37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ

ಲಾಯಿಲ: ವಿಶ್ವಮಟ್ಟದ ಸ್ಥಾನಿಕ ಬ್ರಾಹ್ಮಣ ಸಮಾವೇಶ

ಬೆಳ್ತಂಗಡಿ: ಸಮಾಜದ ಅಭಿವೃದ್ಧಿಗೆ ಯಾವುದರಿಂದ ಸಾದ್ಯವೋ ಅದನ್ಬು ಮಾಡಬೇಕು.ಐಕ್ಯತೆ ಇದ್ದಾಗ ಸಮಾಜದ ಅಭಿವೃದ್ಧಿ ಸಾದ್ಯ.ಬ್ರಾಹ್ಮಣ ಪದ್ದತಿಗಳನ್ನು ಯತವತ್ತಾಗಿ ಆಚರಿಸುವ ಮೂಲಕ ಸಂಸ್ಕಾರ ಬೆಳೆಸಬೇಕು.ಅದರಲ್ಲು ಶಿಕ್ಷಣದೊಂದಿಗೆ ಜಪ ,ತಪ,ಹಿಂದಿನ ಶಾಸ್ರ ಪುರಾಣಗಳನ್ನು ಮಕ್ಜಳಿಗೆ ಕಳಿಸಿ ಅವರನ್ನು ಸಮಾಜದಲ್ಲಿ ಸಂಸ್ಕಾರಯುತ ಪ್ರಜೆಗಳನ್ನಾಗಿಸುವುದು ಹೆತ್ತವರ ಕರ್ತವ್ಯ ಎಂದು ಶ್ರಿ ಶೃಂಗೇರಿ ಶಾರದಾ ಪೀಠಾದೀಶ್ವರರಾದ ತತ್ಕರ ಕಮಲ ಸಂಜಾತರಾದ ಜಗದ್ಗುರು ಶ್ರೀ ವಿದುಶೇಖರ ಭಾರತೀ ಶ್ರಿಗಳು ನುಡಿದರು.

