25.7 C
ಪುತ್ತೂರು, ಬೆಳ್ತಂಗಡಿ
March 7, 2026
ತಾಲೂಕು ಸುದ್ದಿಪ್ರಮುಖ ಸುದ್ದಿರಾಜ್ಯ ಸುದ್ದಿಸಾಧಕರು

ಉಜಿರೆಯ ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು ಪ್ರತಿಷ್ಠಿತ ಜೈ ಜವಾನ್ ಜೈ ಕಿಸಾನ್ “ಕೃಷಿಕ ರತ್ನ” ಗೌರವ ಪ್ರಶಸ್ತಿಗೆ ಆಯ್ಕೆ

ಬೆಳ್ತಂಗಡಿ: ಭಾರತೀಯ ಭೂ ಸೇನೆಯಲ್ಲಿ 18 ವಷ೯ ಯೋಧರಾಗಿ ದೇಶ ರಕ್ಷಣೆ ಯ ಕಾಯ೯ಮಾಡಿ ನಿವೃತ್ತರಾಗಿರುವ ಗೋಪಾಲಕೃಷ್ಣ ಕಾಂಚೋಡು ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊಡಮಾಡುವ ಪ್ರತಿಷ್ಠಿತ
ಜೈ ಜವಾನ್ ಜೈ ಕಿಸಾನ್ “ಕೃಷಿಕ ರತ್ನ” ಪ್ರಶಸ್ತಿ ಗೆ ಆಯ್ಕೆ ಯಾಗಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಏಕ್‌ ಭಾರತ್’ ಕಾಯ೯ಕ್ರಮದಲ್ಲಿ ಪ್ರತಿ ವರ್ಷದಂತೆ ಈ ವರ್ಷ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಗೆ ಕಾಂಚೋಡು ಅವರು ಪಾತ್ರರಾಗಿದ್ದಾರೆ.
ಅವರು ಭಾರತೀಯ ಭೂ ಸೇನೆಯಲ್ಲಿ ಜಮ್ಮು ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು.‌

ಸೇನಾ ನಿವೃತ್ತಿಯ ನಂತರ ತನ್ನೂರಿಗೆ ಬಂದು ಬೆಳ್ತಂಗಡಿ ತಾಲೂಕು ಉಜಿರೆ ಯಲ್ಲಿ ನೆಲೆಸಿ, “ರವಿ ಟ್ರೇಡರ್ಸ್” ಎಂಬ ಉದ್ದಿಮೆ ಸ್ಥಾಪಿಸಿ ಹತ್ತಾರು ಯುವಕರಿಗೆ ಜೀವನೋಪಾಯದ ಹಾದಿಯನ್ನು ಸೃಷ್ಟಿಸುತ್ತಾ ಸೇನೆಗೆ ಸೇರಲು ಬಯಸುವ ಯುವಕರಿಗೆ ಉಚಿತ ಮಾಹಿತಿ ನೀಡುತ್ತಾ ಬರುತ್ತಿದ್ದಾರೆ.
ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ, ಕೃಷಿ ಕ್ಷೇತ್ರ ದಲ್ಲಿ ವೈಜ್ಞಾನಿಕವಾಗಿ, ಉತ್ತಮ ಆದಾಯ ಪಡೆಯುವ ಆಧುನಿಕ ತಂತ್ರಜ್ಞಾನ ಗಳೊಂದಿಗೆ ಪ್ರಕೃತಿಗೆ ತೊಂದರೆ ಯಾಗದಂತೆ (ಜಲ, ನೆಲ ಉಳಿಸಿ ) ಸಾವಯವ ಕೃಷಿಯನ್ನು ಮಾಡುತ್ತಾ, ಕಂಗು, ತೆಂಗು, ಬಾಳೆ ಕೃಷಿಗಳೊಂದಿಗೆ ಎಲ್ಹೋಟಿಕ್ (exotic) ಹಣ್ಣುಗಳನ್ನು ಬೆಳೆಯುತ್ತಾ, ಪ್ರಾಕೃತಿಕವಾಗಿ ಪ್ರಕೃತಿ ಸಹಜಕ್ರಿಯೆ, ಪರಾಗ ಸ್ಪರ್ಶಕ್ಕೆ ಪೂರಕ ಜೇನುಸಾಕಣೆ ಮಾಡುತ್ತಾ ಹತ್ತು ಹಲವು ಆಸಕ್ತ ಕೃಷಿಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಸರ್ಕಾರ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಮಾ.15ರಂದು ಬೆಂಗಳೂರಿನ
ಟೌನ್ ಹಾಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೋಪಾಲಕೃಷ್ಣ ಕಾಂಚೋಡು ಅವರಿಗೆ “ಕೃಷಿಕ ರತ್ನ” ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಭಾಪತಿ ಬಸವರಾಜ ಹೊರಟ್ಟಿ ಸಚಿವರುಗಳಾದ ಮುರುಗೇಶ್ ನಿರಾಣಿ, ಡಾ. ಸುಧಾಕರ್, ಕೆ.ಸಿ ನಾರಾಯಣ ಗೌಡ ಮೊದಲಾದವರು ಉಪಸ್ಥಿತರಿರುವರು.

