29.2 C
ಪುತ್ತೂರು, ಬೆಳ್ತಂಗಡಿ
September 9, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಶಾಲಾ ಕಾಲೇಜು

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೇಸಿಗೆ ಶಿಬಿರ

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯಲ್ಲಿ ಮಾ.27ರಿಂದ ನಾಲ್ಕು ದಿನಗಳ ಬೇಸಿಗೆ ಶಿಬಿರವು ನಡೆಯಿತು. ಬೇಸಿಗೆ ಶಿಬಿರದ ಉದ್ಘಾಟಕರಾಗಿ ಮಕ್ಕಳ ಹಕ್ಕುಗಳ ಸಮನ್ವಯ ಅಧಿಕಾರಿಯಾದ ವಿನೋದ್ ಕಲ್ಲಾಜೆ ಆಗಮಿಸಿದ್ದರು.


ಮುಖ್ಯ ಅಭ್ಯಂಗತರಾಗಿ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಯ ಕಲಾ ಶಿಕ್ಷಕರಾದ ಸುಂದರ್ ನಾಯ್ಕ್ , ಶ್ರೀಮತಿ ಪೈ ಹಾಗೂ ರಜನಿ ಕಾಮತ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ ವೇದಿಕೆ ಯಲ್ಲಿ ಉಪಸ್ಥಿತರಿದ್ದರು..
ವಿದ್ಯಾರ್ಥಿಗಳಿಗೆ ಅಜ್ಜಿ ಕಥೆ ,ಬಾಲಗೀತೆ ,ಕ್ರಾಫ್ಟ್ ವರ್ಕ್, ಗಳು ಬೆಂಕಿ ರಹಿತ ಆಹಾರ ಪದಾರ್ಥಗಳು, ಮೆಹಂದಿ, ಹೇರ್ ಸ್ಟೈಲ್, ಫೇಶಿಯಲ್, ಎಂಬ್ರಾಯಿಡರ್ ವಕ್೯, ಕಸೂತಿ, ವಿದ್ಯುತ್ ಉಪಕರಣಗಳ ಬಳಕೆ ಮತ್ತು ಜಾಗ್ರತಿ, ನಾಯಕತ್ವದ ಬಗ್ಗೆ ಅರಿವು, ಇತ್ಯಾದಿಗಳ ಬಗ್ಗೆ ತರಬೇತಿ ನೀಡಲಾಯಿತು.
ಸಮಾರೋಪ ಸಮಾರಂಭದಲ್ಲಿ ಸ್ಮೀತೇಶ್ ಬಾರ್ಯ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಬೇಸಿಗೆ ಶಿಬಿರದಲ್ಲಿ ನಡೆದಂತಹ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳ ಮುಂದಿನ ಜೀವನ ಶೈಲಿಯಲ್ಲಿ ಏಕಾಗ್ರತೆ ,ಶಿಸ್ತು , ತಾಳ್ಮೆ ಆಲಿಸುವಿಕೆ ಯಾವ ರೀತಿ ಬೆಳೆಸಬೇಕು ಗುರು ಹಿರಿಯರನ್ನು ಹೇಗೆ ಸ್ಮರಿಸಬೇಕು ಎಂಬುದನ್ನು ಮಕ್ಕಳಿಗೆ ತಿಳಿಸಿದರು.
ಸಮಾರೋಪದ ಉಪಸ್ಥಿತಿಯಲ್ಲಿ ಸಹನ ಜೈನ್ ಹರ್ಬಲ್ ಬ್ಯೂಟಿಷಿಯನ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕುಮಾರಿ ಅನುಶ್ರೀ ಕಾರ್ಯಕ್ರಮವನ್ನು ನಿರೂಪಿಸಿ , ವಿದ್ಯಾರ್ಥಿಯ ಯಶ್ವಿತ ಸ್ವಾಗತಿಸಿ ,ವಿದ್ಯಾರ್ಥಿ ಕುಮಾರಿ ಪ್ರಾಪ್ತಿ ವಂದಿಸಿದರು. ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

Related posts

ಬೆಳ್ತಂಗಡಿ: ಚರ್ಮಗಂಟು ರೋಗದ ಎರಡನೇ ಅಲೆಯೇ ಎಂಬ ಸಂದೇಹ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಕಿಂಡರ್ಗಾರ್ಟನ್ ವಿಭಾಗದಲ್ಲಿ “ಗ್ರೀನ್ ಡೇ” ಆಚರಣೆ

Suddi Udaya

ಕಲ್ಮಂಜ ಪ್ರೌಢಶಾಲೆಯಲ್ಲಿ ಪ್ರೇರಣಾ ತರಗತಿ

Suddi Udaya

ಗುಂಡೂರಿ ಕಟ್ಟೆ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ 3ನೇ ವರ್ಷದ 65 ಕೆ.ಜಿ ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ

Suddi Udaya

ಬೆಳ್ತಂಗಡಿ: ಗಾಳಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಕೆಪಿಸಿಸಿ ಪ್ರ. ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

Suddi Udaya

ಸಂತೃಪ್ತಿ ಆರ್. ರವರಿಗೆ ಡಿವಿಜನಲ್ ಲೇವಲ್ ಎಕ್ಸಲೆಂಟ್ ಅವಾರ್ಡ್ ಪ್ರಶಸ್ತಿ

Suddi Udaya
error: Content is protected !!