26.5 C
ಪುತ್ತೂರು, ಬೆಳ್ತಂಗಡಿ
September 19, 2026
ಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿ

ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಉಪಾಧ್ಯಕ್ಷರಾಗಿ ಯು.ಕೆ ಮುಹಮ್ಮದ್ ಹನೀಫ್ ನೇಮಕ

ಬೆಳ್ತಂಗಡಿ; ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ದ.ಕ ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷರಾಗಿ ಉಜಿರೆಯ‌ ಯುವ ಉದ್ಯಮಿ ಹಾಗೂ ಸಮಾಜ ಸೇವಕ ಯು.ಕೆ ಮುಹಮ್ಮದ್ ಹನೀಫ್ ರವರನ್ನು ನೇಮಕಗೊಳಿಸಿ ಜಿಲ್ಲಾಧ್ಯಕ್ಷ ಕೆ.ಕೆ ಶಾಹುಲ್ ಹಮೀದ್ ಅವರು ಆದೇಶ ನೀಡಿದ್ದಾರೆ.

ಪಕ್ಷದ ಜಿಲ್ಲಾಧ್ಯಕ್ಷರು,‌ ಪಕ್ಷದ ಬೆಳ್ತಂಗಡಿಯ ಮಾಜಿ ಶಾಸಕರುಗಳು,‌ ಪ್ರಸ್ತುತ‌ ಅಭ್ಯರ್ಥಿ‌ ಹಾಗೂ ಮುಖಂಡರುಗಳ ಶಿಫಾರಸ್ಸಿನ ಮೇರೆಗೆ ಈ ನೇಮಕಾತಿ ನಡೆದಿದೆ.
ಪಕ್ಷದ ಹಿರಿಯ ಕಾರ್ಯಕರ್ತರಲ್ಲಿ ಓರ್ವರಾಗಿರುವ ಅವರು ಈ‌ ಹಿಂದೆ ಜಿಲ್ಲಾ ಘಟಕದಲ್ಲಿ ಉಪಾಧ್ಯಕ್ಷರಾಗಿ ಹಾಗೂ, ವಕ್ಫ್ ಜಿಲ್ಲಾ ಸಲಹಾ ಸಮಿತಿಯ ಸದಸ್ಯರಾಗಿ ಎರಡು ಅವಧಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

Related posts

ಲಾಯಿಲ : ಚಂದ್ಕೂರು ರಸ್ತೆಯಲ್ಲಿ ಚಿರತೆ ಓಡಾಟ: ಅರಣ್ಯ ಇಲಾಖೆಯಿಂದ ಪರಿಶೀಲನೆ

Suddi Udaya

ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್‌ ಕುಮಾ‌ರ್ ಪುತ್ತಿಲ ಬಿಜೆಪಿ ಪಕ್ಷಕ್ಕೆ ಸೇರ್ಪಡೆ

Suddi Udaya

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕವನ ಸ್ಪರ್ಧೆ: ಉಜಿರೆ ಎಸ್‌ಡಿಎಂ ಪಿಯು ಕಾಲೇಜಿನ ಪ್ರಣಮ್ಯ ಪ್ರಥಮ

Suddi Udaya

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಚಿನ್ಮಯ್ ಜಿ.ಕೆ ರಿಗೆ ಜಿಲ್ಲಾಧಿಕಾರಿಗಳಿಂದ ಸನ್ಮಾನ

Suddi Udaya

ವಿದ್ಯಾಮಾತಾದ ಮುಕುಟಕ್ಕೆ ಮತ್ತೊಂದು ಗರಿಮೆ: SSC-GD(ಸಶಸ್ತ್ರ ಪಡೆ) ಲಿಖಿತ ಪರೀಕ್ಷೆ ಉತ್ತೀರ್ಣಗೊಂಡ ಇಂಜಿನಿಯರಿಂಗ್ ವಿದ್ಯಾರ್ಥಿನಿ ಲಹರಿ ಕೆ.

Suddi Udaya

ಬೆಳ್ತಂಗಡಿ ಡಿ. ಕೆ.ಆರ್.ಡಿ.ಎಸ್ – ಮಾಸಿಕ ಬೆಂಬಲ ಸಭೆ ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya
error: Content is protected !!