35.1 C
ಪುತ್ತೂರು, ಬೆಳ್ತಂಗಡಿ
April 11, 2025
ತಾಲೂಕು ಸುದ್ದಿ

ಔಷಧ ದಾನಕ್ಕಾಗಿ ಕ್ಷೇತ್ರದಿಂದ ವಾರ್ಷಿಕವಾಗಿ ರೂ.2ರಿಂದ 3 ಕೋಟಿ ರೂ. ಅನುದಾನ: ಡಾ.ಹೆಗ್ಗಡೆ

ಉಜಿರೆ: ಧಾರವಾಡದ ಮೆಡಿಕಲ್ ಕಾಲೇಜಿನಲ್ಲಿ ಎಲ್ಲಾ ಸೌಲಭ್ಯಗಳನ್ನೊಳಗೊಂಡ ಬೃಹತ್ ಆಸ್ಪತ್ರೆ ನಿರ್ಮಿಸುವ ಯೋಜನೆಗೆ ಈ ಎಪ್ರಿಲ್ ನಲ್ಲಿ ಚಾಲನೆ ದೊರೆಯಲಿದೆ. ಔಷಧ ದಾನಕ್ಕಾಗಿ ಕ್ಷೇತ್ರದಿಂದ ವಾರ್ಷಿಕವಾಗಿ ಎರಡರಿಂದ ಮೂರು ಕೋಟಿ ರೂ. ಒದಗಿಸಲಾಗುತ್ತದೆ. ಸುರಕ್ಷಾ ಯೋಜನೆ ಮೂಲಕವೂ ಅನೇಕ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಮಂಗಳವಾರ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
“ಆರೋಗ್ಯ ವಿಮೆ ಬಗ್ಗೆ ಯಾರು ಉದಾಸೀನ ತೋರಬಾರದು. ಆಪತ್ಕಾಲಕ್ಕೆ ಇದು ಸೂಕ್ತ ನೆರವು ನೀಡುತ್ತದೆ.ಇತ್ತೀಚಿನ ವರ್ಷಗಳಲ್ಲಿ ಸರಕಾರವು ಆರೋಗ್ಯ ವಿಚಾರದಲ್ಲಿ ಜನಸಾಮಾನ್ಯರಿಗೆ ಹೆಚ್ಚಿನ ಸಹಕಾರ ನೀಡುತ್ತಿದೆ.ಗ್ರಾಮೀಣ ಜನರು ಕಾಯಿಲೆ ಬಂದಾಗ ತಡವಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬರುವುದರಿಂದ ರೋಗ ಪತ್ತೆ ತಡವಾಗುತ್ತದೆ. ಇಂದಿನ ದಿನಗಳಲ್ಲಿ ಹೆಚ್ಚಿನ ಕಡೆ ತಜ್ಞ ವೈದ್ಯರು ಸುಸಜ್ಜಿತ ಆಸ್ಪತ್ರೆಗಳಿವೆ. ರೋಗಲಕ್ಷಣ ಕಂಡುಬಂದ ತಕ್ಷಣ ಆಸ್ಪತ್ರೆಗಳಿಗೆ ತೆರಳಿದರೆ ಕಡಿಮೆ ಖರ್ಚಿನ ಜತೆ ರೋಗಗಳು ಬೇಗನೆ ಶಮನಗೊಳ್ಳಲು ಸಾಧ್ಯ” ಎಂದು ಹೇಳಿದರು.
ಯೇನೆಪೋಯ ವೈದ್ಯಕೀಯ ಕಾಲೇಜಿನ ಉಪಕುಲಪತಿ ಡಾ. ವಿಜಯಕುಮಾರ್ ಮಾತನಾಡಿ “ಕ್ಯಾನ್ಸರ್ ನಂತಹ ರೋಗಗಳು ಮೊದಲ ಹಂತದಲ್ಲಿ ಪತ್ತೆಯಾದರೆ ಸಂಪೂರ್ಣ ಗುಣಪಡಿಸಲು ಸಾಧ್ಯ. ಆದರೆ ಹೆಚ್ಚಿನವರು ಕೊನೆ ಹಂತ ತಲುಪಿದ ಬಳಿಕ ನುರಿತ ವೈದ್ಯರನ್ನು ಸಂಪರ್ಕಿಸುವ ಕಾರಣ ಶೇ.12ರಷ್ಟು ರೋಗಿಗಳನ್ನು ಮಾತ್ರ ಗುಣಪಡಿಸಲು ಸಾಧ್ಯವಾಗುತ್ತದೆ. ಆದಾಯ ಮಿತಿಗೆ ಒಳಪಟ್ಟು ಕ್ಯಾನ್ಸರ್ ರೋಗಿಗಳಿಗೆ 2 ರಿಂದ 5 ಲಕ್ಷ ರೂ. ಸಹಾಯಧನ ಸರಕಾರದ ನಾನಾ ಯೋಜನೆಗಳಿಂದ ಸಿಗುತ್ತದೆ” ಎಂದು ಹೇಳಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಮಾತನಾಡಿ, ಉಜಿರೆಯ ಎಸ್ ಡಿ ಎಂ ಆಸ್ಪತ್ರೆ ನಗರಗಳಲ್ಲಿನ ಆಸ್ಪತ್ರೆಗಳಲ್ಲಿರುವ ಹೆಚ್ಚಿನ ಸೌಲಭ್ಯಗಳನ್ನು ಹೊಂದಿದ್ದು, ಪರಿಸರದ ಅನೇಕ ಮಂದಿಗೆ ಹೆಚ್ಚಿನ ಉಪಯೋಗ ನೀಡುತ್ತಿದೆ” ಎಂದರು.
