23.7 C
ಪುತ್ತೂರು, ಬೆಳ್ತಂಗಡಿ
May 19, 2025
ಅಪರಾಧ ಸುದ್ದಿ

ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ನಿಡ್ಲೆ
ಪಿಲಿಕಜೆ ನಿವಾಸಿ ದಿನೇಶ ನೇಣು ಬಿಗಿದು ಆತ್ಮಹತ್ಯೆ

ನಿಡ್ಲೆ : ಇಲ್ಲಿಯ ಪಿಲಿಕಜೆ ನಿವಾಸಿ ದಿನೇಶ ( 36 ವ) ಎಂಬವರು ಸುಮಾರು ಒಂದು ವರ್ಷದಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ. 11 ರಂದು ನಡೆದಿದೆ.
ಮಾ.10 ರಂದು ಮಧ್ಯಾಹ್ನ ಊಟ ಮಾಡಿ ಸಂಜೆ ಸುಮಾರು 3 ಗಂಟೆಯವರೆಗೆ ಮನೆಯಲ್ಲಿ ಇದ್ದವರು ಬಳಿಕ ನಾಪತ್ತೆ ಯಾಗಿದ್ದರು. ರಾತ್ರಿಯಾದರೂ ಮನೆಗೆ ವಾಪಾಸು ಬರಲಿಲ್ಲ .ಎಲ್ಲ ಕಡೆ ಹುಡುಕಿದರೂ ಪತ್ತೆಯಾಗಲಿಲ್ಲ. ಮೂರು ದಿನ ಮಾ.11 ರಂದು ಬೆಳಿಗ್ಗೆ ಮನೆಯವರು ಸೇರಿ ಹುಡುಕಿದಾಗ ಗುಡ್ಡ ಜಾಗದಲ್ಲಿ ಒಂದು ಮರದ ಕೊಂಬೆಗೆ ಸೈಲಾನ್ ಹಗ್ಗದಿಂದ ಕಟ್ಟಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದ್ದು, ದಿನೇಶರವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿ ದ್ದವರು ಇದೇ ವಿಚಾರದಲ್ಲಿ ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿ
ರಬಹುದೆಂದು ಸಂಶಯಿಸಲಾಗಿದೆ. ಈ ಬಗ್ಗೆ ಮೃತರ ತಾಯಿ ಲಕ್ಷ್ಮಿ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣಾ ಯುಡಿಆರ್ ಕ್ರಮಾಂಕ ಮತ್ತು ಕಾನೂನಿನ ಕಲಂ 21/2023 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಪಟ್ರಮೆ ಸಂಕೇಶದಲ್ಲಿ ವಾಸದ ಮನೆಯ ಹಿಂಬದಿಯಲ್ಲಿ ಅಕ್ರಮ ಕಳ್ಳಭಟ್ಟಿ ಸಾರಾಯಿ ತಯಾರಿಕಾ ಅಡ್ಡೆ- ಅಬಕಾರಿ ಇಲಾಖೆಯಿಂದ ದಾಳಿ ಆರೋಪಿ ಪರಾರಿ ಸೊತ್ತುಗಳು ವಶ

Suddi Udaya

ಬಿಜೆಪಿಯಿಂದ ಹಣ ಹಂಚಿಕೆ ಆರೋಪ : ಮಾಜಿ ಶಾಸಕರಿಂದ ಠಾಣೆಗೆ ದೂರು: ಫ್ಲೈಯಿಂಗ್ ಸ್ಕ್ಯಾಡ್‌ನಿಂದ ಕಾರಿನ ಪರಿಶೀಲನೆ : ಮುಂದುವರಿದ ತನಿಖೆ

Suddi Udaya

ವಿದ್ಯಾರ್ಥಿಗೆ ಬೆತ್ತದಿಂದ ಥಳಿಸಿದ ಶಿಕ್ಷಕನ ವಿರುದ್ದ ದೂರು ದಾಖಲು

Suddi Udaya

ಚಾರ್ಮಾಡಿಯಲ್ಲಿ ವಿದ್ಯಾರ್ಥಿಗಳು ಹಾಗೂ ಕೆಲವು ಸಾರ್ವಜನಿಕರಿನಿಂದ ಬಸ್ ತಡೆಹಿಡಿದು ಗಲಾಟೆ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕ್ರಮಕ್ಕೆ ವೇಣೂರು ಪೊಲೀಸ್ ಠಾಣೆಗೆ ಮನವಿ

Suddi Udaya

ತುಮಕೂರು ಕುಚ್ಚಂಗಿ ಕೆರೆಯ ಬಳಿ ಮೂವರ ಶವ ಸುಟ್ಟು ಹೋದ ರೀತಿಯಲ್ಲಿ ಪತ್ತೆ: ಮೂವರು ಬೆಳ್ತಂಗಡಿ ತಾಲೂಕಿನಿಂದ ನಾಪತ್ತೆಯಾದವರದ್ದು ಇರಬಹುದೆಂಬ ಶಂಕೆ

Suddi Udaya
error: Content is protected !!