31.1 C
ಪುತ್ತೂರು, ಬೆಳ್ತಂಗಡಿ
November 24, 2024
ತಾಲೂಕು ಸುದ್ದಿಸಾಧಕರು

ಕೃಷಿ ಕ್ಷೇತ್ರ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ವಿಶೇಷ ಸಾಧನೆ : ನಿವೃತ್ತ ಯೋಧ ಉಜಿರೆಯ ಗೋಪಾಲಕೃಷ್ಣ ಕಾಂಚೋಡು ಅವರಿಗೆ ಗೌರವ ಡಾಕ್ಟರೇಟ್ ಪದವಿ

ಬೆಳ್ತಂಗಡಿ: ಭಾರತೀಯ ಭೂ ಸೇನೆಯಲ್ಲಿ 18 ವಷ೯ ಯೋಧರಾಗಿ ದೇಶ ರಕ್ಷಣೆ ಯ ಕಾಯ೯ಮಾಡಿ ನಿವೃತ್ತರಾಗಿರುವ ಗೋಪಾಲಕೃಷ್ಣ ಕಾಂಚೋಡು ಅವರು ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಗುರುತಿಸಿ, ಏಷ್ಯಾ ವೇದಿಕ್ ಕಲ್ಚರಲ್ ಅಕಾಡೆಮಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಏಷ್ಯಾ ವೇದಿಕ್ ಕಲ್ಚರ್ ಪೌಂಡೇಶನ್ ವತಿಯಿಂದ
ಏಷ್ಯಾ ವೇದಿಕ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಪ್ರತಿ ವರ್ಷ ನಡೆಯುವ ಈ ಗೌರವ ಪ್ರಶಸ್ತಿಗೆ ಈ ವಷ೯ ಗೋಪಾಲಕೃಷ್ಣ ಕಾಂಚೋಡು ಅವರು ಪಾತ್ರರಾಗಿದ್ದಾರೆ.
ಇತ್ತೀಚೆಗಷ್ಟೇ ಇವರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊಡಮಾಡುವ ಪ್ರತಿಷ್ಠಿತ
ಜೈ ಜವಾನ್ ಜೈ ಕಿಸಾನ್ “ಕೃಷಿಕ ರತ್ನ” ಪ್ರಶಸ್ತಿ ಗೆ ಆಯ್ಕೆ ಯಾಗಿ, ಮಾ.15ರಂದು ಬೆಂಗಳೂರಿನ
ಟೌನ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ,
ವಿಧಾನ‌ ಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿ ಅವರಿಂದ ಪುರಸ್ಕೃತ ಗೊಂಡಿದ್ದರು.
ಗೋಪಾಲಕೃಷ್ಣ ಕಾಂಚೋಡು ಅವರು ಭಾರತೀಯ ಭೂ ಸೇನೆಯಲ್ಲಿ ಜಮ್ಮು ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆ ಸೇವೆ ಸಲ್ಲಿಸಿ ನಿವೃತ್ತರಾದವರು.‌
ಸೇನಾ ನಿವೃತ್ತಿಯ ನಂತರ ತನ್ನೂರಿಗೆ ಬಂದು ಬೆಳ್ತಂಗಡಿ ತಾಲೂಕು ಉಜಿರೆ ಯಲ್ಲಿ ನೆಲೆಸಿ, “ರವಿ ಟ್ರೇಡರ್ಸ್” ಎಂಬ ಉದ್ದಿಮೆ ಸ್ಥಾಪಿಸಿ ಹತ್ತಾರು ಯುವಕರಿಗೆ ಜೀವನೋಪಾಯದ ಹಾದಿಯನ್ನು ಸೃಷ್ಟಿಸುತ್ತಾ ಸೇನೆಗೆ ಸೇರಲು ಬಯಸುವ ಯುವಕರಿಗೆ ಉಚಿತ ಮಾಹಿತಿ ನೀಡುತ್ತಾ ಬರುತ್ತಿದ್ದಾರೆ.
ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ, ಕೃಷಿ ಕ್ಷೇತ್ರ ದಲ್ಲಿ ವೈಜ್ಞಾನಿಕವಾಗಿ, ಉತ್ತಮ ಆದಾಯ ಪಡೆಯುವ ಆಧುನಿಕ ತಂತ್ರಜ್ಞಾನ ಗಳೊಂದಿಗೆ ಪ್ರಕೃತಿಗೆ ತೊಂದರೆ ಯಾಗದಂತೆ (ಜಲ, ನೆಲ ಉಳಿಸಿ ) ಸಾವಯವ ಕೃಷಿಯನ್ನು ಮಾಡುತ್ತಾ, ಕಂಗು, ತೆಂಗು, ಬಾಳೆ ಕೃಷಿಗಳೊಂದಿಗೆ ಎಲ್ಹೋಟಿಕ್ (exotic) ಹಣ್ಣುಗಳನ್ನು ಬೆಳೆಯುತ್ತಾ, ಪ್ರಾಕೃತಿಕವಾಗಿ ಪ್ರಕೃತಿ ಸಹಜಕ್ರಿಯೆ, ಪರಾಗ ಸ್ಪರ್ಶಕ್ಕೆ ಪೂರಕ ಜೇನುಸಾಕಣೆ ಮಾಡುತ್ತಾ ಹತ್ತು ಹಲವು ಆಸಕ್ತ ಕೃಷಿಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಜೊತೆಗೆ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.
ಅವರ ಸಾಧನೆಯನ್ನು ಗುರುತಿಸಿ ಏಷ್ಯಾ ವೇದಿಕ್ ಕಲ್ಚರಲ್ ಅಕಾಡೆಮಿ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದೆ.

Related posts

ಪದ್ಮುಂಜ ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕದ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ವಲಯ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ಬಾಲಕ ಮತ್ತು ಬಾಲಕಿಯರಿಗೆ ಪ್ರಥಮ ಸ್ಥಾನ

Suddi Udaya

ವೇಣೂರು: ಮೂಡುಕೋಡಿ ನಿವಾಸಿ ಪಿ. ಎಸ್. ಅಬ್ದುಲ್ ರಹಿಮಾನ್ ನಿಧನ

Suddi Udaya

ಶಿಬಾಜೆ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಹರೀಶ್ ಪೂಂಜ:ತಾಲ್ಲೂಕಿನಾದ್ಯಾಂತ ಸಂಘಟನಾತ್ಮಕ ಪ್ರವಾಸ – 65ಕ್ಕೂ ಅಧಿಕಶಕ್ತಿ ಕೇಂದ್ರಗಳಿಗೆ ಭೇಟಿ ನೀಡಿ, ಕಾಯ೯ಕತ೯ರ ಸಭೆ

Suddi Udaya

ಮುಂಡಾಜೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅ.ಪ್ರೌ. ಶಾಲೆ ಮತ್ತು ಪ. ಪೂ. ಕಾಲೇಜಿನಲ್ಲಿ ಹಣ್ಣಿನ ಗಿಡಗಳ ನಾಟಿ

Suddi Udaya
error: Content is protected !!