19.6 C
ಪುತ್ತೂರು, ಬೆಳ್ತಂಗಡಿ
November 25, 2024
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಕರಾಡ ಬ್ರಾಹ್ಮಣ ಸಮಾಜದಿಂದ ಸಂಸ್ಕರಣೆ ಹಾಗೂ ನುಡಿನಮನ ಕಾರ್ಯಕ್ರಮ

ಬೆಳ್ತಂಗಡಿ:ಕೀರ್ತಿಶೇಷ ಬಲಿಪ ನಾರಾಯಣ ಭಾಗವತರು ಹಾಗೂ ಕೀರ್ತಿಶೇಷ ವಿಜಯ‌ರಾಘವ ಪಡ್ವೆಟ್ನಾಯರ ಸಂಸ್ಮರಣೆ ಹಾಗೂ ನುಡಿನಮನ ಕಾರ್ಯಕ್ರಮವನ್ನು “ಸಮೃದ್ಧಿ” ಕರಾಡ ಭವನ ಸೋಮಂತಡ್ಕದಲ್ಲಿ ಕರಾಡ ಬ್ರಾಹ್ಮಣ‌ ಸಮಾಜ (ರಿ),ಬೆಳ್ತಂಗಡಿ ಇದರ ವತಿಯಿಂದ ಹಮ್ಮಿಕೊಳ್ಳಲಾಯಿತು. ಯಕ್ಷಗಾನದ ಧ್ರುವತಾರೆ ಕಂಚಿನ ಕಂಠ ಕಂಠದ ಬಲಿಪ ನಾರಾಯಣ ಭಾಗವತರು ಮತ್ತು ಉಜಿರೆಯ ‌ಧಣಿಗಳು,ಧಾರ್ಮಕ ಕ್ಷೇತ್ರದಲ್ಲಿ ಹಾಗೂ ಸಮಾಜ ಸೇವೆಯಲ್ಲಿ ಹೆಸರುವಾಸಿಯಾದಂತಹ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾಗಿದ್ದ ವಿಜಯರಾಘವ ಪಡ್ವೆಟ್ನಾಯರನ್ನು ಸ್ಮರಿಸಿ ಅವರ ಸಾಧನೆಯ‌ ಬಗ್ಗೆ ನೆನೆದು ಶ್ರೀ ಭುಜಬಲಿ ಧರ್ಮಸ್ಥಳ ಮತ್ತು ಶ್ರೀ ದಿವಾಕರ ಆಚಾರ್ಯ ಗೇರುಕಟ್ಟೆ ನುಡಿನಮನವನ್ನು ಸಲ್ಲಿಸಿದರು.

ವಿಜಯ ರಾಘವ ಪಡ್ವೆಟ್ನಾಯರ ಪುತ್ರರಾದ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯರು – ಬಲಿಪರು ಯಕ್ಷಗಾನಕ್ಕೆ ನೀಡಿದ ಕೊಡುಗೆ ಹಾಗು ವಿಜಯ ರಾಘವ ಪಡ್ವೆಟ್ನಾಯರ ಸೇವೆ‌ ,ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು.
ಬಲಿಪರಂತಹ‌ ಮಹಾನ್ ಚೇತನ ಮತ್ತು ಪಡ್ವೆಟ್ನಾಯರಂತಹ‌ ಮಹನೀಯರು ಸಮಾಜದ ಅನರ್ಘ್ಯ ರತ್ನಗಳೆಂದು ಸಾಧನೆಯ‌ನ್ನು ಸ್ಮರಿಸಿ ಕೀರ್ತಿಶೇಷರಿಗೆ ಅಕ್ಷರಾಂಜಲಿಗಳನ್ನು ಕರಾಡ ಬ್ರಾಹ್ಮಣ ಸಮಾಜದ ಅಧ್ಯಕ್ಷರು ಡಾ.ಪ್ರದೀಪ ಆಟಿಕುಕ್ಕೆ ಇವರು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಕರಾಡ ಬಂಧು ಭಗಿನಿಯರು ಹಾಗೂ ವಿಜಯ ರಾಘವ ಪಡ್ವೆಟ್ನಾಯರ ಮತ್ತು ಬಲಿಪ ನಾರಾಯಣ ಭಾಗವತರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.ಮಮತಾ.ವಿ.ಭಟ್ ಸ್ವಾಗತಿಸಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು. ಕಾರ್ಯಕ್ರಮಾನಂತರ ಇಬ್ಬರು ಮಹಾನ್ ಚೇತನರ ಸವಿ ನೆನಪಿಗಾಗಿ ಯಕ್ಷ ಭಾರತಿ ಕನ್ಯಾಡಿ ಇವರ ಸಂಯೋಜನೆಯಲ್ಲಿ “ಶ್ರೀ ರಾಮ ಪರಂಧಾಮ” ಯಕ್ಷಗಾನ ತಾಳಮದ್ದಳೆ ನಡೆಯಿತು.

Related posts

ಎಸ್.ಎಸ್.ಎಲ್.ಸಿ ಫಲಿತಾಂಶ: ಉಜಿರೆ ಅನುಗ್ರಹ ಆಂ.ಮಾ. ಪ್ರೌಢ ಶಾಲೆಗೆ 96.42% ಫಲಿತಾಂಶ

Suddi Udaya

ಜಿಲ್ಲಾಮಟ್ಟದ ಜನಪದ ಗೀತ ಗಾಯನ ಸ್ಪರ್ಧೆ: ವಾಣಿ ಪ.ಪೂ. ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ

Suddi Udaya

ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಡೆಂಗ್ಯೂ ನಿರ್ಮೂಲನೆಗೆ ಸೊಳ್ಳೆ ಉತ್ಪತ್ತಿ ತಾಣಗಳು ಕಂಡುಬಂದರೆ ಪ.ಪಂ. ಮುಖ್ಯಾಧಿಕಾರಿಯನ್ನು ಸಂಪರ್ಕಿಸುವಂತೆ ಕೋರಿಕೆ

Suddi Udaya

ಸ್ಪಂದನ ಪಾಲಿಕ್ಲಿನಿಕ್ ವತಿಯಿಂದ ಮನೆ ಬಾಗಿಲಿಗೆ ಬಂದು ರಕ್ತದ ಸ್ಯಾಂಪಲ್ ಸಂಗ್ರಹಿಸುವ ವ್ಯವಸ್ಥೆ

Suddi Udaya

ಅಳದಂಗಡಿ ಪ.ಪೂ. ಕಾಲೇಜಿನಲ್ಲಿ ನೂತನ ವಿಜ್ಞಾನ ಪ್ರಯೋಗಾಲಯ ಕೊಠಡಿ ಮತ್ತು ಇತರ ಮೂಲಭೂತ ಸೌಕರ್ಯಗಳ ಉದ್ಘಾಟನೆ

Suddi Udaya

ನಾವರ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷರಾಗಿ ಹರೀಶ್ ಕುಲಾಲ್, ಕಾರ್ಯದರ್ಶಿಯಾಗಿ ರತ್ನಾಕರ ಹೆಚ್ ಆಯ್ಕೆ

Suddi Udaya
error: Content is protected !!