22.8 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿ

ಜೆಸಿಸಿ ಬೆಳ್ತಂಗಡಿ ಮಂಜುಶ್ರೀಯಿಂದ ವಲಯದ ಸ್ವಾಗತ್ ಕಾರ್ಯಕ್ರಮ ಅಯೋಜನೆ

ಬೆಳ್ತಂಗಡಿ : ಜೀವನದಲ್ಲಿ ಯಾವುದೆ ಕೆಲಸ ಮಾಡಿದ್ರು ಅದರ ಆಳಕ್ಕೆ ಇಳಿದು ನೋಡಬೇಕು ಆಗ ಮಾತ್ರ ಅದರಲ್ಲಿ ಯಶಸ್ಸು ಕಾಣೋದಕ್ಕೆ ಸಾಧ್ಯ, ಇಲ್ಲವಾದಲ್ಲಿ ನಮ್ಮ ಸಮಯ, ಶ್ರಮ, ಹಣ ಎಲ್ಲವೂ ಕೂಡ ವ್ಯರ್ಥ, ಜೇಸಿಐ ಕೂಡ ಹಾಗೇ ಅವಕಾಶಗಳ ಸಮುದ್ರ ಅದರ ಅಳಕ್ಕೆ ಇಳಿದು ಅವುಗಳನ್ನ ಉಪಯೋಗಿಸಿದರೆ‌ ಮಾತ್ರ ಯಶಸ್ಸನ್ನ ಕಾಣಬಹುದು ಅಂತ ಜೇಸಿಐ ಬೆಳ್ತಂಗಡಿ ಮಂಜುಶ್ರೀ ಘಟಕ ಆಥಿತ್ಯದಲ್ಲಿ ಆದಿತ್ಯವಾರ ಸಿವಿಸ್ ಹಾಲ್ ಚರ್ಚ್ ರೋಡ್ ಬೆಳ್ತಂಗಡಿಯಲ್ಲಿ ನಡೆದ ಸ್ವಾಗತ್ ತರಬೇತಿ ಕಾರ್ಯಕ್ರಮವನ್ನ ಉದ್ಘಾಟಿಸಿದ ವಲಯಾಧ್ಯಕ್ಷ ಜೆಸಿ ಪುರುಷೊತ್ತಮ ಶೆಟ್ಟಿ ಹೇಳಿದರು.

ಹೊಸ ಜೇಸಿಗಳಿಗೆ ಜೇಸಿಐಯ ಮಹತ್ವವನ್ನ ತಿಳಿಸುವ ವಲಯದ ತರಬೇತಿ ಇದಾಗಿದ್ದು ಉಡುಪಿ, ಕುಂದಾಪುರ, ಬಂಟ್ವಾಳ, ಪುತ್ತೂರು ಹೀಗೆ ನಾನಾ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿ ಮಾಹಿತಿಯನ್ನ‌ ಪಡೆದರು.

ರಾಷ್ಟ್ರೀಯ ತರಬೇತುದಾರರಾದ ಜೆಸಿ ಕೃಷ್ಣ ಮೋಹನ್ ಹಾಗೂ ವಲಯ ತರಬೇತುದಾರೆ ಜೆಸಿ ವರ್ಷ ಕಾಮತ್ ತರಬೇತಿ ನಡೆಸಿಕೊಟ್ಟು ಸದಸ್ಯರಿಗೆ ಸ್ಫೂರ್ತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭಿವೃದ್ಧಿ ವಿಭಾಗದ ನಿರ್ದೇಶಕಿ ಜೆಸಿ ಉಷಾ ಕಲ್ಮಡಿ ವಹಿಸಿದ್ದು ವೇದಿಕೆಯಲ್ಲಿ ನಿಕಟ ಪೂರ್ವ ವಲಧ್ಯಕ್ಷ ಜೆಸಿ ರಾಯನ್ ಉದಯ್ ಕ್ರಾಸ್ತಾ, ವಲಯದ ಉಪಾಧ್ಯಕ್ಷರಾದ ಜೆಸಿ ಭರತ್ ಶೆಟ್ಟಿ, ವಲಯದ ಆಡಳಿತ ನಿರ್ದೇಶಕರಾದ ಜೆಸಿ ಪ್ರಶಾಂತ್ ಲಾಯಿಲ, ವಲಯದ ಆಡಳಿತ ಮತ್ತು ಅಭಿವೃದ್ಧಿ ವಿಭಾಗ ದ ನಿರ್ದೇಶಕರುಗಳಾದ ಜೆಸಿ ಮರಿಯಪ್ಪ ಜೆಸಿ ಕೃಷ್ಣ ಪವಾರ್ ಜೆಸಿ ಚಂದ್ರಹಾಸ ಕೊಪ್ಪ, ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷರಾದ ಜೆಸಿ ಶಂಕರ್ ರಾವ್, ಸ್ವಾಗತ್ ಕಾರ್ಯಕ್ರಮ ನಿರ್ದೇಶಕ ಜೆಸಿ ಅನುದೀಪ್ ಜೈನ್ ಉಪಸ್ಥಿತರಿದ್ದು

