September 6, 2026
ಅಪರಾಧ ಸುದ್ದಿ

ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯ ಮಾರಾಟ: ಬೈಕ್ ಸಹಿತ ರೂ. 76 ಸಾವಿರ ಮೌಲ್ಯದ ಮದ್ಯ ವಶ

ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಡಿಡುಪೆ-ಕಜಕ್ಕೆ ಹೋಗುವ ಡಾಮರು ಮಾರ್ಗದ ಎಡಬದಿಯಲ್ಲಿ ದ್ವಿ ಚಕ್ರ ವಾಹನದಲ್ಲಿ ಸತೀಶ್ ಗೌಡ ಬಲಾಯಿದಡ್ಡು, ಮಲವಂತಿಗೆ ಇವರು ಅಕ್ರಮವಾಗಿ ಒಟ್ಟು. 4 ಲೀಟರ್ ಮದ್ಯವನ್ನು ಮಾರಾಟದ ಉದ್ದೇಶಕ್ಕಾಗಿ ಹೊಂದಿರುವುದನ್ನು ಪತ್ತೆಹಚ್ಚಿದ ಅಬಕಾರಿ ಇಲಾಖೆ ಯ ಅಧಿಕಾರಿಗಳು, ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ವಾಹನ ಹಾಗೂ ಸೊತ್ತಿನ ಮೌಲ್ಯ ಸುಮಾರು ರೂ. 76,200 ಎಂದು ಅಂದಾಜಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಸಯ್ಯದ್ ಶಬೀರ್ ಅಬಕಾರಿ ಕಾನ್ಸ್ ಟೇಬಲ್ ರವರಾದ ಭೋಜ ಕೆ, ವಿನೋಯ್ ಸಿ.ಜೆ ಮತ್ತು ವಾಹನ ಚಾಲಕರಾದ ನವೀನ್ ಕುಮಾರ್ ಪಿ. ಭಾಗವಹಿಸಿದ್ದರು. ಪ್ರಕರಣವನ್ನು ಸಯ್ಯದ್ ಶಬೀರ್ ಅಬಕಾರಿ ಉಪ ನಿರೀಕ್ಷಕರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Related posts

ಚಿನ್ನಯ್ಯ ಹೈಕೋರ್ಟ್ ನಲ್ಲಿ ಸಲ್ಲಿಸಿದ ಅರ್ಜಿ ವಜಾ

Suddi Udaya

ಯುವತಿಯರೊಂದಿಗೆ ಅನುಚಿತ ವರ್ತನೆ ಪ್ರಕರಣ: ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

Suddi Udaya

ಕಾವಳಮುಡೂರು ಧೂಮಳಿಕೆ ನಿರ್ಮಾಣ ಹಂತದ ಮನೆಯಲ್ಲಿ, ಜಾನುವಾರು ವಧೆ ಪೊಲೀಸ್ ದಾಳಿ ಆರೋಪಿಗಳು ಪರಾರಿ

Suddi Udaya

ಉಜಿರೆಯಲ್ಲಿ ಕುಶಾಲನಗರದ ವ್ಯಕ್ತಿಯ ಶವ ಪತ್ತೆ

Suddi Udaya

ಉಜಿರೆಗೆ ಹೋಗಿ ಬರುತ್ತೇನೆ ಎಂದ ನಿಡ್ಲೆಯ ವ್ಯಕ್ತಿ ನಾಪತ್ತೆ

Suddi Udaya

ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ನಿಡ್ಲೆ
ಪಿಲಿಕಜೆ ನಿವಾಸಿ ದಿನೇಶ ನೇಣು ಬಿಗಿದು ಆತ್ಮಹತ್ಯೆ

Suddi Udaya
error: Content is protected !!