ಕೃಷಿ ಕ್ಷೇತ್ರ ದಲ್ಲಿ ವೈಜ್ಞಾನಿಕ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆ

ಉಜಿರೆಯ ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು ಅವರು
ಪ್ರತಿಷ್ಠಿತ ಜೈ ಜವಾನ್ ಜೈ ಕಿಸಾನ್ “ಕೃಷಿಕ ರತ್ನ” ಗೌರವ ಪ್ರಶಸ್ತಿ ಗೆ ಆಯ್ಕೆ

ಬೆಳ್ತಂಗಡಿ: ಭಾರತೀಯ ಭೂ ಸೇನೆಯಲ್ಲಿ 18 ವಷ೯ ಯೋಧರಾಗಿ ದೇಶ ರಕ್ಷಣೆ ಯ ಕಾಯ೯ಮಾಡಿ ನಿವೃತ್ತರಾಗಿರುವ ಗೋಪಾಲಕೃಷ್ಣ ಕಾಂಚೋಡು ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊಡಮಾಡುವ ಪ್ರತಿಷ್ಠಿತ
ಜೈ ಜವಾನ್ ಜೈ ಕಿಸಾನ್ “ಕೃಷಿಕ ರತ್ನ” ಪ್ರಶಸ್ತಿ ಗೆ ಆಯ್ಕೆ ಯಾಗಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಏಕ್‌ ಭಾರತ್’ ಕಾಯ೯ಕ್ರಮದಲ್ಲಿ ಪ್ರತಿ ವರ್ಷದಂತೆ ಈ ವರ್ಷ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಗೆ ಕಾಂಚೋಡು ಅವರು ಪಾತ್ರರಾಗಿದ್ದಾರೆ.
ಅವರು ಭಾರತೀಯ ಭೂ ಸೇನೆಯಲ್ಲಿ ಜಮ್ಮು ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು.‌

