ಸುದ್ದಿ ಉದಯ ವಾರಪತ್ರಿಕೆ ಲೋಕಾರ್ಪಣೆ ನೂತನ ಕಚೇರಿಯ ಉದ್ಘಾಟನೆ
ಯೂಟ್ಯೂಬ್ ಮತ್ತು ವೆಬ್‌ಸೈಟ್‌ಗೆ ಚಾಲನೆ

Suddi Udaya

Updated on:

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ನೂತನವಾಗಿ ಆರಂಭಗೊಂಡ ಸುದ್ದಿ ಉದಯ ವಾರ ಪತ್ರಿಕೆ ಇದರ ಲೋಕಾರ್ಪಣೆ ಹಾಗೂ ಕಚೇರಿಯ ಉದ್ಘಾಟನೆ, ಯೂಟ್ಯೂಬ್ ಚಾನೆಲ್ ಮತ್ತು ವೆಬ್‌ಸೈಟ್‌ಗೆ ಚಾಲನೆ ಕಾರ್ಯಕ್ರಮ ಹೊಸ ವರ್ಷದ ಶುಭ ದಿನವಾದ ಮಾ. 22ರಂದು ಬೆಳ್ತಂಗಡಿ ಮುಳಿಯ ಜುವೆಲ್ಲರ‍್ಸ್ ಬಳಿಯ ರಕ್ಷಾ ಆಕೇರ್ಡ್‌ನಲ್ಲಿ ವಿಜೃಂಭಣೆಯಿಂದ ಜರುಗಿತು.
ಮಾ.21ರಂದು ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರದಲ್ಲಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ

ಮಠಾಧೀಶರಾದ ಸದ್ಗರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ, ಆಶೀರ್ವಾದಿಸಿ, ಸುದ್ದಿ ಉದಯ ಪತ್ರಿಕೆ ಚೆನ್ನಾಗಿ ಮೂಡಿ ಬಂದಿದೆ. ಪತ್ರಿಕೆಗೆ ತಾಲೂಕಿನ ಓದುಗರ ಪೂರ್ಣಬೆಂಬಲ ಹಾಗೂ ಪ್ರೋತ್ಸಾಹ ದೊರೆಯುತ್ತದೆ. ಪತ್ರಿಕೆಯಲ್ಲಿ ಉತ್ತಮ ವಿಚಾರಗಳು ಪ್ರಕಟಗೊಳ್ಳಬೇಕು. ಈ ಪತ್ರಿಕೆ ಉನ್ನತಿಯನ್ನು ಪಡೆಯಲಿ ಎಂದು ಶುಭ ಹಾರೈಸಿದರು.

ಮಾ.22ರಂದು ಪತ್ರಿಕೆಯ ಕಚೇರಿಯನ್ನು ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ
ಗಳಾದ ಡಾ. ಸತೀಶ್ಚಂದ್ರ ಸುರ್ಯಗುತ್ತು ಉದ್ಘಾಟಿಸಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್‌ಕೃಷ್ಣ ಪಡ್ವೆಟ್ನಾಯ ಅವರು ದೀಪ ಪ್ರಜ್ವಲನೆಗೊಳಿಸಿದರು.

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಲೋಗೋ ಬಿಡುಗಡೆಗೊಳಿಸಿದರು.
ಮಾಜಿ ಸಚಿವರಾದ ಕೆ. ಗಂಗಾಧರ ಗೌಡ ಯೂಟ್ಯೂಬ್ ಗೆ ಚಾಲನೆ ನೀಡಿದರು. ಮಾಜಿ ಮುಖ್ಯ ಸಚೇತಕರಾದ ಕೆ.

