24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ಮಹಿಳಾ ಮಂಡಳಿಯಿಂದ ಮಹಿಳಾ ದಿನಾಚರಣೆ

ಬೆಳ್ತಂಗಡಿ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ, ತಾಲೂಕು ಮಹಿಳಾ‌ ಮಂಡಲಗಳ ಒಕ್ಕೂಟ ಬೆಳ್ತಂಗಡಿ, ಮಹಿಳಾ ವೃಂದ ಬೆಳ್ತಂಗಡಿ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನ ಮಹಿಳಾ ವೃಂದ ಸಭಾಂಗಣದಲ್ಲಿ ಆಚರಿಸಲಾಯಿತು.

ಇಂದು ಮಹಿಳೆಯರು ತಮ್ಮ ಬದುಕನ್ನ ಆದರ್ಶದಾಯಕವಾಗಿ ನಡೆಸಲು ಶಕ್ತರಾಗಿದ್ದಾರೆ, ಎಲ್ಲಾ ಕ್ಷೇತ್ರದಲ್ಲು ಕೂಡ ತಮ್ಮ ಛಾಪನ್ನ ಮೂಡಿಸಿ ಮಹಿಳೆ ಇಂದು ಸಮಾಜದಲ್ಲಿ ತಮ್ಮ ಸ್ಥಾನವನ್ನ ಪಡೆದುಕ್ಕೊಂಡು ಮುನ್ನುಗ್ಗುತ್ತಿದ್ದಾಳೆ, ಇದೇ ರೀತಿ‌ ಮಹಿಳೆ ರಾಜಕೀಯ, ಶೈಕ್ಷಣಿಕ, ಆರ್ಥಿಕ ನೀತಿ, ಕ್ರೀಡೆ ಎಲ್ಲಾ ಕ್ಷೇತ್ರದಲ್ಲು ಚಿಂತನೆಯನ್ನ ಮಾಡಬೇಕೆಂದು ರೋಟರಿ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷರಾದ ಮನೋರಮ ಭಟ್ ಅವರು ಸ್ಫೂರ್ತಿದಾಯಕ ಮಾತುಗಳನ್ನ ಆಡಿದರು.

ಕಾರ್ಯಕ್ರಮದಲ್ಲಿ ತಾಲೂಕಿನ‌ ಸಾಧಕರಾದ ಹಿರಿಯರು ಶುಶ್ರೂಕಿಯಾಗಿ ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನ ಮಾಡಿಸಿ ನಿವೃತ್ತರಾದರು ತಮ್ಮ‌ ಸೇವೆಯನ್ನು ನೀಡುತ್ತಿರುವ ಶ್ರೀಮತಿ ದೇವಮ್ಮ ಮತ್ತು ಉಜಿರೆ ಬೆನಕ್ ಆಸ್ಪತ್ರೆಯ ಕಿರಿಯ ಸರ್ಜನ್, ಇತ್ತಿಚ್ಚೆಗೆ ಯಶಸ್ವಿ ಕಿರು ರಂಧ್ರ ಶಸ್ತ್ರಚಿಕಿತ್ಸೆಯ ಮೂಲಕ 1.6 ಕೆ.ಜಿ ಗೆಡ್ಡೆಯನ್ನ ಹೊರತೆಗೆದ ಸಾಧಕಿ ಡಾ.‌ಅಂಕಿತಾ ಭಟ್ ಅವರಿಗೆ ‘ಸ್ಪೂರ್ತಿ -2023’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ನಿಕಟಪೂರ್ವ ಅಧ್ಯಕ್ಷರಾದ ಪ್ರಸಾದ್ ಬಿ.ಎಸ್ , ಮಹಿಳಾ ವೃಂದದ ಅಧ್ಯಕ್ಷರಾದ ಆಶಾ ಸತೀಶ್ , ಮಹಿಳಾ ಒಕ್ಕೂಟ ಅಧ್ಯಕ್ಷರಾದ ಸವಿತಾ ಜಯದೇವ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಜೇಸಿಐ ಬೆಳ್ತಂಗಡಿ ಮಂಜುಶ್ರಿಯ ಮಹಿಳಾ ವಿಭಾಗದ ಸಂಯೋಜಕಿ ಮಮಿತಾ ಸುಧೀರ್ ಅಧ್ಯಕ್ಷತೆಯನ್ನ ವಹಿಸಿದ್ದರು.

