38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ವೇಣೂರು: ಕ್ಷೇತ್ರದಲ್ಲಿ ಸರ್ವಜ್ಞ ವಾಣಿ ವೆಬ್ ಸೈಟ್ ಅನಾವರಣ

ಬೆಳ್ತಂಗಡಿ: ಪತ್ರಕರ್ತ ಪದ್ಮನಾಭ ವೇಣೂರು ಸ೦ಪಾದಕತ್ವದ ಕುಲಾಲ ಕು೦ಬಾರರ ಧ್ವನಿ www.sarvajnavani.com ಕನ್ನಡ ವೆಬ್‌ಸೈಟ್‌ನ್ನು ಇತಿಹಾಸ ಪ್ರಸಿದ್ಧ ಅಜಿಲ ಸೀಮೆಗೆ ಒಳಪಟ್ಟ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ. ೧೯ರಂದು ಪೂಜ್ಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ಹಾಗೂ ಶಾಸಕ ಹರೀಶ್ ಪೂಂಜರವರು ಪ್ರತಿಷ್ಠಿತ ಡಿ. ದೇಜರಾಜ ಅರಸು ರಾಜ್ಯಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ವೈದ್ಯ ಡಾ| ಅಣ್ಣಯ್ಯ ಕುಲಾಲ್ ಉಳ್ತೂರು ಅವರ ಉಪಸ್ಥಿತಿಯಲ್ಲಿ ಅನಾವರಣಗೊಳಿಸಿದರು.


ವೇದಿಕೆಯಲ್ಲಿ ಸಾಧ್ವಿ ಸರಸ್ವತಿ ಸ್ವಾಮೀಜಿಯವರು, ವೇಣೂರು ಗ್ರಾ.ಪಂ. ಅಧ್ಯಕ್ಷರಾದ ನೇಮಯ್ಯ ಕುಲಾಲ್, ವೇಣೂರು ಕುಂಭಶ್ರೀ ವಿದ್ಯಾಸಂಸ್ಥೆಯ ಸಂಸ್ಥಾಪಕ ಗಿರೀಶ್ ಕೆ.ಎಚ್., ವೇಣೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಿ.ಯನ್. ಪುರುಷೋತ್ತಮ ರಾವ್ , ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಹರೀಶ್ ಮುಂಡ್ರುಪ್ಪಾಡಿ, ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿಗಳಾದ ವಿ. ಪ್ರವೀಣ್ ಕುಮಾರ್ ಇಂದ್ರ, ಪ್ರಸಿದ್ಧ ಉದ್ಯಮಿ ವೇಣೂರು ಧನಲಕ್ಷ್ಮೀ ಟ್ರೇಡರ್‍ಸ್‌ನ ಜಗದೀಶ್ ನಾಯಕ್, ಶ್ರೀಮತಿ ಕಮಲಾ ಬಂಗೇರ, ಶ್ರೀಮತಿ ಗೌರಮ್ಮ ನರಸಿಂಹ ಭಟ್, ಶ್ರೀಮತಿ ಚಂದ್ರ ಕುಮಾರಿ, ವಸಂತ ಸಾಲಿಯಾನ್ ಕಾಪಿನಡ್ಕ, ಬ್ರಹ್ಮ ಕಲಶ ಸಮಿತಿಯ ಯಜ್ಞನಾರಾಯಣ ಭಟ್, ವೇಣೂರಿನ ಪ್ರಸಿದ್ಧ ವೈದ್ಯರಾದ ಡಾ. ಶಾಂತಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Related posts

ಶಿಬಾಜೆ ಭಂಡಿಹೊಳೆಯಲ್ಲಿ ಪ್ರಕೃತಿ ಪ್ರಿಯರಿಂದ ರಸ್ತೆ ಸ್ವಚ್ಛತಾ ಅಭಿಯಾನ

Suddi Udaya

ಬೆಳ್ತಂಗಡಿ:ಮುಳಿಯ ಜುವೆಲ್ಸ್ ನಲ್ಲಿ ‘ಮುಳಿಯ ಚಿನ್ನೋತ್ಸವ’ ಸಂಭ್ರಮ: ವಿವಿಧ ಬಗೆಯ ವೆರೈಟಿ ಚಿನ್ನಾಭರಣಗಳಿಗೆ ಮುಳಿಯ ಸಂಸ್ಥೆ ಹೆಸರುವಾಸಿಯಾಗಿದೆ

Suddi Udaya

ತಾಲೂಕಿನಲ್ಲಿ ಗುಡುಗು ಸಹಿತ ಗಾಳಿ ಮಳೆ ಅಲ್ಲಲ್ಲಿ ಮರ ಬಿದ್ದು, ವಿದ್ಯುತ್, ಮನೆಗಳಿಗೆ ಹಾನಿ-ರಸ್ತೆ ಸಂಚಾರ ಅಸ್ತವ್ಯಸ್ತ

Suddi Udaya

ಕೊಕ್ಕಡ: ಕಾವು ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಆರಂಭ

Suddi Udaya

ಉಜಿರೆ: ಎಸ್‌ಡಿಪಿಐ ಕಕ್ಕೇಜಾಲ್ ಬ್ರಾಂಚ್ ವತಿಯಿಂದ ರಕ್ತದಾನ ಶಿಬಿರ

Suddi Udaya

ಹಿಂದೂ ಸಮಾಜಕ್ಕೆ ಶಕ್ತಿಯಾಗಿರುವ ಎಡನೀರು ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಕಾರಿಗೆ ದಾಳಿ: ಸೂಕ್ತ ಭದ್ರತೆ ನೀಡಿ, ರಕ್ಷಣೆ ನೀಡಬೇಕೆಂದು ಸರಕಾರಕ್ಕೆ ಶಾಸಕ ಹರೀಶ್ ಪೂಂಜ ಒತ್ತಾಯ

Suddi Udaya
error: Content is protected !!