ಅವರು ಮಾ.5ರಂದು ಲಾಯಿಲ ಶ್ರಿ ಸುಬ್ರಹ್ಮಣ್ಯ ಸಭಾಭಾವನದಲ್ಲಿ ಎರಡು ದಿನ ನಡೆದ ವಿಶ್ವ ಮಟ್ಟದ ಸ್ಥಾನಿಕ ಬ್ರಾಹ್ಮಣ ಸಮಾವೇಶದಲ್ಲಿ ಆಶೀರ್ವಚನ ನೀಡುತ್ತಾ ಶಾಸ್ತ್ರಗಳ ಪಲ ದೀರ್ಘಕಾಲ ಇದನ್ನು ಅದ್ಯಯನ ಮಾಡಬೇಕು,ಸಾಂಪ್ರದಾಯಿಕ ಆಚರಣೆಗಳು ನಮ್ಮದಾಗಬೇಕು .ಜೀವನದಲ್ಲಿ ಭಾಗ್ಯವಸ್ತುಗಳು ಸಿಗಲು ದರ್ಮಮಾರ್ಗದಲ್ಲಿ ನಡೆಯಬೇಕು.ಮಕ್ಕಳಿಗೆ ಕನಿಷ್ಟ ಸಾಂಪ್ರದಾಯಿಕ ಶಿಕ್ಷಣ ಕಲಿಸಬೇಕು ಆ ಮೂಲಕ ಮಕ್ಕಳನ್ನು ಸಮಾಜದ ಶ್ರೇಷ್ಠ ವ್ಯಕ್ತಿಗಳನ್ನಾಗಿಸಬೇಕು.ಸಂಪ್ರದಾಯ ಕ ಶಿಕ್ಷಣ ಪ್ರತಿ ಮನೆಯಲ್ಲಿ, ಪ್ರತಿ ಊರಿನಲ್ಲಿ ನಡೆಯಲಿ ಎಂದರು.ಸಮ್ಮೇಳನದಿಂದ ಸಮಾಜ ಐಕ್ಯಮತವಾಗಿ ಬೆಳೆಯಲಿ.ಬೆಳ್ತಂಗಡಿ ಯ ಸ್ಥಾನಿಕ ಸಮಾಜ ಮಠದೋಂದಿಗೆ ಗೌರವ ಭಾವನೆ ಹೊಂದಿದ್ದು ಇದರಿಂದಾಗಿ ಇಲ್ಲಿಗೆ ಪ್ರೀತಿಯಿಂದ ಬಂದಿದ್ದೇನೆ.ಇಲ್ಲಿನ ಶಾಸಕ ಹರೀಶ್ ಪೂಂಜಾ ಸಮಾಜಕ್ಕೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ ಅಲ್ಲದೆ ಮಠಕ್ಕೆ ರಾಜಕೀಯ ವ್ಯಕ್ತಿಯಾಗಿ ಬರದೆ ಭಕ್ತನಾಗಿ ಬರುತ್ತಾ ಮಠದಲ್ಲಿ ಗೌರವ ಭಾವನೆ ಹೊಂದಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಉಡುಪಿ ಚಿಟ್ಟಾಡಿ ಸರ್ವೋತ್ತಮ ರಾವ್ ರವರಿಗೆ ಸ್ಥಾನಿಕರತ್ನ ಪ್ರಶಸ್ತಿ ನೀಡಲಾಯಿತು.ಉಡುಪಿ ಸ್ಥಾನಿನ ಸಮಾಜದ ನಿವೇಶಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಶ್ರಿಗಳು ಗೌರವಿಸಿದರು.ಶ್ರಿಗಳನ್ನು ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು. ಕಾರ್ಯಕ್ರಮದಲ್ಲಿ ಸಮಾವೇಶದ ಪ್ರಮುಖರಾದ ಎನ್ ಕೆ ಜಗನ್ನಿವಾಸ ರಾವ್ ಪುತ್ತೂರು, ಪಿ ರಾದಾ ಕೃಷ್ಣರಾವ್ ಧರ್ಮಸ್ಥಳ,ಪಿ ಲಕ್ಷ್ಮೀ ನಾರಾಯಣ ರಾವ್ ಧರ್ಮಸ್ಥಳ, ಎಂ ಎಸ್ ಅರುಣ್ ಕುಮಾರ್,ಮಮತಾ ಹರೀಶ್ ರಾವ್,ಎಂ ದೇವಾನಂದ ಭಟ್ ಬೆಳುವಾಯಿ,ಉದಯ ಬಾರ್ಕೂರು ಉಡುಪಿ,ಡಾ ವೈ ಸುದರ್ಶನ್ ರಾವ್ ಉಡುಪಿ,ಕೆ.ಮುರಳಿದರ ರಾವ್ ನಿಟ್ಟೆ ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಂ ದೇವಾನಂದ ಭಟ್ ಸ್ವಾಗತಿಸಿ .ಬಿ ಕೆ ದನಂಜಯ್ ರಾವ್ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ರವರಿಂದ ಮತದಾನ

Suddi Udaya

ಪುತ್ತೂರು ವಿವೇಕಾನಂದ ಕಾಲೇಜಿನ ನವಯುಗ ಕಾರ್ಯಕ್ರಮ

Suddi Udaya

ಬಂದಾರು: ಬಟ್ಲಡ್ಕ ಜುಮಾ ಮಸೀದಿಯಲ್ಲಿ ಉರೂಸ್ ಕಾರ್ಯಕ್ರಮದ ಉದ್ಘಾಟನೆ

Suddi Udaya

ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕೆ.ವಿ ಪ್ರಸಾದ್ ಇಲಂತಿಲ ರವರು ಬಿಜೆಪಿ ಮುಂದಿನ 6ವರ್ಷಗಳ ಅವಧಿಗೆ ಸದಸ್ಯತ್ವ ಹಾಗೂ ಇತರ ಎಲ್ಲಾ ಜವಾಬ್ದಾರಿಗಳಿಂದ ವಜಾ

Suddi Udaya

ವೇಣೂರು ಮಹಾಮಸ್ತಕಾಭೀಷೇಕ ಮಹೋತ್ಸವ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಆಮಂತ್ರಣ

Suddi Udaya

ಪುಂಜಾಲಕಟ್ಟೆ ಸ. ಪ್ರ. ದರ್ಜೆ ಕಾಲೇಜಿನ ಮೂಲಭೂತ ಸೌಕರ್ಯದ ಉದ್ದೇಶಕ್ಕೆ ಸರಕಾರದಿಂದ ರೂ. 1 ಕೋಟಿ ಅನುದಾನ ಬಿಡುಗಡೆ : ಹರೀಶ್ ಪೂಂಜ

Suddi Udaya
error: Content is protected !!