ವಸಂತ ಬಂಗೇರ ವೆಬ್‌ಸೈಟ್‌ಗೆ ಚಾಲನೆ ನೀಡಿದರು.
‌ಶ್ರೀ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆಯ ಕೆ. ಮೋಹನ್ ಕುಮಾರ್ ಕಂಪ್ಯೂಟರ್ ಕೊಠಡಿಯನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕರಾದ ಕೆ. ಹರೀಶ್ ಕುಮಾರ್, ವಿಧಾನ ಪರಿಷತ್ ಶಾಸಕರಾದ ಕೆ.

ಪ್ರತಾಪಸಿಂಹ ನಾಯಕ್, ಮಾಜಿ ಶಾಸಕರಾದ ಕೆ. ಪ್ರಭಾಕರ ಬಂಗೇರ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ.ಪಂ ಉಪಾಧ್ಯಕ್ಷ ಜಯಾನಂದ ಗೌಡ, ರಕ್ಷಾ ಆರ್ಕೇಡ್‌ನ ಮಾಲಕರಾದ ರಾಘ್ನೇಶ್, ಬೆಳ್ತಂಗಡಿ ಹೋಲಿ ರೆಡಿಮರ್ ಚಚ್೯ನ ಸೇವಾದಶಿ೯ ಫಾ. ಜೋಯೆಲ್ ಪ್ರೀತಮ್ ರೇಗೋ,

ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ ನಝೀರ್, ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಡ್ಕ, ವಾಣಿ ಶಿಕ್ಷಣ ಸಂಸ್ಥೆಗಳ ಗೌರವ ಅಧ್ಯಕ್ಷ ಹೆಚ್. ಪದ್ಮಗೌಡ, ಬೆಳ್ತಂಗಡಿ ಛೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೃಷಿಕೇಶ್, ಮೀಡಿಯ ಕ್ಲಬ್ ಬೆಳ್ತಂಗಡಿ

ಅಧ್ಯಕ್ಷ ಸತೀಶ್ ಪೆರ್ಲೆ, ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ, ಮಹಿಳಾ ವೃಂದ ಬೆಳ್ತಂಗಡಿಯ ಅಧ್ಯಕ್ಷ ಶ್ರೀಮತಿ ಆಶಾ ಸತೀಶ್, ಬೆಳ್ತಂಗಡಿ ಲ್ಯಾಂಫ್ಸ್ ಸೊಸೈಟಿ ಅಧ್ಯಕ್ಷ ಲಿಂಗಪ್ಪ ನಾಯ್ಕ ಭಾಗವಹಸಿ, ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಪತ್ರಿಕೆಯ ಪ್ರಧಾನ ಸಂಪಾದಕ ಬಿ.ಎಸ್ ಕುಲಾಲ್, ಮಾಲಕ ತುಕರಾಮ್ ಬಿ., ಸಹ ಸಂಪಾದಕ ಸಂತೋಷ್ ಪಿ. ಕೋಟ್ಯಾನ್, ಕಚೇರಿ ವ್ಯವಸ್ಥಾಪಕ ತಿಮ್ಮಪ್ಪ ಗೌಡ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಆನಂದ ಹೊಸಪಟ್ಣ, ಕಚೇರಿ ಸಿಬ್ಬಂದಿ ಭವನೀಸ್ ಉಪಸ್ಥಿತರಿದ್ದರು.
ಸಂತೋಷ್ ಪಿ. ಕೋಟ್ಯಾನ್ ಸ್ವಾಗತಿಸಿದರು. ಯುವ ಸಾಹಿತಿ ಚಂದ್ರಹಾಸ ಬಳಂಜ ಕಾಯ೯ಕ್ರಮ ನಿರೂಪಿಸಿದರು.ಸ್ಮಿತೇಶ್ ಎಸ್. ಬಾಯ೯ ವಂದಿಸಿದರು. ‌ಗಣ್ಯರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ನಾಗರಿಕರು, ಹಿತೈಷಿಗಳು, ಓದುಗರು ಕಾಯ೯ಕ್ರಮರಲ್ಲಿ ಉಪಸ್ಥಿತರಿದ್ದರು.

Leave a Comment

error: Content is protected !!