23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿ

ಪುದುವೆಟ್ಟು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನೆ

ಪುದುವೆಟ್ಟು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟು ಇಲ್ಲಿ 2022-23ನೇ ಸಾಲಿನ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಬೇಸಿಗೆ ಶಿಬಿರದ ಉದ್ಘಾಟನೆ ಯನ್ನು ಸದಾನಂದ ಮುಂಡಾಜೆ ಯವರು ನೆರವೇರಿಸಿ ದರು.
ಬೇಸಿಗೆ ಶಿಬಿರದ ಮೊದಲ ದಿನದ ಸಂಪನ್ಮೂಲ ವ್ಯಕ್ತಿಯಾಗಿ ಸುನಿಲ್ ಧರ್ಮಸ್ಥಳ ಆಗಮಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಶೀನಪ್ಪ ಗೌಡ ರವರು ವಹಿಸಿದರು.
ಕಾರ್ಯಕ್ರಮವನ್ನು ಉದ್ಘಾಟನೆ ಗೊಳಿಸಿ ಮಾತನಾಡಿದ ಸದಾನಂದ ರವರು ಇಂತಹ ಬೇಸಿಗೆ ಶಿಬಿರದ ಸಧ್ಬಳಕೆಯನ್ನು ಯನ್ನು ವಿದ್ಯಾರ್ಥಿಗಳು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಂಡು ತಮ್ಮ ನಿತ್ಯ ಜೀವನದಲ್ಲಿ ಬಳಕೆ ಮಾಡಿಕೊಳ್ಳಬೇಕಾಗಿ ತಿಳಿಸಿದರು. ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶೀನಪ್ಪ ಗೌಡ ಈ ವರ್ಷ ನಮಗೆ ಮಾತೃ ಶ್ರೀ ಹೇಮಾವತಿ ಅಮ್ಮ ನವರ ಮಾರ್ಗದರ್ಶನ ದಲ್ಲಿ ಉತ್ತಮ ಮಾರ್ಗದರ್ಶಕರು ಸಿಕ್ಕಿದ್ದಾರೆ ಇದರ ಬಳಕೆ ಯನ್ನು ಮಾಡಿಕೊಂಡು ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಕಾರ್ಯ ರೂಪಕ್ಕೆ ತರಬೇಕು ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಸದಾನಂದ ರವರು ತಾವೇ ರಚಿಸಿರುವ ಜಲ್ಲಿ ಕಲ್ಲುಗಳು ಎಂಬ ಪುಸ್ತಕ ಶಾಲೆಯ ಗ್ರಂಥಾಲಯಕ್ಕೆ ನೀಡಿದರು.ಶಾಲೆಯ ಹಿರಿಯ ಶಿಕ್ಷಕರಾದ ಜೋಸೆಫ್ ಪಿ.ಎಂ ರವರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಮೊದಲ ದಿನದ ಬೇಸಿಗೆ ಶಿಬಿರದಲ್ಲಿ ಸುನೀಲ್ ರವರು ರಂಗ ಗೀತೆ, ಜಾಗೃತಿ ಗೀತೆ, ಜಾನಪದ ಗೀತೆ, ನಾಟಕಭಿನಯ ದ ಬಗ್ಗೆ ಮಕ್ಕಳಿಗೆ ಉತ್ತಮ ರೀತಿಯಲ್ಲಿ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ನಿಶಾಂತ್ ಸ್ವಾಗತಿಸಿ, ಶ್ರೀಮತಿ ಶೀಲಾ ಧನ್ಯವಾದಗೈದ ಕಾರ್ಯಕ್ರಮವನ್ನು ಶ್ರೀಮತಿ ಸುಜಾತಾ ಬಿ ರವರು ನಿರೂಪಿಸಿದರು. ಶಾಲೆಯ ಎಲ್ಲಾ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.

Related posts

ಬೆಳ್ತಂಗಡಿ ವಾಣಿ ಪ.ಪೂ. ಕಾಲೇಜಿಗೆ ಶೇ.98.17 ಫಲಿತಾಂಶ

Suddi Udaya

ಡಿ. 02: ಉಜಿರೆಯಲ್ಲಿ ಜಿಲ್ಲಾಮಟ್ಟದ ಶ್ರೀ ಭಗವದ್ಗೀತಾ ಸ್ಪರ್ಧೆ

Suddi Udaya

ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಸುದ್ದಿ ಉದಯ ಫಲಶ್ರುತಿ: ನಿಡ್ಲೆ ಕಂರ್ಬಿತ್ತಿಲು ಎಂಬಲ್ಲಿ ಅಪಾಯದಂಚಿನಲ್ಲಿದ್ದ ಬೃಹತ್ ಗಾತ್ರದ ಮರ ತೆರವು

Suddi Udaya

ಅಸೌಖ್ಯದಿಂದ ಕೊಕ್ರಾಡಿ ಯುವಕ ಸಾವು

Suddi Udaya

ಉಜಿರೆ ಎಸ್ ಡಿ ಎಂ ಕಾಲೇಜಿಗೆ ಡಾ. ವೀರೇಂದ್ರ ಹೆಗ್ಗಡೆಯವರ ಭೇಟಿ

Suddi Udaya
error: Content is protected !!