25.7 C
ಪುತ್ತೂರು, ಬೆಳ್ತಂಗಡಿ
May 17, 2025
ಕೃಷಿಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಪದ್ಮಂಜ ಸಹಕಾರಿ ಸಂಘದ ರೈತ ಸಭಾಭವನ ಮತ್ತು ರೈತ ಗೋದಾಮು ಕಟ್ಟಡ ಉದ್ಘಾಟನೆ

ಬೆಳ್ತಂಗಡಿ: ಪದ್ಮಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಪದ್ಮಂಜದಲ್ಲಿ ನಿರ್ಮಿಸಲಾಗಿರುವ ರೈತ ಸಭಾಭವನ ಹಾಗೂ ರೈತ ಗೋದಾಮ ಕಟ್ಟಡದ ಉದ್ಘಾಟನಾ ಸಮಾರಂಭ ಮಾ.2ರಂದು ರೈತ ಸಭಾಭವನ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ. ರೈತ ಗೋದಮು ಕಟ್ಟಡ ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕರಾದ ಕೆ ಪ್ರತಾಪ್ ಸಿಂಹ ನಾಯಕ್.ಕ್ಯಾಂಪ್ಕೋ ಬ್ರಾಂಚ್ ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕರಾದ ಕೆ ಹರೀಶ್ ಕುಮಾರ್. ನವಿಕೃತ ಪ್ರಧಾನ ಕಛೇರಿ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಧರ್ಮಸ್ಥಳದ ಕಾರ್ಯ ನಿರ್ವಾಹಕ ನಿರ್ದೇಶಕರಾದ ಡಾ. ಎಲ್ ಎಚ್ ಮಂಜುನಾಥ್.ಮೀಟಿಂಗ್ ಹಾಲ್ ಉದ್ಘಾಟನೆಯನ್ನು.ಮಂಗಳೂರು ಡಿ.ಸಿ.ಸಿ ಬ್ಯಾಂಕ್. ನಿರ್ದೇಶಕರಾದ ನಿರಂಜನ್ ಬಾವಂತಬೆಟ್ಟು.ಕೃಷಿ ಯಂತ್ರ ಮೇಳ ಉದ್ಘಾಟನೆಯನ್ನು ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ.ಬಲ್ಯೊಟ್ಟು ಹಾಗೂ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕಾರ ಹೇಳಿದರು

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ.ಪದ್ಮು೦ಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 1976 ರಲ್ಲಿ ಪ್ರಾರಂಭಗೊಂಡು ಕಣಿಯೂರು, ಬಂದಾರು, ಮೊಗ್ರು ಈ ಮೂರು ಗ್ರಾಮಗಳ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ನಮ್ಮ ಸಹಕಾರಿ ಸಂಘದ ಮೂಲಕ ಗ್ರಾಮದ ರೈತರ ಕೃಷಿ ಅಭಿವೃದ್ಧಿಗೆ ಪೂರಕವಾಗಿ ಅನೇಕ ಸೌಲಭ್ಯಗಳನ್ನು ನೀಡುವ ಮೂಲಕ ರೈತರ ಪರವಾಗಿ ಕೆಲಸ ಕಾರ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಪ್ರಸ್ತುತ ನಮ್ಮ ಸಂಘವು ಸುಮಾರು 3680 ಸದಸ್ಯರನ್ನು ಒಳಗೊಂಡಿದೆ.

ಸಂಘವು ಪದ್ಮುಂಜ ಪರಿಸರದಲ್ಲಿ ಸುಸಜ್ಜಿತವಾದ ಸ್ವಂತ ಕಟ್ಟಡವನ್ನು ಹೊಂದಿದೆ. ಹಾಗೂ ಬಂದಾರು ಗ್ರಾಮದಲ್ಲಿ ಶಾಖಾ ಕಟ್ಟಡವನ್ನು ಹೊಂದಿರುತ್ತದೆ. ಸಂಘದಲ್ಲಿ ಒಟ್ಟು 18 ಕೋಟಿ ಠೇವಣಿ ಇರುತ್ತದೆ, ಸಂಘದ ಮೂಲಕ ರೈತರಿಗೆ ಕೃಷಿ ಮತ್ತು ಇತರ ಉದ್ದೇಶಕ್ಕಾಗಿ 69 ಕೋಟಿ ಸಾಲವನ್ನು ವಿತರಿಸಲಾಗಿದೆ. ವಾರ್ಷಿಕ 290 ಕೋಟಿ ವಹಿವಾಟು ನಡೆಸಿ ಕಳೆದ ವರ್ಷ 1 ಕೋಟಿ 3 ಲಕ್ಷ ಲಾಭವನ್ನು ಗಳಿಸಿರುತ್ತದೆ. ಸಂಘದ ಮೂಲಕ ಮೂರು ಗ್ರಾಮದ ಜನರಿಗೆ ಪಡಿತರ ವಿತರಣೆ, ರಾಸಾಯನಿಕ ಗೊಬ್ಬರ ಪೂರೈಕೆ, ಕೃಷಿ ಉಪಕರಣ ಇತ್ಯಾದಿಗಳನ್ನು ನಿರಂತರವಾಗಿ ಪೂರೈಸಿಕೊಂಡು ಬಂದಿದೆ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಅಶೋಕ್ ಗೌಡ ಪಾಂಜಾಳ, ನಿದೇಶಕರುಗಳಾದ ರಾಮಣ್ಣ ಮಡಿವಾಳ, ಉದಯ ಕುಮಾರ್, ಶೀಲಾವತಿ ಉಪಸ್ಥಿತರಿದ್ದರು.

Related posts

ವಾಣಿ ಕಾಲೇಜಿನಲ್ಲಿ ಅಕ್ಷರ ವಾಣಿ ಬಿತ್ತಿಪತ್ರಿಕೆ ಅನಾವರಣ

Suddi Udaya

ಮೊಗ್ರು: ಸ.ಕಿ.ಪ್ರಾ. ಶಾಲಾ ಮಟ್ಟದ ಪ್ರತಿಭಾ ಕಾರಂಜಿ ಛದ್ಮವೇಷ ಸ್ಪರ್ಧೆ

Suddi Udaya

ಆಕಸ್ಮಿಕವಾಗಿ ನದಿಗೆ ಬಿದ್ದು ಬಾಲಕ ಸಾವು

Suddi Udaya

ಇಚ್ಚೂರು ಶ್ರೀ ಬಾಲಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯ ಸಂದರ್ಭ ಸುರೇಶ ಪುತ್ತೂರಾಯರಿಗೆ ಸನ್ಮಾನ

Suddi Udaya

ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರಕ್ಕೆ ದ.ಕ. ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಭೇಟಿ

Suddi Udaya

ವೇಣೂರು: ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿ ನಿರಂಜನ್ ಕೆ.ಎಸ್, ಕಾರ್ಯದರ್ಶಿಯಾಗಿ ದಯಾನಂದ ಭಂಡಾರಿ ಆಯ್ಕೆ

Suddi Udaya
error: Content is protected !!