ಶ್ರೀ ರಾಮಕ್ಷೇತ್ರದಲ್ಲಿ 63ನೇ ವರ್ಷದ ಶ್ರೀರಾಮ ತಾರಕ ಮಂತ್ರ ಸಪ್ತಾಹಕ್ಕೆ ಚಾಲನೆ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಂದಾದೀಪವನ್ನು ಬೆಳಗಿಸಿದ ಶಾಸಕ ಹರೀಶ್ ಪೂಂಜ

Suddi Udaya

ಬೆಳ್ತಂಗಡಿ: ದಕ್ಷಿಣ ಆಯೋಧ್ಯೆಯೆಂದೇ ಖ್ಯಾತಿಯನ್ನು ಪಡೆಯುತ್ತಿರುವ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್, ನಿತ್ಯಾನಂದ ನಗರ, ಧರ್ಮಸ್ಥಳದಲ್ಲಿ 63ನೇ ವರ್ಷದ ಶ್ರೀರಾಮ ತಾರಕ ಮಂತ್ರದ ಸಪ್ತಾಹ ಸಮಾರಂಭ ಮಾ.23 ರಂದು ಆರಂಭಗೊಂಡಿತು.

ಈ ಪವಿತ್ರಪರ್ವಕಾಲದ ದಿವ್ಯ ಸಾನಿಧ್ಯವನ್ನು ಜಗದ್ಗುರು
ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ
ಶ್ರೀರಾಮ ನಾಮಸಪ್ತಾಹ ಸಮಾರಂಭವನ್ನು ಆಖಂಡ ನಂದಾದೀಪವನ್ನು ಬೆಳಗಿಸಿ ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಉದ್ಘಾಟಿಸಿದರು.

ವಿಧಾನ ಪರಿಷತ್ ಶಾಸಕರು
ಗಳಾದ ಕೆ . ಹರೀಶ್ ಕುಮಾರ್ ಮತ್ತು ಕೆ. ಪ್ರತಾಪಸಿಂಹ ನಾಯಕ್, ಪ್ರಮುಖರಾದ ಪೀತಾಂಬರ ಹೇರಾಜೆ, ನ್ಯಾಯವಾದಿ ಭಗೀರಥ ಜಿ., ಜಯಂತ್ ಕೋಟ್ಯಾನ್,
ಚಿದಾನಂದ ಇಡ್ಯಾ, ನ್ಯಾಯವಾದಿ ಕೇಶವ ಗೌಡ ಬೆಳಾಲು, ತಿಮ್ಮಪ್ಪ ಗೌಡ ಬೆಳಾಲು, ತುಕಾರಾಮ ಸಾಲಿಯಾನ್, ರವಿ ಬರಮೇಲು, ಮಂಜುನಾಥ ಶೆಟ್ಟಿ, ಪ್ರಶಾಂತ್ ಪಾರೆಂಕಿ, ಸೀತಾರಾಮ ಬೆಳಾಲು, ಧಮ೯ಣ ಗೌಡ, ಶಿವಕಾಂತ ಗೌಡ,
ಗ್ರಾ.ಪಂ ಸದಸ್ಯ ಹರೀಶ್ ಸುವರ್ಣ, ಸುನೀಲ್, ರವೀಂದ್ರ ಪೂಜಾರಿ ಮೊದಲಾದವರು ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

‌‌ ಶ್ರೀ ಜಗದ್ಗುರು ಆತ್ಮಾನಂದ ಸರಸ್ವತಿ ಸ್ವಾಮೀಜಿಯವವರು ಶ್ರೀ ರಾಮ ಜಯ ರಾಮ ಜಯ ಜಯ ರಾಮ ಎಂಬ ತಾರಕ ಮಂತ್ರವನ್ನು ಪಠಿಸಲು ಪ್ರಾರಂಭಿಸಿ, ಸುಮಾರು 63 ವರ್ಷಗಳಾಗಿವೆ. ರಾಜ್ಯದ ಯಾವುದೇ ಮೂಲೆಯಲ್ಲಿ ಕಂಡು ಕೇಳರಿಯದ ಈ ಏಳು ದಿನಗಳ ಆಹೋ ರಾತ್ರಿ ನಡೆಯುವ ಭಜನೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಭಜನಾ ತಂಡಗಳು ಬಂದು ಭಜನಾ ಸಪ್ತಾಹದಲ್ಲಿ ಭಾಗವಹಿಸಿ ಧನ್ಯತೆಯನ್ನು ಪಡೆಯುತ್ತಾರೆ.

