25.3 C
ಪುತ್ತೂರು, ಬೆಳ್ತಂಗಡಿ
April 4, 2025
ಅಪರಾಧ ಸುದ್ದಿ

ಕಡಿರುದ್ಯಾವರ ಎಮಾ೯ಲ್ ಪಲ್ಕೆಯಲ್ಲಿ ಆಕಸ್ಮಿಕ ವಾಗಿ ಕೈಜಾರಿ ಬಾವಿಗೆ ಬಿದ್ದು ಮೃತಪಟ್ಟ ಬೆಳಗಾವಿ ನಿವಾಸಿ ಪ್ರವೀಣ್ ಎಂಬವರ ವಾರಿಸುದಾರರ ಪತ್ತೆಗೆ ಪೊಲೀಸರ ಮನವಿ

ಕಡಿರುದ್ಯಾವರ: ಇಲ್ಲಿಯ ಎಮಾ೯ಲ್ ಪಲ್ಕೆಯಲ್ಲಿ ಬಾವಿಗೆ ಬಿದ್ದ ಕೊಡಪಾನ ತೆಗೆಯುತ್ತಿದ್ದ ವೇಳೆ ಆಕಸ್ಮಿಕ ವಾಗಿ ಕೈಜಾರಿ ಬಾವಿಗೆ ಬಿದ್ದ ಬೆಳಗಾವಿ ನಿವಾಸಿ ಎನ್ನಲಾದ ಪ್ರವೀಣ್ ( 35 ವರ್ಷ) ಎಂಬವರ
ವಾರಿಸುದಾರರ ಪತ್ತೆಗಾಗಿ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರವೀಣ್ ಸುಮಾರು 2 ವರ್ಷಗಳಿಂದ ಸುಮಿತ್ರಾ ಎಂಬವರ ಮನೆಯಲ್ಲಿ ವಾಸವಾಗಿದ್ದು , ಮಾ. 15 ರಂದು ಕೆಲಸಕ್ಕೆ ರಜೆ ಇದ್ದ ಕಾರಣ ಪ್ರವೀಣ್ ರವರು ದೇವರಾಜುರನ್ನು ಕರೆದು ಮನೆಯ ಬಳಿ ಇರುವ ಸರಕಾರಿ ಬಾವಿಗೆ ಮನೆಯ ಕೊಡಪಾನ ಬಿದ್ದಿದೆ. ತೆಗೆಯಲು ಬಾ ಎಂದು ಕರೆದಿದ್ದು, ದೇವರಾಜ್ ಹಾಗೂ ಪ್ರವೀಣ್ ರವರು ಜೊತೆಯಾಗಿ ಬಾವಿಯ ಬಳಿ ಹೋಗಿ ಪ್ರವೀಣ್ ರವರು ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಕೊಡಪಾನವನ್ನು ಮೇಲಕ್ಕೆ ತರುವ ಸಮಯ ಒಮ್ಮಲೆ ಕೈ ಜಾರಿ ಆಕಸ್ಮಿಕವಾಗಿ ಬಾವಿಯ ನೀರಿಗೆ ಬಿದ್ದರೆನ್ನಲಾಗಿದೆ. ಕೂಡಲೇ
ನೆರೆಕರೆಯವರ ಸಹಾಯದಿಂದ ಅಗ್ನಿ ಶಾಮಕ ದಳದವರನ್ನು ಕರೆಸಿ ಅವರನ್ನು ಮೇಲಕ್ಕೆತ್ತಿಸಿ ನೋಡಿದಾಗ ಪ್ರವೀಣ್ ರವರು ಮೃತಪಟ್ಟಿದ್ದರು. ಬೆಳ್ತಂಗಡಿ ಪೊಲೀಸ್ ಠಾಣಾ ಯುಡಿಆರ್ ನಂ: 11/2023 ಕಲಂ: 174 ಸಿಆರ್‌ಪಿಸಿ ರಂತೆ ಪ್ರಕರಣ ದಾಖಲಾಗಿದೆ.
ಮಂಗಳೂರು ಆಸ್ಪತ್ರೆಗೆ ಮೃತ ದೇಹ :
ಮೃತ ದೇಹದ ವಾರಿಸುದಾರರ ಪತ್ತೆಗಾಗಿ ಮೃತ ದೇಹವನ್ನು ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಯ (ಶಿಥಿಲೀಕರಣ) ಶವಾಗಾರದಲ್ಲಿರಿಸಲಾಗಿದೆ.
ಪತ್ತೆಗೆ ಮನವಿ :
ಸದರಿ ಮೃತ ಬೆಳಗಾವಿ ನಿವಾಸಿ ಎನ್ನಲಾದ ಪ್ರವೀಣ್ ಪ್ರಾಯ ಸುಮಾರು 35 ವರ್ಷ ಎಂಬವರ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಪೊಲೀಸು ನಿರೀಕ್ಷಕರು ಬೆಳ್ತಂಗಡಿ ಮೊಬೈಲ್: 9480805370, ಬೆಳ್ತಂಗಡಿ ಪೊಲೀಸ್ ಠಾಣೆ ದೂ: 08256-232093 ಅಥವಾ ದ.ಕ ಜಿಲ್ಲಾ ಕಂಟ್ರೋಲ್ ರೂಂ: 9480805300 ಕ್ಕೆ ಕರೆ ಮಾಡಿ ತಿಳಿಸಬೇಕಾಗಿ ಕೋರಲಾಗಿದೆ.
ಮೃತ ವ್ಯಕ್ತಿಯ ಚಹರೆ:
ಸಾದಾ ಸಪೂರ ಶರೀರ, ಗೋಧಿ ಮೈಬಣ್ಣ, ಎಡ ಕೈ ಗಂಟಿನ ಒಳ ತಟ್ಟಿನಲ್ಲಿ ಕಪ್ಪು ಮಚ್ಚೆ, ಸುಮಾರು 8 ಇಂಚು ಉದ್ದದ ತಲೆ ಕೂದಲು, ತೆಳು ಮೀಸೆ ಹಾಗೂ ಗಡ್ಡ ಬಿಟ್ಟಿರುತ್ತಾರೆ ಎಂದು ಪೊಲೀಸರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts

ವಾಟ್ಸಾಪ್ ಸ್ಟೇಟಸ್ ಹಾಕಿದ ವಿಚಾರದಲ್ಲಿ ಜಾತಿ ನಿಂದನೆ, ಹಲ್ಲೆ ಆರೋಪ: ಆರೋಪಿಗಳಿಬ್ಬರಿಗೆ ನ್ಯಾಯಾಂಗ ಬಂಧನ

Suddi Udaya

ಪುಂಜಾಲಕಟ್ಟೆ: ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಬೈಕ್ ಸವಾರ ಸಾವು

Suddi Udaya

ಉಜಿರೆ ಕಾಲೇಜು ವಿದ್ಯಾರ್ಥಿ ವರ್ಷಿತ್ ಹೆಚ್.ಎಂ. ನಾಪತ್ತೆ

Suddi Udaya

ಪುದುವೆಟ್ಟು: ಮಿಯಾರು ನಿವಾಸಿ ಶೇಖರ್ ಗೌಡ ವಿಷ ಸೇವಿಸಿ ಆತ್ಮಹತ್ಯೆ

Suddi Udaya

ಬೆಳ್ತಂಗಡಿ: ಪತ್ನಿಯನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

Suddi Udaya

ಕಳೆಂಜ: ಜಾಗದ ವಿಚಾರವಾಗಿ ಹಲ್ಲೆ, ಬೆದರಿಕೆ: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!