24 C
ಪುತ್ತೂರು, ಬೆಳ್ತಂಗಡಿ
April 3, 2025
Uncategorized

ಸೂಳಬೆಟ್ಟು ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಧ್ವಜ ಸ್ತಂಭ ಪ್ರತಿಷ್ಠೆ

ಬೆಳ್ತಂಗಡಿ: ಸೂಳಬೆಟ್ಟು ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಧ್ವಜ ಸ್ತಂಭ(ಕೊಡಿ ಮರ)ದ ಪ್ರತಿಷ್ಠಾ ಕಾರ್ಯ ಮಾ.೩೦ ರಂದು ರಾಮನವಮಿಯ ಶುಭದಿನದಲ್ಲಿ ನೆರವೇರಿತು. ದೇವಳದ ತಂತ್ರಿಗಳಾದ ಕಾಜಿಮುಗೇರು ಸೀತಾರಾಮ ಕೇಳ್ಕರ್‌ ಹಾಗೂ ಪದ್ಮನಾಭ ಜೋಶಿ ಅವರ ನೇತೃತ್ವದಲ್ಲಿ ಪ್ರತಿಷ್ಠಾ ಹೋಮ ಇತ್ಯಾದಿ ವೈದಿಕ ಕಾರ್ಯಕ್ರಮಗಳು ನಡೆದವು. ಅರ್ಚಕರಾದ ಮಧುಸೂದನ ಮರಾಠೆ, ಅಮರೇಶ ಜೋಶಿ ಸಹಕರಿಸಿದರು. ಧ್ವಜ ಸ್ತಂಭಕ್ಕೆ ಮರವನ್ನು ಅಂಡಿಂಜೆಯ ಮುತ್ತಯ್ಯ ಪೂಜಾರಿ ದಾನವಾಗಿ ನೀಡಿದ್ದರೆ, ಮಂಗಳೂರಿನ ಜನಾರ್ದನ ತಾಮ್ಹನ್‌ಕಾರ್‌ ಅವರು ಕೊಡಿಮರಕ್ಕೆ ತಾಮ್ರದ ಹೊದಿಕೆಯ ಸೇವೆಯನ್ನು ಮಾಡಿಸಿದ್ದಾರೆ.
ಆಡಳಿತೆ ಮೊಕ್ತೇಸರ ಸದಾನಂದ ಸಹಸ್ರಬುದ್ಧೆ, ಸಹಕ ಮೊಕ್ತೇಸರುಗಳಾದ ಪ್ರಭಾಕರ ಆಠವಳೆ, ಪದ್ಮನಾಭ ನಾತು, ದಯಾನಂದ ನಾತು, ಪುರುಷೋತ್ತಮ ತಾಮ್ಹನ್‌ಕರ್‌ ಉಪಸ್ಥಿತರಿದ್ದರು.

Related posts

ಬೆಳಾಲು ಗ್ರಾ.ಪಂ. ನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

Suddi Udaya

ರಹ್ಮಾನಿಯಾ ಜುಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಕಾಜೂರು ಜಂಇಯ್ಯತುಲ್ ಉಲಮಾ ಸಮಿತಿ ರಚನೆ

Suddi Udaya

ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನೂತನ ಪ್ರಾಂಶುಪಾಲರಾಗಿ ಪ್ರೊಫೆಸರ್ ಸುರೇಶ್

Suddi Udaya

ಉಜಿರೆ ಗ್ರಾಮ ಪಂಚಾಯತ್ ಗೆ ಲಕ್ಷ ದ್ವೀಪದ ಅಧಿಕಾರಿಗಳು ಭೇಟಿ

Suddi Udaya

ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಯುವ ಬಿಲ್ಲವ ವೇದಿಕೆ ಮತ್ತು ಯುವವಾಹಿನಿ ಸಂಚಲನಾ ಸಮಿತಿ ಮಿತ್ತಬಾಗಿಲು-ಮಲವಂತಿಗೆ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಲಶಾಭಿಷೇಕ ಬ್ರಹ್ಮಶ್ರೀ ಗುರು ಭವನ ಉದ್ಘಾಟನೆ

Suddi Udaya

ರೆಖ್ಯ ಅಂಗನವಾಡಿಯಲ್ಲಿ ಹಾಳಾದ ಮೊಟ್ಟೆ ವಿತರಣೆ: ಗ್ರಾಮಸ್ಥರ ಅಕ್ರೋಶ

Suddi Udaya
error: Content is protected !!