37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ

ಜಿಲ್ಲಾ ಮಟ್ಟದ ಪ್ರಶಸ್ತಿ ಪತ್ರವನ್ನು ಜಿಲ್ಲಾಧಿಕಾರಿ ಡಾ ರವಿಕುಮಾರ್ ವಿತರಿಸಿದರು.

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಶ್ರೀ ಮಂಜುನಾಥ ದಳದ ಕಬ್ ಹಾಗೂ ಬುಲ್ ಬುಲ್ ವಿದ್ಯಾರ್ಥಿಗಳಾದ ರಿಷಾನ್ ಶೆಟ್ಟಿ , ಅದ್ವಿತ್ ಪೂಜಾರಿ , ದಿಶಾ ಡಿ ಎ , ಅಭಿಜ್ಞ , ಉನ್ನತಿ ಎಸ್ ಅಮೀನ ನೆಬೀಸಾ ಶೈಭಾ ಇವರುಗಳು ಜಿಲ್ಲಾಧಿಕಾರಿಯವರ ನಿವಾಸದಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾನ್ಯ ಜಿಲ್ಲಾಧಿಕಾರಿಗಳಾದ ಡಾ ರವಿಕುಮಾರ್ ರವರಿಂದ ಜಿಲ್ಲಾಮಟ್ಟದ ಪ್ರಶಸ್ತಿ ಪತ್ರವನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಡಾ. ಕುಮಾರ್ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತ್ ದ.ಕ, ಡಾ ಎಂ ಮೋಹನ್ ಆಳ್ವ ಜಿಲ್ಲಾ ಮುಖ್ಯ ಆಯುಕ್ತರು ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಂಸ್ಥೆ ಮಂಗಳೂರು , ಜಿಲ್ಲಾ ಕಾರ್ಯದರ್ಶಿ ಎಂಜಿ ಕಜೆ , ಜಿಲ್ಲಾ ಸ್ಕೌಟ್ ಗೈಡ್ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ ಕಾರ್ಯದರ್ಶಿ, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ಗೈಡ್ ಸಂಯೋಜನಕ ಶಿಕ್ಷಕಿ ಪ್ರಮೀಳ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ. ಅಲ್ಲದೆ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ ಸದಾ ಸಹಕಾರವನ್ನು ನೀಡುತ್ತಿದ್ದಾರೆ

Related posts

ಮುಂಡಾಜೆ : ಹೆದ್ದಾರಿ ಸೇತುವೆಯ ಕಾಮಗಾರಿಯ ವೇಳೆ ಹಿಟಾಚಿ ಪಲ್ಟಿ

Suddi Udaya

ಮದ್ದಡ್ಕದಲ್ಲಿ ಸ್ಕೂಟಿ ಹಾಗೂ ಆಪೆ ರಿಕ್ಷಾ ಡಿಕ್ಕಿ

Suddi Udaya

ಬೆಳ್ತಂಗಡಿ: ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಕೆ ಗಂಗಾಧರ ಗೌಡರವರ ನೂತನ ಕಛೇರಿ ಉದ್ಘಾಟನೆ

Suddi Udaya

ಅರಸಿನಮಕ್ಕಿ: ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ: ಚಂಡಿಕಾ ಹೋಮ, ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಬೆಳಕು ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ಸಿಇಟಿ ನೀಟ್ ತರಗತಿಯ ಉದ್ಘಾಟನೆ

Suddi Udaya
error: Content is protected !!