ಕಾರ್ಯಕ್ರಮದಲ್ಲಿ ಅತಿ ಹೆಚ್ಚು ನೋಂದಾವಣೆ ಮಾಡಿದ ಬೆಳ್ಮಣ್ ಘಟಕಾಧ್ಯಕ್ಷ ಜೆಸಿ ಸತೀಶ್ ಪೂಜಾರಿ, ಕಾರ್ಯಕ್ರಮದ ಪ್ರಯೋಜಕರಾದ ಜೆಸಿ ಚಿದಾನಂದ ಇಡ್ಯಾ, ಜೆಸಿ ಪ್ರಶಾಂತ್ ಲಾಯಿಲ,ಜೆಸಿ ಸ್ವರೂಪ್ ಶೇಖರ್,ಜೆಸಿ ಸುಶಿಲ್ ಕುಮಾರ್ , ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಜೆಸಿ ಪ್ರಸಾದ್ ಬಿ.ಎಸ್ ಇವರುಗಳನ್ನ ಗೌರವಿಸಲಾಯಿತು.

ಚಿದಾನಂದ ಇಡ್ಯಾ ವೇದಿಕೆ ಆಹ್ವಾನಿಸಿ, ಆಶಾಲತಾ ಜೇಸಿ ವಾಣಿ ವಾಚಿಸಿ, ಚಂದ್ರಹಾಸ ಬಳಂಜ, ಸ್ಮಿತೇಶ್ ಬಾರ್ಯ ಹೇಮಾವತಿ ಕೆ ಅತಿಥಿಗಳನ್ನ ಪರಿಚಯಿಸಿದರು, ಜೆಸಿ ಅನುದೀಪ್ ಧನ್ಯವಾದವಿತ್ತರು.

ತಾಲೂಕಿನಲ್ಲಿ ಹಲವಾರು ಕಾರ್ಯಕ್ರಮಗಳನ್ನ ಯಶಸ್ವಿಯಾಗಿ ನಡೆಸುತ್ತಿರುವ ಜೇಸಿಐ ಬೆಳ್ತಂಗಡಿ ಮಂಜುಶ್ರೀಯು ಎಲ್ಲಾರ ಪ್ರಶಂಸೆಗೆ ಪಾತ್ರವಾಗಿ ಘಟಕದ ಪೂರ್ವಧ್ಯಕ್ಷರಾದ ಜೆಸಿ ನಾರಾಯಣ ಶೆಟ್ಟಿ,ಜೆಸಿ ಕಿರಣ್ ಕುಮಾರ್ ಶೆಟ್ಟಿ, ಜೆಸಿ ಸಂತೋಷ್ ಪಿ ಕೋಟ್ಯಾನ್ ,ಜೆಸಿ ತುಕಾರಾಮ್ ಹಾಗೂ ಸರ್ವ ಸದಸ್ಯರು ಭಾಗವಹಿಸಿದ್ದರು.

Related posts

ನಿಡ್ಲೆ: ಗೌಡರ ಯಾನೆ ಒಕ್ಕಲಿಗರ ಸಂಘ ಪಿಲಿಕಜೆ ಬೈಲುವಾರು ಸಮಿತಿಯ ಮಾಸಿಕ ಸಭೆ , ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ವತಿಯಿಂದ 404 ಶಾಲೆಗಳಿಗೆ ಒಟ್ಟು ರೂ. 2.50 ಕೋಟಿ ಮೌಲ್ಯದ 3472 ಜೊತೆ ಡೆಸ್ಕ್-ಬೆಂಚ್‌ಗಳ ವಿತರಣೆ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಹೊಸಂಗಡಿ ಗ್ರಾ.ಪಂ. ಮತ್ತು ಅರಣ್ಯ ಇಲಾಖೆಯ ವತಿಯಿಂದ ವನಮಹೋತ್ಸವ

Suddi Udaya

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿ ತೇಜೋವಧೆ: ಮಾಜಿ ಶಾಸಕ ಕೆ.ವಸಂತ ಬಂಗೇರ ಅಭಿಮಾನಿಗಳಿಂದ ಠಾಣೆಗೆ ದೂರು

Suddi Udaya

ನಾರಾವಿ: ಎನ್ಎಸ್ಎಸ್ ನಿಂದ ಬೃಹತ್ ರಕ್ತದಾನ ಶಿಬಿರ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಯಕ್ಷಗಾನ ತರಬೇತಿ ತರಗತಿಗೆ ಚಾಲನೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