24.4 C
ಪುತ್ತೂರು, ಬೆಳ್ತಂಗಡಿ
April 4, 2025
ಕರಾವಳಿ

ಬೆಳ್ತಂಗಡಿ ತಾಲೂಕು ಮಾರಾಟಿ ಸಮಾಜ ಸೇವಾ ಸಂಘ:ಕುಲದೇವಿ ಶ್ರೀ ಆದಿಶಕ್ತಿ ಮಹಮ್ಮಾಯಿ ದೇವಿಯ ಗೊಂದೋಳು ಪೂಜೆ

ಉಜಿರೆ: ಬೆಳ್ತಂಗಡಿ ತಾಲೂಕು ಮಾರಾಟಿ ಸಮಾಜ ಸೇವಾ ಸಂಘ (ರಿ) ಬೆಳ್ತಂಗಡಿ. ಇವರ ನೇತೃತ್ವದಲ್ಲಿ ಮಾ.26 ರಂದು ಆದಿತ್ಯವಾರ ಮಾರಾಟಿ ನಾಯ್ಕ ಕುಲದೇವಿ ಶ್ರೀ ಆದಿಶಕ್ತಿ ಮಹಮ್ಮಾಯಿ ದೇವಿಯ ಸಾರ್ವಜನಿಕ ಗೊಂದೋಳು ಪೂಜೆಯು ಸಂಭ್ರಮ ಸಡಗರ ವಿಜ್ರಮ್ಮನೆಯಿಂದ ಸಾವಿರಾರು ಜನರ ಭಾಗಾವಹಿಸುವಿಕೆಯಲ್ಲಿ ಮಾರಾಟಿ ಸಮುದಾಯ ಭವನ ಉಜಿರೆ ಇಲ್ಲಿ ನಡೆಯಿತು.


‌ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಡಾ ಕೆ ಸುಂದರ್ ನಾಯ್ಕ IFS ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ನಿವೃತ್ತ) ಮತ್ತು ನಿಕಟ ಪೂರ್ವ ಕುಲಸಚಿವರು ಮಂಗಳೂರು ವಿಶ್ವವಿದ್ಯಾನಿಲಯ ಇವರು ಮಾತಾಡುತ್ತಾ ನಮ್ಮೆಲ್ಲರನ್ನು ಒಗ್ಗೂಡಿಸುವ ದೊಡ್ಡ ಶಕ್ತಿಯಾಗಿ ಬೆಳೆದು ನಮ್ಮ ಜನಾಂಗದ ಅಭ್ಯುದಯಕ್ಕಾಗಿ ಕೆಲಸ ಮಾಡುವ ಮಹಾಸಂಘ ಆಗಬೇಕಾಗಿದೆ ಈ ದೆಸೆಯಲ್ಲಿ ನಮ್ಮ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಿ ಅವರ ಹಕ್ಕುಗಳನ್ನು ರಕ್ಷಣೆ ಮಾಡುವ ಕಾರ್ಯಗಳು ಆಗಬೇಕಿದೆ ನಮ್ಮ ಸಂಘಕ್ಕೆ ದೊಡ್ಡ ಸಮುದಾಯ ಭವನದ ರಚನೆಯ ನೀಲಿ ನಕಾಶೆಯೊಂದಿಗೆ ಸರಕಾರದ ಗಮನಸೆಳೆದು ಅದಕ್ಕೆ ಬೇಕಾಗುವ ಆರ್ಥಿಕ ವ್ಯವಸ್ಥೆಯನ್ನು ಮಾಡಬೇಕು ನಮ್ಮ ಜನರ ಸಮಸ್ಯೆಗಳನ್ನು ಅರಿತು ಅದರ ಪರಿಹಾರಕ್ಕಾಗಿ ನಾವು ಸಂಘವಾಗಿ ಮಧ್ಯ ಪ್ರವೇಶ ಮಾಡಬೇಕು ಎಂದು ಹೇಳಿದರು.