ಮಾ. 23ರಂದು ಶ್ರೀ ಸಿದ್ಧಿವಿನಾಯಕ ಮತ್ತು ಕ್ಷೇತ್ರಪಾಲ ಗಣಪತಿ ದೇವರ ಬಲಿ ಉತ್ಸವ,
ಮಾ.24ರಂದು ಶುಕ್ರವಾರ ರಾತ್ರಿ ಗಂಟೆ 8ಕ್ಕೆ ಸದ್ಗುರು ಶ್ರೀ ನಿತ್ಯಾನಂದ ಸ್ವಾಮಿ, ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಶಿರಡಿ ಸಾಯಿಬಾಬಾ ಗುರುಗಳ ಉತ್ಸವ ಮೂರ್ತಿ ಬಲಿ ಉತ್ಸವ, ಮಾ. 25 ರಂದು ಶನಿವಾರ ರಾತ್ರಿ ಗಂಟೆ 8 ಕ್ಕೆ ಶ್ರೀ ರಾಮ ದೇವರ ’ರಜತ ಪಾಲಕಿ’ ಉತ್ಸವ, ಮಾ. 26 ಆದಿತ್ಯವಾರ ರಾತ್ರಿ ಗಂಟೆ ೮ಕ್ಕೆ ಅನ್ನಪೂರ್ಣೇಶ್ವರಿ ದೇವಿಯ ಬಲಿ ಉತ್ಸವ ಹಾಗೂ ‘ಪುಷ್ಪರಥೋತ್ಸವ’
ಮಾ.27 ಸೋಮವಾರ ರಾತ್ರಿ ಗಂಟೆ ೮ಕ್ಕೆ ದುರ್ಗಾಪರಮೇಶ್ವರಿ ದೇವಿ ಮೂರ್ತಿ ಬಲಿ ಉತ್ಸವ ನಡೆಯಲಿದೆ.

ಜಾತ್ರೋತ್ಸವ:
ಮಾ. 29 ಬುಧವಾರ ರಾತ್ರಿಗಂಟೆ ೮ಕ್ಕೆ ಶ್ರೀ ದತ್ತಾತ್ರೇಯ ಮೂರ್ತಿ ಮತ್ತು ಆಂಜನೇಯ ದೇವರ ಬಲಿ ಉತ್ಸವ ಹಾಗೂ ’ಶ್ರೀ ಹನುಮಾನ್ ರಥೋತ್ಸವ’, ನಡೆಯಲಿದೆ.
ಮಾ. 30 ಗುರುವಾರ ಬೆಳಗ್ಗೆ
ಟ 9.30ಕ್ಕೆ ಶ್ರೀ ರಾಮ ತಾರಕ ಮಂತ್ರ ಯಜ್ಞದ ಮಂಗಳ, ಮಧ್ಯಾಹ್ನ ಶ್ರೀ ರಾಮ ದೇವರ, ಪಾಲಕಿ ಬಲಿ ಉತ್ಸವ, ರಾತ್ರಿ ಗಂಟೆ 7 ರಿಂದ ಕ್ಷೇತ್ರದ ರಕೇಶ್ವರಿ ಹಾಗೂ ಗುಳಿಗ ದೈವಗಳಿಗೆ ನೇಮೋತ್ಸವ, ರಾತ್ರಿ ಗಂಟೆ 10ಕ್ಕೆ “ಮಹಾ ಬ್ರಹ್ಮ ರಥೋತ್ಸವ ಜರುಗಲಿದೆ

ಎ.1 ಶನಿವಾರ ಅದಿ ಪಜಿರಡ್ಕ ಶ್ರೀ ದೇವರಗುಡ್ಡೆ ದೇವಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ, ರಾತ್ರಿ ಗಂಟೆ 8 ರಿಂದ ಸನ್ಯಾಸಿ ಪಂಜಿರ್ಲಿ ಹಾಗೂ ಕಲ್ಲುರ್ಟಿ ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ.

Leave a Comment

error: Content is protected !!