ಸೇನಾ ನಿವೃತ್ತಿಯ ನಂತರ ತನ್ನೂರಿಗೆ ಬಂದು ಬೆಳ್ತಂಗಡಿ ತಾಲೂಕು ಉಜಿರೆ ಯಲ್ಲಿ ನೆಲೆಸಿ, “ರವಿ ಟ್ರೇಡರ್ಸ್” ಎಂಬ ಉದ್ದಿಮೆ ಸ್ಥಾಪಿಸಿ ಹತ್ತಾರು ಯುವಕರಿಗೆ ಜೀವನೋಪಾಯದ ಹಾದಿಯನ್ನು ಸೃಷ್ಟಿಸುತ್ತಾ ಸೇನೆಗೆ ಸೇರಲು ಬಯಸುವ ಯುವಕರಿಗೆ ಉಚಿತ ಮಾಹಿತಿ ನೀಡುತ್ತಾ ಬರುತ್ತಿದ್ದಾರೆ.
ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ, ಕೃಷಿ ಕ್ಷೇತ್ರ ದಲ್ಲಿ ವೈಜ್ಞಾನಿಕವಾಗಿ, ಉತ್ತಮ ಆದಾಯ ಪಡೆಯುವ ಆಧುನಿಕ ತಂತ್ರಜ್ಞಾನ ಗಳೊಂದಿಗೆ ಪ್ರಕೃತಿಗೆ ತೊಂದರೆ ಯಾಗದಂತೆ (ಜಲ, ನೆಲ ಉಳಿಸಿ ) ಸಾವಯವ ಕೃಷಿಯನ್ನು ಮಾಡುತ್ತಾ, ಕಂಗು, ತೆಂಗು, ಬಾಳೆ ಕೃಷಿಗಳೊಂದಿಗೆ ಎಲ್ಹೋಟಿಕ್ (exotic) ಹಣ್ಣುಗಳನ್ನು ಬೆಳೆಯುತ್ತಾ, ಪ್ರಾಕೃತಿಕವಾಗಿ ಪ್ರಕೃತಿ ಸಹಜಕ್ರಿಯೆ, ಪರಾಗ ಸ್ಪರ್ಶಕ್ಕೆ ಪೂರಕ ಜೇನುಸಾಕಣೆ ಮಾಡುತ್ತಾ ಹತ್ತು ಹಲವು ಆಸಕ್ತ ಕೃಷಿಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಸರ್ಕಾರ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಮಾ.15ರಂದು ಬೆಂಗಳೂರಿನ
ಟೌನ್ ಹಾಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೋಪಾಲಕೃಷ್ಣ ಕಾಂಚೋಡು ಅವರಿಗೆ “ಕೃಷಿಕ ರತ್ನ” ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಭಾಪತಿ ಬಸವರಾಜ ಹೊರಟ್ಟಿ ಸಚಿವರುಗಳಾದ ಮುರುಗೇಶ್ ನಿರಾಣಿ, ಡಾ. ಸುಧಾಕರ್, ಕೆ.ಸಿ ನಾರಾಯಣ ಗೌಡ ಮೊದಲಾದವರು ಉಪಸ್ಥಿತರಿರುವರು.

Related posts

ಕುತ್ಲೂರು ಪ್ರಕರಣ ನಕ್ಸಲ್ ಮುಖಂಡ ಮಹೇಶ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

Suddi Udaya

ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ನೂತನ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಜಯರಾಮ ಮಯ್ಯ ಅಧಿಕಾರ ಸ್ವೀಕಾರ

Suddi Udaya

ಕುದ್ರಡ್ಕ ಶ್ರೀ ಮಹಾಗಣಪತಿ ಭಜನಾ ಮಂಡಳಿಯ ಸದಸ್ಯರಿಗೆ ಸಮವಸ್ತ್ರ ವಿತರಣೆ

Suddi Udaya

ಧರ್ಮಸ್ಥಳ ಗ್ರಾಮ ಪಂಚಾಯತಿಯಲ್ಲಿ ಮಕ್ಕಳ ಗ್ರಾಮಸಭೆ

Suddi Udaya

ಮಚ್ಚಿನ : ಸರಕಾರಿ ಪ್ರೌಢ ಶಾಲೆಯಲ್ಲಿ ಗಾಂಧೀ ಜಯಂತಿ ಆಚರಣೆ

Suddi Udaya

ಬೆಳ್ತಂಗಡಿ ಸಂಜೀವಿನಿ ಸಂಸ್ಥೆಯಿಂದ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

Suddi Udaya
error: Content is protected !!