23.3 C
ಪುತ್ತೂರು, ಬೆಳ್ತಂಗಡಿ
May 18, 2025
ನಿಧನ

ಬಾಯ೯ : ನಿವೃತ್ತ ಯೋಧ ಭವಾನಿ ಶಂಕರ್ ನಿಧನ


ಬೆಳ್ತಂಗಡಿ: ಭಾರತೀಯ ಭೂ ಸೇನೆಯಲ್ಲಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಮೂಲತಃ ಬಾರ್ಯ ನಿವಾಸಿ ಭವಾನಿ ಶಂಕರ್ (62ವ) ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲಿ ಎ.1ರಂದು ನಿಧನರಾದರು.
ಇವರು ಭಾರತೀಯ ಭೂ ಸೇನೆಯಲ್ಲಿ ಸೇನಾನಿಯಾಗಿ ದೇಶದ ವಿವಿದೆಡೆ ಸೇವೆ ಸಲ್ಲಿಸಿದ್ದರು. ಉಜಿರೆಯ ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು, ಕೆ. ಮಾಧವ ಪೂಜಾರಿ ಮಾಡವು ಹಾಗೂ ಭವಾನಿ ಶಂಕರ್ ಸೇನೆಗೆ ಒಟ್ಟಿಗೆ ಸೇರ್ಪಡೆ ಗೊಂಡು ಜಮ್ಮು ಕಾಶ್ಮೀರ ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸಿದ್ದರು.

23 ವರ್ಷಗಳ ಸೇವ ಬಳಿಕ ಅವರು ನಿವೃತ್ತಗೊಂಡು ಬಳಿಕ ಪುತ್ತೂರಿನಲ್ಲಿ ಮನೆ ಮಾಡಿ ವಾಸ್ತವ್ಯವಿದ್ದರು. ಆರೋಗ್ಯ ಏರುಪೇರು ಆದ ಹಿನ್ನಲೆಯಲ್ಲಿ ಅವರನ್ನು ಬೆಂಗಳೂರಿನ ಕಮಾಂಡೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು
ನಿಧನರಾದರು.
ಇವರ ಪತ್ನಿ ಈ ಹಿಂದೆಯೇ ಮೃತಪಟ್ಟಿದ್ದರು. ಮೃತರು ಪುತ್ರ ಸಂಜೀತ್ ಹಾಗೂ ಪುತ್ರಿ ಸೌಜನ್ಯ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

Related posts

ಉರುವಾಲು : ಮುಹಮ್ಮದ್ ರಾಝಿಖ್ ದುಬೈನಲ್ಲಿ ಅನುಮಾನಸ್ಪದವಾಗಿ ಸಾವು

Suddi Udaya

ಮಡಂತ್ಯಾರು ಸಿ ಎ ಬ್ಯಾಂಕಿನ ಮಾಜಿ ಅಧ್ಯಕ್ಷ ಮಹಾವೀರ ಬಲ್ಲಾಳ್ ನಿಧನ

Suddi Udaya

ಕ್ಷೌರಿಕ ವೃತ್ತಿಯಲ್ಲಿರುವಾಗಲೇ ಹೃದಯಾಘಾತದಿಂದ ರಾಧಾಕೃಷ್ಣ ಭಂಡಾರಿ ನಿಧನ

Suddi Udaya

ಮಾಜಿ ಶಾಸಕ ವಸಂತ ಬಂಗೇರರ ಆಪ್ತ ಸಹಾಯಕ ಲಕ್ಷ್ಮಣ್ ರಾವ್ ನಿಧನ

Suddi Udaya

ಕರಂಬಾರು: ಮಾನಸಿಕ ಖಿನ್ನತೆಗೆ ಒಳಗಾಗಿ ನಾಗೇಶ್ ನೇಣು ಬಿಗಿದು ಆತ್ಮಹತ್ಯೆ

Suddi Udaya

ಧರ್ಮಸ್ಥಳ: ಆಟೋ ಚಾಲಕ ಸುಂದರ ಗೌಡ ನಿಧನ

Suddi Udaya
error: Content is protected !!