23.5 C
ಪುತ್ತೂರು, ಬೆಳ್ತಂಗಡಿ
March 7, 2026
ನಿಧನ

ಬಾಯ೯ : ನಿವೃತ್ತ ಯೋಧ ಭವಾನಿ ಶಂಕರ್ ನಿಧನ


ಬೆಳ್ತಂಗಡಿ: ಭಾರತೀಯ ಭೂ ಸೇನೆಯಲ್ಲಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಮೂಲತಃ ಬಾರ್ಯ ನಿವಾಸಿ ಭವಾನಿ ಶಂಕರ್ (62ವ) ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲಿ ಎ.1ರಂದು ನಿಧನರಾದರು.
ಇವರು ಭಾರತೀಯ ಭೂ ಸೇನೆಯಲ್ಲಿ ಸೇನಾನಿಯಾಗಿ ದೇಶದ ವಿವಿದೆಡೆ ಸೇವೆ ಸಲ್ಲಿಸಿದ್ದರು. ಉಜಿರೆಯ ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು, ಕೆ. ಮಾಧವ ಪೂಜಾರಿ ಮಾಡವು ಹಾಗೂ ಭವಾನಿ ಶಂಕರ್ ಸೇನೆಗೆ ಒಟ್ಟಿಗೆ ಸೇರ್ಪಡೆ ಗೊಂಡು ಜಮ್ಮು ಕಾಶ್ಮೀರ ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸಿದ್ದರು.

23 ವರ್ಷಗಳ ಸೇವ ಬಳಿಕ ಅವರು ನಿವೃತ್ತಗೊಂಡು ಬಳಿಕ ಪುತ್ತೂರಿನಲ್ಲಿ ಮನೆ ಮಾಡಿ ವಾಸ್ತವ್ಯವಿದ್ದರು. ಆರೋಗ್ಯ ಏರುಪೇರು ಆದ ಹಿನ್ನಲೆಯಲ್ಲಿ ಅವರನ್ನು ಬೆಂಗಳೂರಿನ ಕಮಾಂಡೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು
ನಿಧನರಾದರು.
ಇವರ ಪತ್ನಿ ಈ ಹಿಂದೆಯೇ ಮೃತಪಟ್ಟಿದ್ದರು. ಮೃತರು ಪುತ್ರ ಸಂಜೀತ್ ಹಾಗೂ ಪುತ್ರಿ ಸೌಜನ್ಯ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

Related posts

ಅರಸಿನಮಕ್ಕಿ: ಬರಮೇಲು ನಿವಾಸಿ ನಾಗಮ್ಮ ನಿಧನ

Suddi Udaya

ಕೆರೆಯಲ್ಲಿ ಸ್ನಾನಕ್ಕಿಳಿದ ಯುವಕ ಸಾವು

Suddi Udaya

ಲಾಯಿಲ: ಕನ್ನಾಜೆ ನಿವಾಸಿ ರಾಜು ಶೆಟ್ಟಿ ಹೃದಯಾಘಾತದಿಂದ ನಿಧನ

Suddi Udaya

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಣಾಧಿಕಾರಿ ಎಂ.ವೈ. ಹರೀಶ್ ಕುಮಾರ್ ಹೃದಯಾಘಾತದಿಂದ ನಿಧನ

Suddi Udaya

ಮಾಜಿ ಶಾಸಕ ಬಂಗೇರರ ನಿಧನಕ್ಕೆಡಾ. ಪದ್ಮಪ್ರಸಾದ್ ಅಜಿಲ ಹಾಗೂ ಶಿವಪ್ರಸಾದ ಅಜಿಲ ಸಂತಾಪ

Suddi Udaya

ನಿವೃತ್ತ ಶಿಕ್ಷಕ ಕೆ.ಬಾಬು ಪೂಜಾರಿ ಅನಾರೋಗ್ಯದಿಂದ ನಿಧನ

Suddi Udaya
error: Content is protected !!