23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ

ಮರೋಡಿ:ಶ್ರೀ ಉಮಾಮಹೇಶ್ವರ ಯಂಗ್ ಸ್ಟಾರ್ ಫ್ರೆಂಡ್ಸ್ ಕ್ರೀಡಾಂಗಣ ಉದ್ಘಾಟನೆ

ಬೆಳ್ತಂಗಡಿ: ತಾಲ್ಲೂಕಿನ ಮರೋಡಿ ಗ್ರಾಮದ ಕೊಡಿಚ್ಚೂರು ಎಂಬಲ್ಲಿ ಶಾಸಕ ಹರೀಶ್‌ ಪೂಂಜ ಅವರ ಅನುದಾನದಲ್ಲಿ ನಿರ್ಮಾಣಗೊಂಡ ‘ಶ್ರೀ ಉಮಾಮಹೇಶ್ವರ ಯಂಗ್‌ ಸ್ಟಾರ್‌ ಫ್ರೆಂಡ್ಸ್‌ ಕ್ರೀಡಾಂಗಣ’ವನ್ನು ಭಾನುವಾರ ನಿವೃತ್ತ ಶಿಕ್ಷಕ ಎಂ.ಕೆ. ಆರಿಗ ಗಾಳಿವನ ಉದ್ಘಾಟಿಸಿದರು.

ಮರೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಶ್ರೀ ಜೈನ್‌, ಉಪಾಧ್ಯಕ್ಷ ಯಶೋಧರ ಆಚಾರ್ಯ, ಹೊಸ್ಮಾರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ದಿವಾಕರ ಹೆಗ್ಡೆ ಮಯೂರ, ನಿವೃತ್ತ ಶಿಕ್ಷಕ ಅಣ್ಣಪ್ಪ ಹೆಗ್ಡೆ, ಪ್ರಗತಿಪರ ಕೃಷಿಕ ರವೀಂದ್ರ ಹೆಗ್ಡೆ ಶುಭ ಹಾರೈಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಶುಭರಾಜ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಉಮೇಶ್ ಸಾಲಿಯಾನ್‌, ಅಶೋಕ ಪೂಜಾರಿ, ಸುನಂದಾ, ಯಶೋದಾ, ಉಮಾಮಹೇಶ್ವರ ಯಂಗ್‌ ಸ್ಟಾರ್‌ ಫ್ರೆಂಡ್ಸ್‌ ಸಂಘಟನೆಯ ಗೌರವಾಧ್ಯಕ್ಷ ಯಶೋಧರ ಬಂಗೇರ, ಅಧ್ಯಕ್ಷ ರಾಘವ ಬಂಗೇರ ಇದ್ದರು.

ಕ್ರೀಡಾಂಗಣ ಉದ್ಘಾಟನೆಯ ಪ್ರಯುಕ್ತ ಕ್ರಿಕೆಟ್‌ ಟೂರ್ನಿ ಮತ್ತು ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು. ಕ್ರಿಕೆಟ್‌ ಟೂರ್ನಿಯಲ್ಲಿ ಮರೋಡಿ ರಾಮ್‌ಪ್ರಸಾದ್‌ ಗೆಳೆಯರ ಬಳಗ ಪ್ರಥಮ, ಸಹರಾ ಫ್ರೆಂಡ್ಸ್‌ ನೆಲ್ಲಿಗುಡ್ಡೆ ದ್ವಿತೀಯ ಸ್ಥಾನ ಪಡೆಯಿತು. ಹಗ್ಗಜಗ್ಗಾಟದಲ್ಲಿ ಉಮಾಮಹೇಶ್ವರ ಫ್ರೆಂಡ್ಸ್‌ ಪ್ರಥಮ, ಹಂಸ್ಸಾಬ್‌ ಮರೋಡಿ ದ್ವಿತೀಯ ಸ್ಥಾನ ಪಡೆಯಿತು.

ಸಮಾರೋಪ ಸಮಾರಂಭದಲ್ಲಿ ಶಾಸಕ ಹರೀಶ್‌ ಪೂಂಜ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್‌, ಗ್ರಾಮ ಪಂಚಾಯಿತಿ ಸದಸ್ಯ ರತ್ನಾಕರ ಬುಣ್ಣಾನ್‌ ಮತ್ತಿತರರು ಭಾಗವಹಿಸಿದ್ದರು.

Related posts

ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಭಿವೃದ್ಧಿ ಹೆಸರಲ್ಲಿ ದೂಳು ತಿನ್ನಿಸಬೇಡಿ, ರಸ್ತೆ ಅಗಲೀಕರಣ ಜನಸ್ನೇಹಿಯಾಗಿರಲಿ, ರಸ್ತೆ ಬೇಕು ದೂಳು ಬೇಡ ನಾಮಫಲಕ ಅಳವಡಿಕೆ:

Suddi Udaya

ಉಜಿರೆ: ತಾಲೂಕು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಾಮೂಹಿಕ ಗೌರಿ ಪೂಜೆ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ

Suddi Udaya

ಕುವೆಟ್ಟು ಕೋಡಿಮನೆ ನಿವಾಸಿ ಕಲ್ಯಾಣಿ ನಿಧನ

Suddi Udaya

ವಾಲಿಬಾಲ್ ಪಂದ್ಯಾಟ: ವಾಣಿ ಆಂ.ಮಾ. ಪ್ರೌಢ ಶಾಲೆ ಹುಡುಗರ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಮುಖ್ಯ ಕಾರ್ಯನಿರ್ವಣಧಿಕಾರಿ ಸತ್ಯ ಶಂಕರ್ ಕೆ.ಜಿರಿಗೆ ಬೀಳ್ಕೊಡುಗೆ ಹಾಗೂ ಗೌರಾರ್ಪಣೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಬೆಳಾಲಿನ ಪ್ರಗತಿಪರ ಕೃಷಿಕ ಶಿವಪ್ಪಗೌಡರಿಗೆ ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ ಅವಾರ್ಡ್

Suddi Udaya
error: Content is protected !!