April 2, 2025
ಅಪರಾಧ ಸುದ್ದಿ

ಕಲ್ಮಂಜ ನಿಡಿಗಲ್‌ನಲ್ಲಿ ಭೀಕರ ವಾಹನ ಅಪಘಾತ ಬೈಕ್‌ ಮತ್ತು ಸ್ಕಾಪಿ೯ಯೋ ನಡುವೆ ಅಪಘಾತ

ಬೆಳ್ತಂಗಡಿ: ಮಂಗಳೂರು- ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಮಂಜ ಗ್ರಾಮದ ನಿಡಿಗಲ್‌ ಎಂಬಲ್ಲಿ ಬೈಕ್‌ ಹಾಗೂ ಸ್ಕಾಪಿ೯ಯೋ ವಾಹನಗಳ ನಡುವೆ ನಡೆದ ಸಂಭವಿಸಿದ ಭೀಕರ ರಸೆ ಅಪಘಾತದಲ್ಲಿ ಬೈಕ್‌ ಸವಾರ ದಾರುಣವಾಗಿ ಮೃತ ಪಟ್ಟ ಘಟನೆ ಇಂದು ಮಾ.7ರಂದು ಬೆಳಿಗ್ಗೆ ನಡೆದಿದೆ.

ಕಲ್ಮಂಜ ಗ್ರಾಮದ ಎಲೆಂಗಿ ಮನೆ ನಿವಾಸಿ ಮುಂಡಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಕಾಯ೯ದಶಿ೯ಯಾಗಿ ಸೇವೆ ಸಲ್ಲಿಸುತ್ತಿದ್ದ ಅಶೋಕ್‌ ಕುಮಾರ್‌ (55ವ) ಈ ದುಘ೯ಟನೆಯಲ್ಲಿ ಸಾವನ್ನಪ್ಪಿದ ನತದೃಷ್ಟರಾಗಿದ್ದಾರೆ. ಇವರು ಬೆಳಿಗ್ಗೆ ಮುಂಡಾಜೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಎಂದಿನಂತೆ ಕತ೯ವ್ಯಕ್ಕೆ ಹೋಗುತ್ತಿರುವ ಸಂದಭ೯ದಲ್ಲಿ ಈ ದುರಂತ ಸಂಭವಿಸಿದೆ. ತಮ್ಮ ಬೈಕ್‌ನಲ್ಲಿ ಮುಂಡಾಜೆಗೆ ಹೋಗುತ್ತಿರುವ

ಸಂದಭ೯ದಲ್ಲಿ ಎದುರಿನಿಂದ ಬರುತ್ತಿದ್ದ ಸ್ಕಾಪಿ೯ಯೋ ವಾಹನ ಹಾಗೂ ಬೈಕ್‌ ನಡುವೆ ಅಪಘಾತವಾಗಿ, ಗಂಭೀರ ಗಾಯಗೊಂಡ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತಾದರೂ, ಯಾವುದೇ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರೆನ್ನಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Related posts

ನಿವೃತ್ತ ಯೋಧ ದಿನೇಶ್ ಮೂಲ್ಯಹೃದಯಾಘಾತದಿಂದ ನಿಧನ

Suddi Udaya

ಗಾಂಜಾ ನಶೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಯುವಕ ಪೊಲೀಸ್ ವಶ: ಚಿಕ್ಕಮಗಳೂರು ದೊನಿಗದ್ದೆ ನಿವಾಸಿ ಸಂತೋಷ್ ಬಂಧನ

Suddi Udaya

ಮಿತ್ತಬಾಗಿಲು: ಕೊಳಂಬೆ ನಿವಾಸಿ ವಿದ್ಯಾ ನೇಣು ಬಿಗಿದು ಆತ್ಮಹತ್ಯೆ

Suddi Udaya

ರಸ್ತೆ ಬದಿ ವಾಹನಕ್ಕಾಗಿ ತನ್ನ ತಾಯಿ ಜೊತೆ ಕಾಯುತ್ತಿದ್ದ ಪುಟ್ಟ ಬಾಲಕಿ ಸಾತ್ವಿಕಾ ದ್ವಿಚಕ್ರ ವಾಹನ ‌ ಡಿಕ್ಕಿ ಹೊಡೆದು ಗಾಯಗೊಂಡು ಆಸ್ಪತ್ರೆಗೆ

Suddi Udaya

ನಾರಾವಿ ಅರಸು ಕಟ್ಟೆಯಲ್ಲಿ ಗೂಡ್ಸ್ ಟೆಂಪೋ ಗೆ ಬೈಕ್ ಡಿಕ್ಕಿ : ಬೈಕ್ ಸವಾರ ಜೋಕಿ ರೋಡ್ರಿಗಸ್‌ ಸ್ಥಳದಲ್ಲೇ ಸಾವು

Suddi Udaya

ಎಂಟು ವರ್ಷಗಳಿಂದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Suddi Udaya
error: Content is protected !!