ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ಉಜಿರೆ ವಲಯ ಸಮಿತಿ ಮಹಾಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ

Suddi Udaya

Updated on:

ಉಜಿರೆ: ಉಜಿರೆ ವಲಯ ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ಉಜಿರೆ ವಲಯ ಸಮಿತಿಯ ಮಹಾಸಭೆಯು ಮಾ.28ರಂದು ಶಾರದಾ ಮಂಟಪದಲ್ಲಿ ವಲಯದ ಅಧ್ಯಕ್ಷೆ ವೇದಾವತಿ ಜನಾರ್ದನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕುಶಾಲಪ್ಪ ಗೌಡ ಇವರು ಸರಕಾರದಿಂದ ಸಿಗುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಇದರ ಪ್ರಯೋಜನ ಪಡೆಯುವಂತೆ ವಿನಂತಿಸಿದರು. ಬೆಳ್ತಂಗಡಿ ತಾಲೂಕಿನಲ್ಲಿ ಹಲವು ಜನರಿಗೆ ಉಚಿತವಾಗಿ ಮೆಷೀನ್ ಹಾಗೂ ಆರ್ಥಿಕ ಧನ ಸಹಾಯ ದೊರೆತಿರುವುದು ನಮ್ಮ ಟೈಲರ್ ಸಂಘಟನೆಯಿಂದ ಎಂದು ತಿಳಿಸಿದರು..

ಕ್ಷೇತ್ರ ಸಮಿತಿ ಕಾರ್ಯದರ್ಶಿ ನಾಗೇಶ್ ಉಜಿರೆ, ಕ್ಷೇತ್ರ ಕೋಶಾಧಿಕಾರಿ ಜಯಂತಿ ಚಿದಾನಂದ್, ವಲಯದ ಕಾರ್ಯದರ್ಶಿ ರೂಪ ಜಗದೀಶ್, ವಲಯದ ಕೋಶಾಧಿಕಾರಿ ಶುಭಲತ ಕನ್ಯಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಭೆಯಲ್ಲಿ 37 ಜನರಿಗೆ ಗುರುತಿನ ಕಾರ್ಡ್ ವಿತರಣೆ ಮಾಡಲಾಯಿತು ಹೊಸ ಸದಸ್ಯರ ನೋಂದಾವಣೆ ಮಾಡಲಾಯಿತು.

ಈ ಸಂದರ್ಭ ಮುಂದಿನ ಎರಡು ವರ್ಷದ ಅವಧಿಗೆ ನೂತನ ಪದಾಧಿಕಾರಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ರೂಪ ಜಗದೀಶ್ ಧರ್ಮಸ್ಥಳ, ಕಾರ್ಯದರ್ಶಿಯಾಗಿ ಝೀನತ್ ಉಜಿರೆ ಆಯ್ಕೆಯಾದರು.
ಜೊತೆ ಕಾರ್ಯದರ್ಶಿಯಾಗಿ ಭಾಗ್ಯಜ್ಯೋತಿ, ಕೋಶಾಧಿಕಾರಿಯಾಗಿ ಬಾಲಕೃಷ್ಣ, ಕ್ಷೇತ್ರ ಸಮಿತಿಗೆ ವಿನೋದ, ಜಯ ಚಿದಾನಂದ್, ವಿನುತ, ವೇದಾವತಿ ಜನಾರ್ಧನ, ನಾಗೇಶ್ ಉಜಿರೆ, ಉಪಾಧ್ಯಕ್ಷರಾಗಿ ವಿಠಲ, ಸವಿತಾ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಮಮತಾ ಕಲ್ಮಂಜ, ವೇದಾವತಿ ಕನ್ಯಾಡಿ, ನವೀನ, ವಾಣಿ, ಹರಿಣಾಕ್ಷಿ ಇವರನ್ನು ಆಯ್ಕೆ ಮಾಡಲಾಯಿತು.

ಝೀನತ್ ಉಜಿರೆ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಭಾಗ್ಯಜ್ಯೋತಿ ಧನ್ಯವಾದವಿತ್ತರು.

Leave a Comment

error: Content is protected !!