ಬೆಳ್ತಂಗಡಿ: 2021-22 ನೇ ಸಾಲಿನ ತೃತೀಯ ಚರಣ ಕಬ್, ಸುವರ್ಣ ಗರಿ ಬುಲ್ ಬುಲ್, ತೃತೀಯ ಸೋಪಾನ ಸ್ಕೌಟ್ಸ್ ಮತ್ತು ಗೈಡ್ಸ್, ನಿಪುನ್ರೋವರ್ಸ್ ಮತ್ತು ರೇಂಜರ್ಸ್ ಪ್ರಶಸ್ತಿ ಪತ್ರ ಪ್ರಧಾನ ಸಮಾರಂಭವು ಜಿಲ್ಲಾಧಿಕಾರಿಗಳ ನಿವಾಸದಲ್ಲಿ ನಡೆದು ಮುಂಡಾಜೆ ಶಾಲೆಯ ಮೂರು ಮಂದಿ ವಿದ್ಯಾರ್ಥಿಗಳು ಪ್ರಶಸ್ತಿಯ ಗೌರವಪತ್ರ ಸ್ವೀಕರಿಸಿದ್ದಾರೆ.
ವಿದ್ಯಾರ್ಥಿಗಳಾದ ಸಂಮೃದ್ದಿ, ಆಶಿಫಾ ಎ.ಆರ್ ಮತ್ತು ಚಿನ್ಮಯಿ ಇವರೇ ಜಿಲ್ಲಾಧಿಕಾರಿಯಿಂದ ಪ್ರಶಸ್ತಿ ಸ್ವೀಕರಿಸಿದವರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿಗಳೂ ಆದ ರವಿಕುಮಾರ್ (ಐ ಎ ಎಸ್), ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ (ಐ ಎ ಎಸ್), ಜಿಲ್ಲಾ ಮುಖ್ಯ ಆಯುಕ್ತ ಡಾ.ಎಂ ಮೋಹನ್ ಆಳ್ವ, ಮಾಜಿ ಸಚಿವರು ಹಾಗೂ ಸ್ಕೌಟ್ ಮಾಜಿ ಆಯುಕ್ತ ನಾಗರಾಜ್ ಶೆಟ್ಟಿ, ಜಿಲ್ಲಾ ಗೈಡ್ ಆಯುಕ್ತೆ (ಪ್ರಭಾರ) ಹಾಗೂ ಜಿಲ್ಲಾ ಜಂಟಿ ಕಾರ್ಯದರ್ಶಿ ಜಯವಂತಿ ಸೋನ್ಸ್, ಜಿಲ್ಲಾ ಕಾರ್ಯದರ್ಶಿ ಎಂ ಜಿ ಕಜೆ, ಜಿಲ್ಲಾ ಕೋಶಾಧಿಕಾರಿ ಅನಿಲ್ ಕುಮಾರ್, ರಾಜ್ಯ ಸ್ಕೌಟ್ ಪ್ರತಿನಿಧಿ ತ್ಯಾಗo ಹರೇಕಳ, ಜಿಲ್ಲಾ ಸ್ಕೌಟ್ ಸಂಘಟನಾ ಶಿಕ್ಷಕ ನವೀನ್ ಚಂದ್ರ ಅಂಬೂರಿ, ಜಿಲ್ಲಾ ಗೈಡ್ ಸಂಘಟನಾ ಶಿಕ್ಷಕಿ ಫ್ಲೇವಿ ಡಿ ಸೋಜ, ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ, ಜಿಲ್ಲಾ ಸಹಾಯಕ ಆಯುಕ್ತರು, ಸ್ಥಳೀಯ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶತಮಾನೋತ್ಸವ ಆಚರಿಸಿರುವ ಮುಂಡಾಜೆ ಶಾಲೆಯ ಕಬ್ಸ್ ಬುಲ್ ಬುಲ್ಸ್ ಘಟಕದ ಫ್ಲಾಕ್ ಲೀಡರ್ ಸೇವಂತಿ ನಿರಂಜನ ಅವರು ಸದ್ರಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ. ಶಾಲಾ ಎಸ್‌ಡಿಎಂಸಿ ಹಾಗೂ ಅಧ್ಯಾಪಕವೃಂದ ಪೂರಕ ಸಹಕಾರ ನೀಡಿರುತ್ತಾರೆ.