ಕಳುವಾದ ಮೊಬೈಲ್ ಫೋನ್ ಗಳನ್ನು 24 ಗಂಟೆಯಲ್ಲಿ ಶೀಘ್ರವಾಗಿ ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಪೊಲೀಸರು

Suddi Udaya

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಕಳುವಾದ/ಕಳೆದು ಹೋದ /ಸುಲಿಗೆಯಾದ ಮೊಬೈಲ್ ಫೋನ್ ಗಳ ದುರ್ಬಳಕೆಯನ್ನು ತಡೆಗಟ್ಟಲು ಅಂತಹ ಮೊಬೈಲ್ ಫೊನ್ ಗಳನ್ನು ಬ್ಲಾಕ್ ಮಾಡುವ ನೂತನ ವ್ಯವಸ್ಥೆ CEIR Portal ಅನ್ನು ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ಇಲಾಖೆಯಿಂದ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದ್ದು, ಈ ಪೋರ್ಟಲ್ ಮೂಲಕ 24 ಗಂಟೆಯಲ್ಲಿ 7 ಕಾಣೆಯಾದ ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಿ ಅವುಗಳಲ್ಲಿ 4 ಮೊಬೈಲ್ ಫೋನ್ ಗಳನ್ನು CEN ಅಪರಾಧ ಪೊಲೀಸ್ ಠಾಣೆ, ಉಪ್ಪಿನಂಗಡಿ, ಪುತ್ತೂರು ಟೌನ್, ಸುಳ್ಯ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು ವಾರಸುದಾರರಿಗೆ ಹಸ್ತಾoತರಿಸಿರುತ್ತಾರೆ.

ಸಾರ್ವಜನಿಕರಲ್ಲಿ ಮನವಿ:
ಮೊಬೈಲ್ ಕಳೆದುಹೋದರೆ, ಕಳುವಾದರೆ, ಸುಲಿಗೆ ಯಾದರೆ ತಕ್ಷಣವೇ E-LOST ಮೂಲಕ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿ, ಸ್ವೀಕೃತಿ ಪಡೆದು ನಂತರ ಮಾಹಿತಿಯನ್ನು CEIR ಪೋರ್ಟಲ್ ನಮೂದಿಸುವುದು. ಇದರಿಂದ ಕಳೆದು ಹೋದ, ಕಳುವಾದ, ಸುಲಿಗೆ ಯಾದ ಮೊಬೈಲ್ ಫೋನ್ ಗಳ ದುರ್ಬಳಕೆ ತಡೆಗಟ್ಟಲು ಹಾಗೂ ಅವುಗಳನ್ನು ತಕ್ಷಣ ಪತ್ತೆ ಹಚ್ಚಲು ಅನುಕೂಲವಾಗುತ್ತದೆ.
ಈ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕೋರಲಾಗಿದೆ.

Leave a Comment

error: Content is protected !!