ಡಾಕ್ಟರ್ ಬಿ ನಾರಾಯಣ್ ನಾಯ್ಕ ಹಿರಿಯ ಮಕ್ಕಳ ತಜ್ಞರು ಮತ್ತು ಮ್ಯಾನೇಜರ್ ಟ್ರಸ್ಟಿ ಶಾರದಾ ಮರಾಟಿ ಬೋರ್ಡಿಂಗ್ ಹಾಲ್ ಪೆರ್ಲ ಇವರು ನಮ್ಮ ಸಂಘ ಇರುವುದು ನಮ್ಮ ಪದವಿ ಪ್ರತಿಷ್ಠೆಗಲ್ಲ ನಮ್ಮ ಜನರಿಗೆ ಸಮಸ್ಯೆಗಳು ಬಂದಾಗ ಹಾಗೂ ನಮ್ಮ ಸಮುದಾಯದ ಹಕ್ಕುಗಳಿಗೆ ತೊಂದರೆಯಾದಾಗ ನಾವುಗಳು ಅರಿವು ಮೂಡಿಸಿ ಒಟ್ಟಾಗಿ ಜನರನ್ನು ಸೇರಿಸಿ ಹೋರಾಟ ಮಾಡುವ ಕಾರ್ಯಕ್ರಮ ಮಾಡುವ ದೊಡ್ಡ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಪ್ರಸಾದ್ ನಾಯ್ಕ್ ಸುರ್ಯ ನಡ ಮೆನೇಜರ್ ಬ್ಯಾಂಕ್ ಆಫ್ ಬರೋಡ ಇವರು ನಾವು ಶಕ್ತಿ ಸ್ವರೂಪಿಣಿಯನ್ನು ಪೂಜಿಸುವ ನಾವು ನಮ್ಮ ಸಮುದಾಯ ಮತ್ತು ಜನರ ರಕ್ಷಣೆಗೆ ಸಮಾಜದ ಜೊತೆ ನಿರಂತರ ಸಂಘರ್ಷ ಮಾಡಿ ಬದುಕಬೇಕಾದಿದೆ ಅದಕ್ಕಾಗಿ ನಾವು ಆದಿಶಕ್ತಿ ಶ್ರೀ ಮಹಮ್ಮಾಯಿ ದೇವಿಯ ಗೊಂದೋಳು ಪೂಜೆಯನ್ನು ಮಾಡಿ ನಮಗೆ ಮತ್ತು ನಮ್ಮ ಸಂಘಕ್ಕೆ ಶಕ್ತಿ ನೀಡುವ ವರವನ್ನು ಬೇಡುತ್ತೇವೆ ನಾವುಗಳು ನಮ್ಮ ವಂಶದ ಶಿವಾಜಿ ಮಹಾರಾಜರ ಜೀವನ ಹೋರಾಟ ಗಳ ಬಗ್ಗೆ ಮಾತಾಡುತ ಅವರು ಶಿವಾಜಿಯ ಕೆಲಸ ಮತ್ತು ಹೋರಾಟಗಳನ್ನು ನಮ್ಮಲ್ಲಿ ಕೂಡ ಅಳವಡಿಸಿಕೊಳ್ಳಬೇಕು ಎಂದು ಅಧ್ಯಕ್ಷರು ಮಾತಾಡಿದರು.


ಕಾರ್ಯಕ್ರಮದಲ್ಲಿ ವಸಂತ ನಾಯ್ಕ, ನಡ ಅಧ್ಯಕ್ಷರು ಸ್ಪಂದನ ದ. ಕ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ) ಬೆಳ್ತಂಗಡಿ, ಲಿಂಗಪ್ಪನಾಯ್ಕ ಮುರತ್ತ ಕೋಡಿ ಉರುವಾಲು ಅಧ್ಯಕ್ಷರು ಶ್ರೀ ಮಹಮ್ಮಾಯಿ ಕ್ಷೇ. ಸೇ. ಟ್ರಸ್ಟ್ (ರಿ ) ಅಣ್ಣಪ್ಪ ನಾಯ್ಕ ಬಾಳೆಗೂಳಿ ಪೆರ್ಲ ಉಪಸ್ಥಿತರಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತೋಷ್ ನಾಯ್ಕ ಅತ್ತಾಜೆ ಅಧ್ಯಕ್ಷರು ಬೆಳ್ತಂಗಡಿ ತಾಲೂಕು ಮಾರಾಟಿ ಸಮಾಜ ಸೇವಾ ಸಂಘ (ರಿ ) ಇವರು ಪಾಸ್ತವಿಕವಾಗಿ ಮಾತಾಡಿದರು ಕಾರ್ಯಕ್ರಮವನ್ನು ತಿಮ್ಮಯ್ಯ ನಾಯ್ಕ ಉಜಿರೆ ಇವರು ನಿರೂಪಣೆ ಮಾಡಿ ಸದಾಶಿವ ಕಡಿರುದ್ಯಾವರ ಧನ್ಯವಾದವಿತ್ತರು.

