಪ್ಪಗೌಡ ನಡ. ಮಾಜಿ ಸೈನಿಕ ಪರಶುರಾಮ ಗೌಡ ನೇಜಿಕಾರು. ಯೋಗೀಶ್ ಗೌಡ ನಡ. ಸಮಾಜ ಸೇವಕರಾದ ರಾಮಚಂದ್ರ ಶೆಟ್ಟಿ ಉಜಿರೆ ಇವರನ್ನು ಸನ್ಮಾನಿಸ ಲಾಗುವುದು. ನಂತರ ಜಿ ಕನ್ನಡ ಹಾಗೂ ಕಲರ್ಸ್ ಕನ್ನಡದ ಹೆಸರಾಂತ ರಿಯಾಲಿಟಿ ಶೋಗಳ ಖ್ಯಾತ ಗಾಯಕರಿಂದ ಸಂಗೀತ ಸಂಭ್ರಮ ನಡೆಯಲಿದೆ.

Related posts

ಕರ್ನಾಟಕ ಔಷಧಿ ವ್ಯಾಪಾರಿಗಳ ಸಂಘದಿಂದ ಉಜಿರೆಯ ಶ್ರೀಧರ‌ ಕೆ.ವಿ ರವರಿಗೆ ಸನ್ಮಾನ

Suddi Udaya

ಸಚಿವ ವಿ.ಸೋಮಣ್ಣರವನ್ನು ಭೇಟಿಯಾದ ಜಿ.ಪಂ. ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ: ಮಂಗಳೂರು ನಿಂದ ಬೆಂಗಳೂರು ನೇರ ರೈಲು ಒದಗಿಸುವಂತೆ ಮನವಿ

Suddi Udaya

ಬೆಳ್ತಂಗಡಿ : ಆರ್.ಎಫ್.ಓ ಮೋಹನ್ ಕುಮಾರ್ ಎಸಿಎಫ್ ಆಗಿ ಮುಂಬಡ್ತಿ

Suddi Udaya

ಮಚ್ಚಿನ: ನೆತ್ತರ ದ.ಕ.ಜಿ.ಪಂ. ಕಿರಿಯ ಪ್ರಾಥಮಿಕ ಶಾಲೆಯ ಬೆಳ್ಳಿ ಹಬ್ಬದ ಸಂಭ್ರಮ

Suddi Udaya

ಉಜಿರೆ: ಶ್ರೀ. ಧ.ಮಂ.ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವದ ಸಂಭ್ರಮ -ಮಕ್ಕಳಿಗೆ ಅದ್ದೂರಿಯ ಸ್ವಾಗತ

Suddi Udaya

ಅರಸಿನಮಕ್ಕಿ ನವಶಕ್ತಿ ಆಟೋ ಚಾಲಕ ಮಾಲಕರ ಸಂಘದಿಂದ ಸಹಾಯಧನ ಹಸ್ತಾಂತರ

Suddi Udaya
error: Content is protected !!