27.5 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ನಿಮ್ಮ ಮನೋಭಾವ ಒಳ್ಳೆಯದಾಗಿದ್ದರೆ ಕೌಶಲ್ಯಗಳ ಸದುಪಯೋಗ ಮಾಡಲು ಆಗುತ್ತದೆ: ಡಾ. ಸತೀಶ್ಚಂದ್ರ ಎಸ್.

ಬೆಳ್ತಂಗಡಿ: ದ್ಯೆಯ ಉದ್ದೇಶ ಕೇವಲ ಜ್ಞಾನ ಸಂಪಾದನೆ ಮಾತ್ರವಲ್ಲ ನಮ್ಮ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಧನಾತ್ಮಕ ಧೋರಣೆಯು ಅಗತ್ಯ. ಜೀವನದಲ್ಲಿ ಶಾಂತಿ ನೆಮ್ಮದಿ ಯಶಸ್ಸು ಬೇಕಾದರೆ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಆಗ ನೀವು ಸಮಾಜಕ್ಕೆ ಒಳ್ಳೆಯ ಆಸ್ತಿ ಆಗಬಲ್ಲಿರಿ. ನಿಮ್ಮ ಮನೋಭಾವ ಒಳ್ಳೆದಾಗಿದ್ದರೆ ನಿಮ್ಮ ಕೌಶಲ್ಯಗಳ ಸದುಪಯೋಗ ಮಾಡಲು ಆಗುತ್ತಿದೆ ಎಂದು ಡಾ. ಸತೀಶ್ಚಂದ್ರ ಎಸ್. ಅವರು ಶ್ರೀ ಧ.ಮಂ ಮಹಿಳಾ ಐಟಿಐ ಉಜಿರೆ ಇಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅಷ್ಟೇ ಅಲ್ಲ ಮಾತೃಶ್ರೀ ಡಾ.ಹೇಮಾವತಿ ವಿ ಹೆಗ್ಗಡೆಯವರ ಆಶಯದಂತೆ ಮಹಿಳಾ ಸಬಲೀಕರಣ ಇದಕ್ಕೆ ಪೂರಕವಾದ ವಾತಾವರಣ ಇಲ್ಲಿ ನಿರ್ಮಾಣವಾಗಿರುವುದು ಸಂತೋಷದ ವಿಷಯ ಜೊತೆಗೆ ಸ್ವಚ್ಚ, ಸುಂದರ, ಸುಸಂಸ್ಕೃತ ಹಾಗೂ ಶಿಸ್ತು ಬದ್ದವಾದ ವಾತಾವರಣ ಇಲ್ಲಿ ನಿರ್ಮಾಣವಾಗಿರುವುದು ಸಂತೋಷ ಪಡುತ್ತೇವೆ ಎಂದು ಈ ಸಂದರ್ಭದಲ್ಲಿ ಹೇಳಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರಿನ Sowkar Textile and Uniform ಇದರ ವ್ಯವಸ್ಥಾಪಕ ಪಾಲುದಾರರಾದ ಶ್ರೀ ಪ್ರಕಾಶ್ ಭಂಡಾರಿ ಕುತ್ತೆತ್ತೂರು ಇವರು ವಿದ್ಯೆಗೆ ವಿನಯವೇ ಭೂಷಣ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಂಸ್ಥೆಯು ವಿದ್ಯಾರ್ಥಿಗಳ ಜೊತೆ ನಿರಂತರ ಸಂಪರ್ಕವನ್ನು ಇಟ್ಟುಕೊಳ್ಳುವುದು ಉತ್ತಮ. ಪೂಜ್ಯರ ದೂರದೃಷ್ಟಿತ್ವ ಹಾಗೂ ಹಸಿದವನಿಗೆ ಒಂದು ಹೊತ್ತು ಊಟ ಕೊಡುವ ಬದಲು ಒಂದು ಹೊತ್ತಿನ ಊಟ ಉತ್ಪಾದಿಸುವ ವಿಧಾನ ಹೇಳಿಕೊಡುವುದು ಪೂಜ್ಯರ ವಿಶೇಷ ಗುಣ. ಇಟ್ಟ ಹೆಜ್ಜೆ ಹಿಂದೆ ಇಡಬೇಡಿ ದೈರ್ಯದಿಂದ ಮುನ್ನಡೆಯಿರಿ ಶುಭವಾಗಲಿ ಎಂದು ಹೇಳಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವೇಣೂರು ಐಟಿಐ ಪ್ರಾಚಾರ್ಯರಾದ ಶ್ರೀ ವಿಶ್ವೇಶ್ವರ ಪ್ರಸಾದ್ ಇವರು ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿನಿಯರ ಹೆತ್ತವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಸಂಸ್ಥೆಯ ವಾರ್ಷಿಕ ವರದಿಯನ್ನು ಪ್ರಾಂಶುಪಾಲರು ಮಂಡಿಸಿದರು. ಕು ಸಮೀಕ್ಷಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಪ್ರಜ್ಞಾ ಸ್ವಾಗತ ಮಾಡಿದ ಈ ಕಾರ್ಯಕ್ರಮದಲ್ಲಿ ರ್ಮೇಘನಾ ಧನ್ಯವಾದಗಳನ್ನು ಅರ್ಪಿಸಿದರು

Related posts

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ಶೈಕ್ಷಣಿಕ ಸಮ್ಮೇಳನ

Suddi Udaya

ತೆಂಕಕಾರಂದೂರು: ತಾರೆದೊಟ್ಟು ಅಂಗನವಾಡಿ ಕೇಂದ್ರದಲ್ಲಿ ಗಾಂಧಿ ಜಯಂತಿ ಆಚರಣೆ

Suddi Udaya

ಲಾಯಿಲ: ಕರ್ನೋಡಿ ಸ.ಉ.ಹಿ.ಪ್ರಾ. ಶಾಲೆಯ ಹಳೆ ವಿದ್ಯಾರ್ಥಿ ಸಂಘದಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ “ಗುರುವಂದನಾ” ಕಾರ್ಯಕ್ರಮ

Suddi Udaya

ಗೆಜ್ಜೆಗಿರಿ ಮೇಳದ “ಪ್ರಚಂಡ ಮಹಿಷಾಸುರ” ಪ್ರಸಂಗ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬಿಡುಗಡೆ

Suddi Udaya

ಬೆಳ್ತಂಗಡಿ: ಭಾರೀ ಮಳೆಗೆ ಮನೆಯ ಕಂಪೌಂಡ್ ಕುಸಿತ, ಅಪಾರ ನಷ್ಟ

Suddi Udaya

ಬೆಳ್ತಂಗಡಿ ಧರ್ಮ ಪ್ರಾಂತ್ಯ ಉದನೆ ವಲಯ ಮಕ್ಕಳ ಪ್ರತಿಭೋತ್ಸವ ನೆಲ್ಯಾಡಿ ಅಲ್ಫೋನ್ಸಸಂಡೆ ಸ್ಕೂಲ್ ಗೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!