22.8 C
ಪುತ್ತೂರು, ಬೆಳ್ತಂಗಡಿ
April 4, 2025
ತಾಲೂಕು ಸುದ್ದಿ

ಭಾರತೀಯ ಭೂ ಸೇನೆಯಲ್ಲಿ 16 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಚಂದಪ್ಪ ಗೌಡ: 20 ವರ್ಷಗಳಿಂದ ತುಂಡು ಭೂಮಿಗಾಗಿ ಸರಕಾರಿ ಕಚೇರಿಗಳಿಗೆ ಅಲೆದಾಟ


ಬೆಳ್ತಂಗಡಿ: ಭಾರತೀಯ ಭೂ ಸೇನೆಯಲ್ಲಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಮಾಜಿ ಸೈನಿಕರಿಗೆ ಸರಕಾರದಿಂದ ದೊರೆಯುವ ಜಾಗ ಸೌಲಭ್ಯಕ್ಕಾಗಿ ಕಳೆದ 20 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇನೆ. ಸರಕಾರದಿಂದ ಮಂಜೂರಾತಿ ಆದೇಶವಾದರೂ, ಗಣ್ಯವ್ಯಕ್ತಿಗಳ ಪ್ರಭಾವದಿಂದಾಗಿ ಸರಕಾರದ ಕೆಳ ಮಟ್ಟದ ಅಧಿಕಾರಿಗಳು ಇದನ್ನು ಅನುಷ್ಠಾನ ಮಾಡುತ್ತಿಲ್ಲ, ನನಗೆ ಇನ್ನೂ ನನಗೆ ನ್ಯಾಯ ಸಿಕ್ಕಿಲ್ಲ ಎಂದು ಭಾರತೀಯ ಭೂಸೇನೆಯ ನಿವೃತ್ತ ಯೋಧ ಚಂದಪ್ಪ ಗೌಡ ಆರೋಪಿಸಿದರು.
ಅವರು ಮಾ.೨೩ ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಭಾರತೀಯ ಭೂ ಸೇನೆಯಲ್ಲಿ ಇರುವ ಸಂದರ್ಭದಲ್ಲಿ ಶತ್ರುಗಳ ಗುಂಡು ತಗಲಿ ವಿಕಲ ಚೇತನರಾದ ಬಳಿಕ 2003ರಲ್ಲಿ ನಿವೃತ್ತನಾಗಿದ್ದೇನೆ. ನಿವೃತ್ತರಿಗೆ ಸರಕಾರದಿಂದ ದೊರೆಯುವ ಜಾಗಕ್ಕೆ ಕಾಣಿಯೂರು ಗ್ರಾಮದ 113 ಸರ್ವೆನಂಬ್ರದಲ್ಲಿ ನಿವೃತ್ತ ಸೈನಿಕರಿಗೆ ಮೀಸಲಿಟ್ಟ 13.80 ಎಕ್ರೆ ಸರಕಾರಿ ಜಾಗಕ್ಕೆ ಅರ್ಜಿ ಸಲ್ಲಿಸಿದ್ದು, ಸರಕಾರದ ನಿಯಮ ಅನುಸಾರ ನನಗೆ 7.50 ಎಕ್ರೆ ಜಾಗ ಮಂಜೂರು ಆಗಿತ್ತು. ಆದರೆ ಅಲ್ಲಿಯ ಕೊಲ್ಲಾಜೆ ನಾರಾಯಣ ರಾವ್ ಅವರು ಇದು ತಮ್ಮ ಕುಮ್ಮಿ ಜಾಗ ವೆಂದು ಆಕ್ಷೇಪ ಸಲ್ಲಿಸಿ 2004 ರಲ್ಲಿ ನ್ಯಾಯಾಲಯದಲ್ಲಿ ಕೆಇಟಿ ಹಾಕಿದ್ದು, ಅದು ವಜಾಗೊಂಡಿತ್ತು. ನಂತರ 2007 ರಲ್ಲಿ ಹೈಕೋರ್ಟ್ ನಲ್ಲಿ ರೀಟ್ ಪಿಟಿಶನ್ ಹಾಕಿದ್ದು ಅದು ಡಿಸ್‌ಮಿಸ್ ಆಗಿದೆ. ಸರಕಾರದಿಂದ ಆನೇಕ ಬಾರಿ ಆದೇಶವಾದರೂ ನನ್ನ ಹೆಸರಿಗೆ ಜಾಗ ಮಂಜೂರಾತಿಗೆ ಕೊಲ್ಲಾಜೆಯ ಈಗ ಪಕ್ಷೇತರ ರಾಗಿ ಚುನಾವಣೆಗೆ ನಿಂತಿರುವ ಆದಿತ್ಯ ರಾವ್ ಸೇರಿ ಗಣ್ಯರ ಪ್ರಭಾವದಿಂದ ಸ್ಥಳೀಯ ಗ್ರಾಮಕರಣಿಕರು, ಕಂದಾಯ ಅಧಿಕಾರಿಗಳು ಸರಕಾರದ ಆದೇಶವನ್ನು ಅನುಷ್ಠಾನ ಮಾಡುತ್ತಿಲ್ಲ ಕಳೆದ 20 ವರ್ಷಗಳಿಂದ ಈ ಜಾಗಕ್ಕಾಗಿ, ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಅಧಿಕಾರಿಗಳು ಸೂಕ್ತ ತನಿಖೆ ಮಾಡಿ ನಿವೃತ್ತ ಸೈನಿಕನಿಗೆ ಜಾಗ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

Related posts

ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ವರದಿ ಸಾಲಿನಲ್ಲಿ ರೂ. 229.69 ಕೋಟಿ ವ್ಯವಹಾರ, ರೂ.1.03 ಕೋಟಿ ಲಾಭ, ಸದಸ್ಯರಿಗೆ ಶೇ.12 ಡಿವಿಡೆಂಟ್

Suddi Udaya

ಶಿಬಾಜೆಯ ದಲಿತ ಯುವಕ ಶ್ರೀಧರ್ ಸಾವಿನ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿ ಡಿ.ಎಸ್.ಎಸ್‌ನಿಂದ ಧರ್ಮಸ್ಥಳ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ

Suddi Udaya

ಫೆ.13: ಅರೆಮಲೆಬೆಟ್ಟ ಜಾತ್ರಾ ಮಹೋತ್ಸವ

Suddi Udaya

ಬೆಳಾಲು ಕೊಡೋಳುಕೆರೆ ಕಾಡಿನಲ್ಲಿ ಹೆಣ್ಣು ಮಗು ಪತ್ತೆ ಪ್ರಕರಣ: ಮಗುವಿನ ಪೋಷಕರನ್ನು ಪತ್ತೆಹಚ್ಚಿದ ಪೊಲೀಸರು

Suddi Udaya

ಲೋಕಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ ಯುವ ಮತದಾರರೊಂದಿಗೆ ಸಂವಾದ

Suddi Udaya

ಕಕ್ಕಿಂಜೆ: ಖ್ಯಾತ ಮೇಸ್ತ್ರಿ ಕೆಲಸಗಾರ ಮೊಯಿದಿನ್‌ಕುಂಞಿ ಮೋಣುಚ್ಚ ನಿಧನ

Suddi Udaya
error: Content is protected !!