ಜೆಸಿಐ ಅಧ್ಯಕ್ಷರಾದ ಶಂಕರ್ ರಾವ್ ಅತಿಥಿಗಳನ್ನ ಸ್ವಾಗತಿಸಿ, ಹೇಮಾವತಿ.ಕೆ ಅತಿಥಿಗಳನ್ನ ವೇದಿಕೆಗೆ ಆಹ್ವಾನಿಸಿ, ಮಧುರಾ ರಾಘವ್ ಜೇಸಿ ವಾಣಿ ವಾಚಿಸಿ, ಸುಭಾಷಿಣಿ‌ ಸನ್ಮಾನ ಪತ್ರ ವಾಚಿಸಿ, ಮಹಿಳಾ ವೃಂದದ ಉಮಾರಾವ್ ಧನ್ಯವಾದವಿತ್ತರು.

ವೇದಿಕೆಯಲ್ಲಿ ಜೇಸಿಐ ಬೆಳ್ತಂಗಡಿ ಮಂಜುಶ್ರಿಯ ಕಾರ್ಯದರ್ಶಿ‌ ಸುಧೀರ್ ಕೆ.ಎನ್ ಉಪಸ್ಥಿತರಿದ್ದು, ಕಾರ್ಯಕ್ರಮದಲ್ಲಿ ಜೇಸಿಐ ಬೆಳ್ತಂಗಡಿಯ ಪುರ್ವಾಧ್ಯಕರಾದ ಚಿದಾನಂದ ಇಡ್ಯಾ, ಕಿರಣ್ ಕುಮಾರ್ ಶೆಟ್ಟಿ, ನಾರಾಯಣ ಶೆಟ್ಟಿ, ಸಂತೋಷ್ ಕುಮಾರ್ ಜೈನ್, ಅಶೋಕ್ ಕುಮಾರ್ ಎಮ್.ಪಿ ಉಪಸ್ಥಿತರಿದ್ದರು.

Related posts

ಮದ್ದಡ್ಕ ಬಸ್ ನಿಲ್ದಾಣದ ಬದಿಯ ಚರಂಡಿಯಲ್ಲಿ ಕೊಳಚೆ ನೀರು ಶೇಖರಣೆ: ಸಂಬಂಧಪಟ್ಟವರು ಕೂಡಲೇ ಗಮನಹರಿಸುವಂತೆ ಸಾರ್ವಜನಿಕರ ಒತ್ತಾಯ

Suddi Udaya

ತೆಕ್ಕಾರು ಸರಳಿಕಟ್ಟೆ ಎಸ್.ವೈ.ಎಸ್. ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಮುಂಡೂರು ಶ್ರೀ ಉದ್ಭವ ಗಣಪತಿ ಶ್ರೀ ನಾಗಾಂಬಿಕಾ ದೇವಸ್ಥಾನದಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya

ಸುಲ್ಕೇರಿಮೊಗ್ರು ಶಾಲಾಭಿವೃದ್ಧಿ ಸಮಿತಿಯಿಂದ ಅಳದಂಗಡಿ ಗ್ರಾ.ಪಂ. ನ ನೂತನ ಅಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಸೇವಾ ನಿವೃತಿ ಹೊಂದಿದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಎನ್. ಸತೀಶ್ ಹೊಳ್ಳರವರಿಗೆ ಧರ್ಮಸ್ಥಳ ಸಿಎ ಬ್ಯಾಂಕಿನಿಂದ ಬಿಳ್ಕೋಡುಗೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಮಕ್ಕಳಿಗೆ ಹಿಂದೂ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭ

Suddi Udaya
error: Content is protected !!