September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಶಾಲಾ ಕಾಲೇಜು

ಮಂಜೊಟ್ಟಿ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ

ಮಂಜೊಟ್ಟಿ : ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ, ರಝ ಗಾರ್ಡನ್ ಮಂಜೊಟ್ಟಿ ಇದರ 2022-23 ನೇ ಸಾಲಿನ ಶಾಲಾ ಟ್ರಸ್ಟ್ ಮತ್ತು ಪೋಷಕರ ವಾರ್ಷಿಕ ಮಹಾಸಭೆಯು ದಿನಾಂಕ 6.3.2023 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.

ಸಭೆಯ ವೇದಿಕೆಯಲ್ಲಿ ಶಾಲಾ ಆಡಳಿತ ಟ್ರಸ್ಟ್ ನಿರ್ದೇಶಕರಾದ ಶ್ರೀಯುತ ಶೇಖ್ ಅಹಮದ್, ಕಾರ್ಯದರ್ಶಿಯಾದ ಶ್ರೀಯುತ ಸೈಯದ್ ಆಯುಬ್ ಕೋಶಾಧಿಕಾರಿಯಾಗಿ ಶ್ರೀಯುತ ಸೈಯದ್ ಇರ್ಫಾನ್ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಾಕಿನ್ ಬಿನ್, ಹಾಗೂ ಶಾಲಾ ಅರೇಬಿಕ್ ಶಿಕ್ಷಣದ ಮುಖ್ಯ ಗುರುಗಳಾದ ಶ್ರೀಯುತ ಅಬ್ದುಲ್ ರಜಾಕ್ ಇಮ್ದಾದಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಾಕಿನ್ ಬಿನ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಲ್ಲಿನ ಶಿಸ್ತು ಮತ್ತು ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರು ಶಿಕ್ಷಕರೊಂದಿಗೆ ಕೈಜೋಡಿಸಬೇಕು. ವಿದ್ಯಾ ಸಂಸ್ಥೆಯ ಪ್ರಗತಿಗೆ ನಾವೆಲ್ಲರೂ ಒಟ್ಟಾಗಿ ದುಡಿಯಬೇಕು ಎಂದರು. ಹಾಗೂ 2022 23ನೇ ಸಾಲಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ವಿಶೇಷ ಸಮಾಲೋಚನೆ ನಡೆಸಿದರು. ಆಡಳಿತ ಟ್ರಸ್ಟಿನ ನಿರ್ದೇಶಕರಾದ ಶ್ರೀಯುತ ಶೇಕ್ ಅಹಮದ್ ಮಾತನಾಡಿ ” ಪೋಷಕರು ತಮ್ಮ ಮಕ್ಕಳ ಜೊತೆ ಬೆರೆತು ಕಳೆಯುವ ಅಲ್ಪ ಸಮಯವೇ ಮಗುವಿನ ಉತ್ತಮ ಭವಿಷ್ಯವನ್ನು ರೂಪಿಸುತ್ತದೆ ” ಎಂದರು. ಆಡಳಿತ ಟ್ರಸ್ಟ್ ನ ಕಾರ್ಯದರ್ಶಿ ಶ್ರೀಯುತ ಸಯ್ಯದ್ ಅಯುಬ್ ವಿದ್ಯಾ ಸಂಸ್ಥೆಯ ಅಭಿವೃದ್ಧಿಗೆ ಹಾಗೂ ಸರ್ವತೋಮುಖ ಏಳಿಗೆಗೆ ಪೋಷಕರು ತಮ್ಮನ್ನು ತೊಡಗಿಸಿಕೊಳ್ಳುವಂತೆ ವಿನಂತಿಸಿಕೊಂಡರು. ಪೋಷಕರು ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವುದರ ಮೂಲಕ ಸಭೆಗೆ ವಿಶೇಷ ಮೆರುಗನ್ನು ನೀಡಿದರು. ಮುಖ್ಯೋಪಾಧ್ಯಾಯಿನಿ ಯವರ ಧನ್ಯವಾದ ಮಾತುಗಳೊಂದಿಗೆ ಸಭೆಯು ಮುಕ್ತಾಯವಾಯಿತು.

Related posts

ಉಜಿರೆ : ‘ಲಿಂಗಸೂಕ್ಷ್ಮತೆ ಅರಿವು ‘ ತರಬೇತಿ ಕಾರ್ಯಕ್ರಮದ ಸಮಾರೋಪ

Suddi Udaya

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಆರ್ಥಿಕ ನೆರವು

Suddi Udaya

ಧರ್ಮಸ್ಥಳ: ಡಾ.ಹೆಗ್ಗಡೆಯವರ ರಾಜ್ಯ ಸಭಾ ನಿಧಿಯಿಂದ 100 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಮಂಜೂರು

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ಉಡುಪಿ, ದ.ಕ ಸಾಧನೆಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಶ್ಲಾಘನೆ

Suddi Udaya

ನಾಳೆ (ಅ.30): ವಿದ್ಯುತ್ ನಿಲುಗಡೆ

Suddi Udaya

ಎಳನೀರು ಅರಣ್ಯ ಪ್ರದೇಶದಲ್ಲಿ ಬೆಂಕಿ

Suddi Udaya
error: Content is protected !!