ಬೆಳ್ತಂಗಡಿ: ಕಪುಚಿನ್ ಕೃಷಿಕ್ ಸೇವಾ ಕೇಂದ್ರ ದ ಅಂಗ ಸಂಸ್ಥೆಯಾದ ದಯಾ ವಿಶೇಷ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿದ ರೆ. ಫಾ. ಪೌಲ್ ಮೆಲ್ವಿನ್ ಡಿಸೋಜ ಹೋಲಿ ಟ್ರಿನಿಟಿ ಕರ್ನಾಟಕ ಉಪಪ್ರಾಂತ್ಯಧಿಕಾರಿ ಮಾತನಾಡಿ ದಯಾ ವಿಶೇಷ ಶಾಲೆಯು ದಿವ್ಯಂಗ ಮಕ್ಕಳಿಗೊಸ್ಕರ ಸ್ಥಾಪಿತವಾಗಿದ್ದು,
ಫಾದರ್ ವಿನೋದ್ ರವರು ತುಂಬ ಕಷ್ಟಪಟ್ಟಿದ್ದಾರೆ, ಫಾದರ್ ಮೊದಲು ಬೆಳ್ತಂಗಡಿ ವಲಯದಲ್ಲಿ ಸಮಾಜ ಸೇವೆ ಮಾಡುತ್ತಿದ್ದು, ಇಲ್ಲಿನ ದಿವ್ಯಂಗ ಮಕ್ಕಳು ಇರುವುದರ ಕುರಿತು ಸೇವೆ ಮಾಡಬೇಕು ಎಂಬುದಾಗಿ ಅವರ ಮನಸ್ಸಿಗೆ ಬಂದಿದೆ. ಅವರು ಪ್ರೇರಣೆ ಮತ್ತು ಮನ್ನಣೆ ಹಾಗೂ ನಾಕಣೆಯಿಂದ ಸೇವೆಯನ್ನು ಪ್ರಾರಂಭಿಸಿದರು. ಈ ಸಂಸ್ಥೆಯು 15 ಮಕ್ಕಳಿಂದ ಪ್ರಾರಂಭವಾಗಿ ಇಂದು 150 ಮಕ್ಕಳು ಇದ್ದಾರೆ. ಇವರ ಪ್ರಗತಿಯಲ್ಲಿ ತುಂಬ ಬೆಳೆವಣಿಗೆಯನ್ನು ತಂದಿದೆ. ಕೊವಿಡ್ ಸಮಯದಲ್ಲಿ ಮುಂಜಾಗ್ರತೆ ಕ್ರಮ ತೆಗೆದುಕೊಂಡು ಎಲ್ಲಾ ಮಕ್ಕಳಿಗೆ ಪರೀಕ್ಷೆ ಬರೆಸಿ ಎಲ್ಲಾ ಮಕ್ಕಳು ಪಾಸಗಿದ್ದಾರೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿರುಪಾಕ್ಷಪ್ಪ ಮಾತಾನಾಡಿ ಬದುಕಬೇಕಾದರೆ ಶಿಕ್ಷಣ ಬೇಕು, ಕೆಲಸವನ್ನು ಮಾಡಬೇಕಾದರೆ ಬೇಕಾದ ಮನಸ್ಸು ಇರಬೇಕು. ಅದು ಶಿಕ್ಷಕರಿಗೆ ಇದೆ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂಬುದಾಗಿ ತಿಲಿಸಿದರು.
ದಾನಿ ಸಂಸ್ಥೆಯಾದ KCWA ಇದರ ಸಕ್ರಿಯಾ ಸದಸ್ಯರಾದ ಲಾನ್ಸಿ ರೊಡ್ರಿಗಸ್ ರವರು ದಯಾ ಶಾಲೆಯಲ್ಲಿ ಪ್ರತಿಯೊಂದು ಮಗುವನ್ನು ಮುಖ್ಯ ವಾಹಿನಿಗೆ ತರುವ ಸೇವೆ ಶ್ಲಾಘನೀಯವಾದದ್ದು. ನಾವು ಅತ್ಯಲ್ಪ ಧನ ಸಹಾಯ ಮಾಡಿದರೂ, ದಯಾ ಸಂಸ್ಥೆ ನೀಡುವ ಸೇವೆ ಅತ್ಯಮೂಲ್ಯವಾದದ್ದು. ಈ ಸೇವೆಯ ಘನತೆ ಗೌರವ ಅವರಿಗೆ ಸಲ್ಲವಂತದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತೀಯ ಸ್ಟೇಟ್ ಬ್ಯಾಂಕ್ ವ್ಯವಸ್ಥಪಕರಾದ ಪದ್ಮನಾಭ ನಾಯಕ್ ರವರು ದಿವ್ಯಾಂಗರ ಸೇವೆ ಮಾಡಬೇಕಾದರೆ ತಾಳ್ಮೆ ಸಹನೆಗೆ ಇತಿ ಮಿತಿ ಇಲ್ಲ. ಇದನ್ನೆ ಈ ಸಂಸ್ಥೆ ನೀಡುತಿದೆ ಎಂದರು.
ಪ್ರಾಸ್ತವಿಕ ಭಾಷಣದಲ್ಲಿ ವಂ. ಫಾ|| ವಿನೋದ್ ಮಸ್ಕರೇನ್ಹಸ್ ಗಡಿಯಲ್ಲಿ ಸೈನಿಕರು ಗಡಿರಕ್ಷಣೆ ಮಾಡಿ ದೇಶ ಸೇವೆ ಮಾಡುತ್ತಾರೆ, ಏಕೆಂದರೆ ಗಡಿ ಒಳಗಡೇ ಆ ದೇಶದ ಒಳಗಡೆ ಮಹಿಳೆಯರು ಮಕ್ಕಳು ಬಲಹಿನರು ಇದ್ದಾರೆ. ದಯಾ ಸಂಸ್ಥೆಯಲ್ಲಿ ವಿವಿಧ ಸಿಬಂದಿಗಳು ನಿರಂತರವಾಗಿ ಮಾಡುತ್ತಿರುವ ಸೇವೆಯು ಉತ್ತಮ ದೇಶ ಪ್ರೇಮವಾಗಿದೆ ಎಂದು ವ್ಯಕ್ಯನಿಸಿದರು.
ವೇದಿಕೆಯಲ್ಲಿ ದಯಾ ಶಾಲೆಯ ಮಖ್ಯ ಶಿಕ್ಷಕಿ ದಿವ್ಯರವರು ವಾರ್ಷಿಕ ವರದಿ ವಿತ್ತರು, ಸಂಸ್ಥೆಯ ಸಹ ಶಿಕ್ಷಕಿಯಾದ ರಶ್ಮಿ ಮತ್ತು ಐಶ್ವರ್ಯ ರವರು ಕಾರ್ಯ
ನಿರೂಪಣೆ ಮಾಡಿದರು. ಧನ್ಯರವರು ಧನ್ಯವಾದ ನೀಡಿದರು.ತದನಂತರ ಶಾಲಾ ಮಕ್ಕಳಿಂದ ವರ್ಣರಂಜಿತ ಸಂಸ್ಕೃತಿಕ ಕಾರ್ಯಕ್ರಮ ನೆರವೆರಿಸಲಾಯಿತು.