23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಮಲ್ ಜಅ ದಅವಾ ಕೇಂದ್ರದಿಂದ ಒಂದು ಸಾವಿರ ಅರ್ಹ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ

ಬೆಳ್ತಂಗಡಿ: ಕಳೆದ 14 ವರ್ಷಗಳಿಂದ ಉಜಿರೆ ಕಾಶಿಬೆಟ್ಟು ಕೇಂದ್ರದಲ್ಲಿ ಉಜಿರೆ ತಂಙಳ್ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಮಲ್‌ಜ‌ಅ ದ‌ಅವಾ ಮತ್ತು ರಿಲೀಫ್ ಸೆಂಟರ್ ವತಿಯಿಂದ 1 ಸಾವಿರ ಅರ್ಹ ಕುಟುಂಬಗಳಿಗೆ ರಂಝಾನ್ ಆಹಾರ ವಸ್ತುಗಳನ್ನೊಳಗೊಂಡ ಕಿಟ್ ವಿತರಣೆ ನಡೆಯಿತು.

ತಾಲೂಕು ಮತ್ತು ತಾಲೂಕಿನ ಗಡಿ ಪ್ರದೇಶದಲ್ಲಿ ಒಳಗೊಂಡಂತೆ ಒಟ್ಟು 11 ಕೇಂದ್ರಗಳಲ್ಲಿ ಫಲಾನುಭವಿಗಳನ್ನು ಸಂಯೋಜಿಸಿ ವಿತರಣೆ ನಡೆಸಲಾಯಿತು.

ಮುಂಡಾಜೆ ಕೇಂದ್ರದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಕರ್ನಾಟಕ ಸೀರೋ ಮಲಬಾರ್ ಕ್ಯಾಥೊಲಿಕ್ ಅಸೋಸಿಯೇಷನ್ ಪಿಆರ್‌ಒ ಸೆಬಾಸ್ಟಿಯನ್ ಪಿ.ಸಿ, ಶ್ರೀ ಶಾಸ್ಥಾ ವೆಲ್ ರಿಂಗ್ ವರ್ಕ್ಸ್ ಮಾಲಿಕ ಶಿಜು ಕೇರಳ, ಎಸ್‌ಎಮ್‌ಎ ಉಜಿರೆ ಝೋನ್ ಅಧ್ಯಕ್ಷ ಅಬ್ದುಲ್ ಹಮೀದ್ ನೆಕ್ಕರೆ ಮುಂಡಾಜೆ ಕಿಟ್ ಹಸ್ತಾಂತರಿಸಿದರು.
ಎಸ್‌ವೈಎಸ್ ಬೆಳ್ತಂಗಡಿ ಝೋನ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ಮುಂಡಾಜೆ ಪ್ರಸ್ತಾವನೆಗೈದು ಸ್ವಾಗತಿಸಿದರು.
ಮುಂಡಾಜೆ, ಉಜಿರೆ, ಲಾಯಿಲ, ಬದ್ಯಾರ್,ಗುರುವಾಯನಕೆರೆ, ಮದ್ದಡ್ಕ, ಕಲ್ಲೇರಿ, ಸರಳಿಕಟ್ಟೆ, ನೆಲ್ಯಾಡಿ, ಉಪ್ಪಿನಂಗಡಿ, ಆತೂರು ಕೇಂದ್ರಗಳಲ್ಲಿ 110 ಕ್ಕೂ ಅಧಿಕ ಮೊಹಲ್ಲಾಗಳ ಅರ್ಹ ಕುಟುಂಬಗಳಿಗೆ ಎರಡು ದಿನಗಳಲ್ಲಿ ವಿತರಣೆಗಳು ನಡೆದವು.
ಮಲ್‌ಜ‌ಅ ಸಂಸ್ಥೆಯ ಪಿಆರ್‌ಒ ಶರೀಫ್ ಬೆರ್ಕಳ, ಕಾರ್ಯಕರ್ತರಾದ ರಝಾಕ್, ಸುಲೈಮಾನ್ ಕುಂಟಿನಿ, ಅಬೂಬಕ್ಕರ್ ಹಾಜಿ, ಮುಹಮ್ಮದ್ ಎಂ.ಹೆಚ್, ಹಕೀಂ ಮದನಿ ಬೆಳಾಲು, ರಫೀಕ್ ಮದನಿ, ಆಸಿಫ್ ಅಹ್‌ಸನಿ, ಅಶ್ರಫ್ ಸಖಾಫಿ, ನವಾಝ್ ಅಹ್‌ಸನಿ, ಇಲ್ಯಾಸ್ ಮತ್ತು ರಫೀಕ್ ಕುಪ್ಪೆಟ್ಟಿ,
ಹಾಗೂ ಇತರರು ಉಪಸ್ಥಿತರಿದ್ದರು.

Related posts

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸದಸ್ಯ ಶ್ರೀಧರ ಪೂಜಾರಿ ನಿಧನ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ (ಅಕ್ರಮ ಸಕ್ರಮ) ಬಗ‌ರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರ ನೇಮಕ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ., ಪಟ್ಟಣ ಪಂಚಾಯತ್ ಸದಸ್ಯರ ಮತ್ತು ಕಾರ್ಯಕರ್ತರ ಸಭೆ

Suddi Udaya

ತೋಟತ್ತಾಡಿ ನಿವಾಸಿ ಜಯರಾಮ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಅನಂತ ಫಡಕೆ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಮುಂಡಾಜೆ ಉ.ಸ.ಹಿ.ಪ್ರಾ. ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ

Suddi Udaya

ಪ್ಯಾಲೆಸ್ತೀನ್ ದೇಶದ ಜನತೆಗೆ ಬೆಂಬಲ ಸೂಚಿಸಿ ಎಸ್‌ಡಿಪಿಐ ವತಿಯಿಂದ ವಿವಿಧೆಡೆ ಭಿತ್ತಿಪತ್ರ ಪ್ರದರ್ಶನ

Suddi Udaya
error: Content is protected !!