ಎಸ್ ಡಿ ಎಂ ಆಸ್ಪತ್ರೆಯ ಮೆಡಿಕಲ್ ಸೂಪರಿಂಡೆಂಟ್ ಡಾ.ದೇವೇಂದ್ರ ಕುಮಾರ್, ವೈದ್ಯಾಧಿಕಾರಿ ಡಾ.ಸಾತ್ವಿಕ್ ಜೈನ್ ಉಪಸ್ಥಿತರಿದ್ದರು.
ಆಸ್ಪತ್ರೆಯ ಎಂ ಡಿ ಜನಾರ್ದನ ಎಂ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರೋಗ್ಯ ಮತ್ತು ಸಂವಹನಾಧಿಕಾರಿ ಹೇಮಾವತಿ ಹಾಗೂ ವಿಮಾ ವಿಭಾಗದ ಜಗನ್ನಾಥ ಕಾರ್ಯಕ್ರಮ ನಿರೂಪಿಸಿದರು.ಡಾ. ಉಷಾ ವಂದಿಸಿದರು.
ಯೆನೆಪೋಯ ಹಾಗೂ ಉಜಿರೆ ಎಸ್ ಡಿ ಎಂ ಆಸ್ಪತ್ರೆಗಳ ಎಂ.ಒ.ಯು.ಒಡಂಬಡಿಕೆ ಒಪ್ಪಂದದ ಹಸ್ತಾಂತರ ಜರಗಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಧರ್ಮಸ್ಥಳ, ರೋಟರಿ ಕ್ಲಬ್ ಆಪ್ ಮಂಗಳೂರು, ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಹಯೋಗದಲ್ಲಿ ನಡೆಯುತ್ತಿರುವ ಆರೋಗ್ಯ ಶಿಬಿರವು ಮಂಗಳವಾರ ಹಾಗೂ ಬುಧವಾರ ನಡೆಯಿತು

Related posts

ಪಟ್ರಮೆ: ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಚಿಣ್ಣರ ಸಂಭ್ರಮ

Suddi Udaya

ಕೊಕ್ಕಡ ಗ್ರಾ.ಪಂ. ನ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ವಿಶೇಷ ಗ್ರಾಮ ಸಭೆ

Suddi Udaya

ಬಿಜೆಪಿ ರಾಜ್ಯ ಯುವಮೋರ್ಚಾ ಘಟಕದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ಅಗ್ರಿಲೀಫ್ ಸಂಸ್ಥೆಯಲ್ಲಿ ದೀಪಾವಳಿ ಸಂಭ್ರಮ

Suddi Udaya

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದಿಂದ ಕ್ಷೇಮ ನಿಧಿ ಯೋಜನೆಯ 10 ನೇ ಸಹಾಯಧನ ಹಸ್ತಾಂತರ

Suddi Udaya

ಹೊಸಂಗಡಿ ಧರಣೇಂದ್ರ ಕುಮಾರ್ ವಿರುದ್ದ ಊರ್ವ ಪೊಲೀಸ್ ಠಾಣೆಗೆ ದೂರು

Suddi Udaya
error: Content is protected !!