ಗೌರವಾಪ೯ಣೆ :
ಕಾರ್ಯಕ್ರಮದಲ್ಲಿ ಬೊಮ್ಮನಾಯ್ಕ ಮಾಚಾರ ಉಜಿರೆ, ಸಂತೋಷ್ ನಾಯ್ಕ ಬೆಳಾಲು, ಯಶೋಧರ ಯುಪಿ, ಬಾಲಕೃಷ್ಣ ನಾಯ್ಕ,ರಾಕೇಶ್ ನಾಯ್ಕ, ಸಿಂಚನ, ಚೆನ್ನಕೇಶವ ನಾಯ್ಕ ಇವರಿಗೆ ವೇದಿಕೆಯಲ್ಲಿ ಶಾಲುಹೊದಿಸಿ ಸ್ಮರಣಿಕೆ ನೀಡಿ ಸನ್ಮಾನ ಮಾಡಿ ಗೌರವಿಸಲಾಯಿತು. ಸಂಘದ ತಾಲೂಕು ಪದಾಧಿಕಾರಿಗಳು, ಸದಸ್ಯರುಗಳು ಸೇರಿ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು ವಿಶೇಷವಾಗಿ ಗೊಂದೋಳು ಪೂಜೆಯ ಯಶಸ್ವಿಗಾಗಿ ರಾತ್ರಿ ಹಗಲು ಕೆಲಸ ಮಾಡಿದ ಪ್ರತಿಯೊಬ್ಬ ಕಾರ್ಯಕರ್ತರನ್ನು ಸಂಘದ ವತಿಯಿಂದ ವಿಶೇಷವಾಗಿ ನೆನಪಿಸುವುದರ ಮೂಲಕ ಅಭಿನಂದಿಸಲಾಯಿತು.
ಒಟ್ಟು ಕಾರ್ಯಕ್ರಮದ ಜವಾಬ್ದಾರಿಯನ್ನು ನಮ್ಮ ಸಂಘ ದ ಸಂಚಾಲಕರು ಆದ ಪ್ರಶಾಂತ್ ಕುಮಾರ್ ಯು ಪಿ ನಾಯ್ಕ ಇವರು ಯಶಶ್ವಿಗೊಳಿಸಿದರು.

ಶಾಸಕ ಹರೀಶ್ ಪೂಂಜ ಭೇಟಿ:
ವಿಶೇಷವಾಗಿ ಶ್ರೀ ಮಹಮ್ಮಾಯಿ ದೇವಿಯ ಗೊಂದೋಳು ಪೂಜೆಗೆ ತಾಲ್ಲೂಕಿನ ನೆಚ್ಚಿನ ಶಾಶಕರಾದ ಹರೀಶ್ ಪೂಂಜಾ ಭಾಗವಹಿಸಿ ಶ್ರೀ ದೇವಿಯ ಆಶೀರ್ವಾದ ಪಡೆದು ಗಂಧ ಪ್ರಸಾದ ಸ್ವೀಕರಿಸಿದರು.

Related posts

ಉಜಿರೆ: ಬೆನಕ ಆಸ್ಪತ್ರೆಯಲ್ಲಿ ನೂತನ “ವೆಂಟಿಲೇಟರ್” ಉದ್ಘಾಟನೆ

Suddi Udaya

ಮೈರಲ್ಕೆ ಓಡಿಲ್ನಾಳ: ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ಬ್ರಹ್ಮಕಲಶ ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕೆಲಸ

Suddi Udaya

ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ತರಬೇತಿ ಉದ್ಘಾಟನೆ

Suddi Udaya

ಕಳುವಾದ ಮೊಬೈಲ್ ಫೋನ್ ಗಳನ್ನು 24 ಗಂಟೆಯಲ್ಲಿ ಶೀಘ್ರವಾಗಿ ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಪೊಲೀಸರು

Suddi Udaya

ಮೊಗ್ರು ಕಡಮ್ಮಾಜೆ ಫಾರ್ಮ್ಸ್ ನಲ್ಲಿ 3 ದಿನ ನಡೆಯಲಿರುವ ಮೀನು ಮೇಳಕ್ಕೆ ಚಾಲನೆ: ವಿಶೇಷ ಆಕರ್ಷಣೆ ಮೀನಿಗೆ ಗಾಳ ಹಾಕುವ ಸ್ಪರ್ಧೆ

Suddi Udaya

ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನಲ್ಲಿ ಆಟಿದ ಆಯನ ವಿಶೇಷ ಕಾರ್ಯಕ್ರಮ

Suddi Udaya
error: Content is protected !!