September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜು

ಆರಂಬೋಡಿ ಸ.ಉ.ಪ್ರಾ. ಶಾಲೆಗೆ ಕೊಡುಗೆ ನೀಡಿದ ದಾನಿಗಳಿಗೆ ಅಭಿನಂದನೆ ಸಭೆ

ಆರಂಬೋಡಿ: 2025-526ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಶಾಲೆಗೆ ವಿವಿಧ ಕೊಡುಗೆ ನೀಡಿದ ಗಣ್ಯರಿಗೆ ಅಭಿನಂದನೆ ಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು.

ಮನೋಜ್ ಶೆಟ್ಟಿ ಐತೇರಿ, ರಮೇಶ್ ಅಬುರ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿದರು. ರೋಟರಿ ಕ್ಲಬ್ ಲೋರೆಟ್ಟೋ ಹಿಲ್ಸ್ ಅಧ್ಯಕ್ಷ, ವಕೀಲರು ಸುರೇಶ್ ಶೆಟ್ಟಿ ಶಾಲೆಗೆ ಸೌಂಡ್ಸ್ ಸಿಸ್ಟಮ್ ಕೊಡುಗೆಯಾಗಿ ನೀಡಿದರು. ರಾಘವೇಂದ್ರ ಭಟ್ ಶಾಲಾ ಮಕ್ಕಳಿಗೆ ಛತ್ರಿ ವಿತರಿಸಿದರು.

ಮಂಜುಶ್ರೀ ಎಲೆಕ್ಟ್ರಾನಿಕ್ಸ್ ಮಾಲೀಕ ಗಣೇಶ್ ಪೂಜಾರಿ ಶಾಲಾ ನಲಿ ಕಲಿ ಮಕ್ಕಳಿಗೆ ಟೇಬಲ್ ಮತ್ತು ಕುರ್ಚಿ ನೀಡಿದರು. ಉದ್ಯಮಿ, ಕೃಷಿಕ ಕಿರಣ್ ಕುಮಾರ್ ಮಂಜಿಲ ಶಾಲಾ ಮಕ್ಕಳಿಗೆ ಸ್ಕ್ವಾಡ್ ಡ್ರೆಸ್ ನೀಡಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ವಕೀಲರು ಸುರೇಶ್ ಶೆಟ್ಟಿ ಮತ್ತು ರಾಘವೇಂದ್ರ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಸಂಜೀವ ಶೆಟ್ಟಿ ಅಬುರ, ಮನೋಜ್ ಶೆಟ್ಟಿ ಐತೇರಿ, ರಮೇಶ್ ಅಬುರ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಹಾಸ ಪೂಜಾರಿ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಗಣೇಶ್ ಶೆಟ್ಟಿಗಾರ್, ಪ್ರಭಾಕರ್ ಮೈರಬೆಟ್ಟು, ಸೋಮನಾಥ ಪೂಜಾರಿ ಉಪಸ್ಥಿತರಿದ್ದರು.

ಶಾಲಾ ಮುಖ್ಯಶಿಕ್ಷಕಿ ಸುಶೀಲ ಪ್ರಾಸ್ತಾವಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಲ್ಯಾಸ್ ಅಬ್ದುಲ್ ಹಕೀಂ ಸ್ವಾಗತಿಸಿದರು. ಶಿಕ್ಷಕಿ ವಿಜಯಲಕ್ಷ್ಮಿ ವಂದಿಸಿದರು

Related posts

ಮೇಲಂತಬೆಟ್ಟು: ಪಕ್ಕಿದಕಲ ನವೋದಯ ಯುವಕ & ಯುವತಿ ಮಂಡಲದ 27ನೇ ವರ್ಷದ ಸಾರ್ವಜನಿಕ ಆಟೋಟ ಸ್ಪರ್ಧೆ ಹಾಗೂ ಮೋಟೋಕ್ರಾಸ್ 2025 ಪೋಸ್ಟರ್ ಬಿಡುಗಡೆ

Suddi Udaya

ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಾಹಬ್ಬ 2026

Suddi Udaya

ಮಚ್ಚಿನ ಸರ್ಕಾರಿ ಪ್ರೌಢಶಾಲೆಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ

Suddi Udaya

ಕಸ್ತೂರಿ ರಂಗನ್ ಸೂಕ್ಷ್ಮ ವಲಯ ಪ್ರದೇಶ ಜಾರಿ ವಿರೋಧಿಸಿ ಭಾರತೀಯ ಕಿಸಾನ್ ಸಂಘದಿಂದ ಪ್ರತಿಭಟನೆ ; ತಹಶೀಲ್ದಾರರಿಗೆ ಮನವಿ

Suddi Udaya

ಎಸ್.ಡಿ.ಎಂ ಕಾಲೇಜಿನಲ್ಲಿ ರೋವರ್ಸ್ & ರೇಂಜರ್ಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ: ಪ್ರತಿಜ್ಜಾ ವಿಧಿ ಸ್ವೀಕಾರ, ಬಿತ್ತಿ ಪತ್ರಿಕೆ ಅನಾವರಣ

Suddi Udaya

ಬೆಂಗಳೂರು ಜೈ ತುಲುನಾಡ್ ನೇತೃತ್ವದಲ್ಲಿ ತುಲುನಾಡ ಆಟಿ: ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಭಾಗಿ

Suddi Udaya
error: Content is protected !!