ಏಪ್ರಿಲ್-ಜೂನ್ ತ್ರೈಮಾಸಿಕ ಅಂಚೆ ಕಛೇರಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಶೇ.0.7 ರವರೆಗೆ ಏರಿಸಿ ಕೇಂದ್ರ ಸರಕಾರ ಮಾ.31 ರಂದು ಆದೇಶ ಹೊರಡಿಸಿದೆ.
ಪಿಪಿಎಫ್ ಮತ್ತು ಉಳಿತಾಯ ಠೇವಣಿಗಳ ಬಡ್ಡಿಯನ್ನು ಶೇ.7.1 ಹಾಗೂ ಶೇ.4ರಲ್ಲೇ ಉಳಿಸಿಕೊಳ್ಳಲಾಗಿದೆ. ಇತರ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಶೇ.0.1 ರಿಂದ ಶೇ. 0.7 ರವರೆಗೆ ಏರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಏ.1 ರಿಂದ ಜೂ.30 ರವರೆಗೆ ಈ ಏರಿಕೆಗಳು ಅನ್ವಯವಾಗಿತ್ತದೆ. ರಾಷ್ಟ್ರೀಯ ುಳಿತಾಯ ಸರ್ಟಿಫಿಕೆಟ್ (ಎನ್ ಎಸ್ ಸಿ) ಬಡ್ಡಿಯನ್ನು ಈಗಿನ ಶೇ.7 ರಿಂದ ಶೇ.7.5 ಕ್ಕೆ ಏರಿಸಲಾಗಿದೆ. ಬಡ್ಡಿ ದರಗಳನ್ನು 3 ತಿಂಗಳಿಗೊಮ್ಮೆ ಪರಿಷ್ಕರಿಸಲಾಗುವುದು.
ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ಶೇ.7.6 ರಿಂದ ಶೇ.8ಕ್ಕೆ ಏರಿದೆ. ಹಿರಿಯ ನಾಗರಿಕರ ಉಳಿತಾಯ ಬಡ್ಡಿ ದರ ಶೇ.8 ರಿಂದ ಶೇ.8.2 ಮತ್ತು ಕಿಸಾನ್ ವಿಕಾಸದ ಪತ್ರದ ಮೇಲಿನ ಬಡ್ಡಿ ಶೇ.7.2 ರಿಂದ ಶೇ.7.6ಕ್ಕೆ ಏರಿಕೆಯಾಗಿದೆ.