ಬೆಳ್ತಂಗಡಿ: ತಾಲ್ಲೂಕಿನ ಮರೋಡಿ ಗ್ರಾಮದ ಕೊಡಿಚ್ಚೂರು ಎಂಬಲ್ಲಿ ಶಾಸಕ ಹರೀಶ್ ಪೂಂಜ ಅವರ ಅನುದಾನದಲ್ಲಿ ನಿರ್ಮಾಣಗೊಂಡ ‘ಶ್ರೀ ಉಮಾಮಹೇಶ್ವರ ಯಂಗ್ ಸ್ಟಾರ್ ಫ್ರೆಂಡ್ಸ್ ಕ್ರೀಡಾಂಗಣ’ವನ್ನು ಭಾನುವಾರ ನಿವೃತ್ತ ಶಿಕ್ಷಕ ಎಂ.ಕೆ. ಆರಿಗ ಗಾಳಿವನ ಉದ್ಘಾಟಿಸಿದರು.
ಮರೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಶ್ರೀ ಜೈನ್, ಉಪಾಧ್ಯಕ್ಷ ಯಶೋಧರ ಆಚಾರ್ಯ, ಹೊಸ್ಮಾರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ದಿವಾಕರ ಹೆಗ್ಡೆ ಮಯೂರ, ನಿವೃತ್ತ ಶಿಕ್ಷಕ ಅಣ್ಣಪ್ಪ ಹೆಗ್ಡೆ, ಪ್ರಗತಿಪರ ಕೃಷಿಕ ರವೀಂದ್ರ ಹೆಗ್ಡೆ ಶುಭ ಹಾರೈಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಶುಭರಾಜ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಉಮೇಶ್ ಸಾಲಿಯಾನ್, ಅಶೋಕ ಪೂಜಾರಿ, ಸುನಂದಾ, ಯಶೋದಾ, ಉಮಾಮಹೇಶ್ವರ ಯಂಗ್ ಸ್ಟಾರ್ ಫ್ರೆಂಡ್ಸ್ ಸಂಘಟನೆಯ ಗೌರವಾಧ್ಯಕ್ಷ ಯಶೋಧರ ಬಂಗೇರ, ಅಧ್ಯಕ್ಷ ರಾಘವ ಬಂಗೇರ ಇದ್ದರು.
ಕ್ರೀಡಾಂಗಣ ಉದ್ಘಾಟನೆಯ ಪ್ರಯುಕ್ತ ಕ್ರಿಕೆಟ್ ಟೂರ್ನಿ ಮತ್ತು ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು. ಕ್ರಿಕೆಟ್ ಟೂರ್ನಿಯಲ್ಲಿ ಮರೋಡಿ ರಾಮ್‌ಪ್ರಸಾದ್ ಗೆಳೆಯರ ಬಳಗ ಪ್ರಥಮ, ಸಹರಾ ಫ್ರೆಂಡ್ಸ್ ನೆಲ್ಲಿಗುಡ್ಡೆ ದ್ವಿತೀಯ ಸ್ಥಾನ ಪಡೆಯಿತು. ಹಗ್ಗಜಗ್ಗಾಟದಲ್ಲಿ ಉಮಾಮಹೇಶ್ವರ ಫ್ರೆಂಡ್ಸ್ ಪ್ರಥಮ, ಹಂಸ್ಸಾಬ್ ಮರೋಡಿ ದ್ವಿತೀಯ ಸ್ಥಾನ ಪಡೆಯಿತು.
ಸಮಾರೋಪ ಸಮಾರಂಭದಲ್ಲಿ ಶಾಸಕ ಹರೀಶ್ ಪೂಂಜ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಗ್ರಾಮ ಪಂಚಾಯಿತಿ ಸದಸ್ಯ ರತ್ನಾಕರ ಬುಣ್ಣಾನ್ ಮತ್ತಿತರರು ಭಾಗವಹಿಸಿದ್ದರು.