24.4 C
ಪುತ್ತೂರು, ಬೆಳ್ತಂಗಡಿ
April 4, 2025
ಅಪರಾಧ ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಸರ್ಕಾರಿ ಇಲಾಖಾ ಸುದ್ದಿ

ಅಕ್ರಮ ಮದ್ಯ ಮಾರಾಟ ಪೊಲೀಸರ ದಾಳಿ

ಬೆಳ್ತಂಗಡಿ: ತಾಲೂಕಿನ ವಿವಿಧ ಕಡೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮೂರು ಪ್ರಕರಣಗಳನ್ನು ಪತ್ತೆ ಹಚ್ಚಿದ ಪೊಲೀಸರು ಸಾವಿರಾರು ರೂ.ಗಳ ಮದ್ಯ ಸಹಿತ ಸೋತ್ತುಗಳನ್ನು ವಶಪಡಿಸಿಕೊಂಡ ಘಟನೆ ಮಾ.4ರಂದು ವರದಿಯಾಗಿದೆ.

ಪಣಕಜೆಯಲ್ಲಿ ಅಕ್ರಮ ಮದ್ಯ ಮಾರಾಟ ಪತ್ತೆ :-

ಪೂಂಜಾಲಕಟ್ಟೆ ಪೊಲೀಸ್ ಠಾಣೆಯ
ಉಪನಿರೀಕ್ಷಕ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳು ಮಾ.04 ರಾತ್ರಿ ರೌಂಡ್ಸ್ ರುವ ಸಮಯ, ಜೆರಾಲ್ಡ್‌ ಪಿಂಟೋ ಎಂಬಾತ ಸೋಣಂದೂರು ಗ್ರಾಮದ ಪಣಕಜೆ ಎಂಬಲ್ಲಿರುವ ತನ್ನ ಮನೆಯ ಹಿಂಬದಿಯ ಶೆಡ್‌ ನ ಬಳಿಯಲ್ಲಿ ಇರುವ ಬಾಳೆ ಗಿಡಗಳ ಮಧ್ಯದಲ್ಲಿ ಅಕ್ರಮವಾಗಿ ಮದ್ಯವನ್ನು ಶೇಖರಿಸಿಟ್ಟು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಮನೆಯ ಹಿಂಬದಿಯಲ್ಲಿರುವ ಶೆಡ್‌ ಬಳಿ ತೆರಳಿ ದಾಳಿ ನಡೆಸಿದಾಗ ಆರೋಪಿಯು ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದು, ಸ್ಥಳದಲ್ಲಿದ್ದ ವಿವಿಧ ಬಗೆಯ ಒಟ್ಟು ಅಂದಾಜು ರೂ 4,055 ಮೌಲ್ಯದ‌ ಮದ್ಯದ ಬಾಟಲಿಗಳನ್ನು ವಶಪಡಿಸಿ
ಕೊಂಡಿದ್ದಾರೆ. ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಜಿರೆ ಅಂಗಡಿಯೊಂದರಲ್ಲಿ ಮದ್ಯ ಮಾರಾಟ ಪತ್ತೆ:-

ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ
ಶ್ರೀಶೈಲ ದುಂಡಪ್ಪ ಮುರಗೋಡು ಅವರು ‌ತಮ್ಮ‌ ಸಿಬ್ಬಂದಿಗ
ಳೊಂದಿಗೆ ಮಾ.04 ರಂದು ಸಂಜೆ ರೌಂಢ್ಸ್ ನಲ್ಲಿರುವ ಬಜಿರೆ ಗ್ರಾಮದ ಮಿಯಲಾಜೆ ಎಂಬಲ್ಲಿರುವ ಅಂಗಡಿಯೊಂದರಲ್ಲಿ ಗುಂಡೂರಿ ಗ್ರಾಮದ ಸುಂದರ ಎಂಬಾತ
ಯಾವುದೇ ಪರವಾನಿಗೆ ಇಲ್ಗದೆ ಮಾರಾಟಕ್ಕಾಗಿ ಅಕ್ರಮವಾಗಿ ತಂದಿಟ್ಟಿದ್ದ ಸುಮಾರು ರೂ. 1,440 ಮೌಲ್ಯದ‌ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಳಂತಿಲ ಪಿದಮಲೆಯಲ್ಲಿ ಅಕ್ರಮ ಮದ್ಯ ಮಾರಾಟ ಪತ್ತೆ

ಉಪ್ಪಿನಂಗಡಿ ಪೊಲೀಸರು ಮಾ.
04 ರಂದು ಇಳಂತಿಲ ಗ್ರಾಮದ ಪೆದಮಲೆ ಎಂಬಲ್ಲಿ ದಾಳಿ ನಡೆಸಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಗಿರಾಕಿಗಳಿಗೆ ಮದ್ಯ ಸರಬರಾಜು ಮಾಡುತ್ತಿದ್ದ, ಬಾರ್ಯ ಗ್ರಾಮದ ನಿವಾಸಿ ಉಮೇಶ ಪೂಜಾರಿ ಎಂಬಾತನನ್ನು ಬಂಧಿಸಿ, ಅತನ ಬಳಿಯಿದ್ದ , ಮದ್ಯ, ಮೋಟಾರ್ ಸೈಕಲ್ ಸಹಿತ ಒಟ್ಟು ರೂ. 21,952 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ಬಗ್ಗೆದಾಖಲಾಗಿದೆ.

Related posts

ಮೊಗ್ರು: ಸ.ಕಿ.ಪ್ರಾ. ಶಾಲಾ ಮಟ್ಟದ ಪ್ರತಿಭಾ ಕಾರಂಜಿ ಛದ್ಮವೇಷ ಸ್ಪರ್ಧೆ

Suddi Udaya

ಬೆಳ್ತಂಗಡಿ ಬಿಜೆಪಿ ಕಛೇರಿಯಲ್ಲಿ ಸುಶಾಸನ‌ ದಿನ ಆಚರಣೆ

Suddi Udaya

ಉಜಿರೆ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಭಟ್ ರವರ “ಅಮ್ಮ ಹೇಳಿದ ಕತೆಗಳು” ಪುಸ್ತಕ ಬಿಡುಗಡೆ

Suddi Udaya

ಬೆಳ್ತಂಗಡಿ ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ಧರ್ಮಸ್ಥಳ ಗ್ರಾಮ ಸಮಿತಿ ರಚನೆ

Suddi Udaya

ಫೆ 14, 15: ಮುಗೇರಡ್ಕ ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿ ರಜತ ಸಂಭ್ರಮದ ಪ್ರಯುಕ್ತ ರಜತ ಪಥ : ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ: ಮಹಿಳಾ ವೃಂದ ನೂತನ ಕಟ್ಟಡ ಉದ್ಘಾಟನೆ

Suddi Udaya
error: Content is protected !!