24 C
ಪುತ್ತೂರು, ಬೆಳ್ತಂಗಡಿ
April 3, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿ

ರಸ್ತೆ ಬದಿ ವಾಹನಕ್ಕಾಗಿ ತನ್ನ ತಾಯಿ ಜೊತೆ ಕಾಯುತ್ತಿದ್ದ ಪುಟ್ಟ ಬಾಲಕಿ ಸಾತ್ವಿಕಾ ದ್ವಿಚಕ್ರ ವಾಹನ ‌ ಡಿಕ್ಕಿ ಹೊಡೆದು ಗಾಯಗೊಂಡು ಆಸ್ಪತ್ರೆಗೆ


ಬೆಳ್ತಂಗಡಿ : ರಸ್ತೆ ಬದಿ ವಾಹನಕ್ಕಾಗಿ ತನ್ನ ತಾಯಿ ಜೊತೆ ಕಾಯುತ್ತಿದ್ದ ಪುಟ್ಟ ಬಾಲಕಿಗೆ ದ್ವಿಚಕ್ರ ವಾಹನ ‌ ಡಿಕ್ಕಿ ಹೊಡೆದು ಬಾಲಕಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಎ.4 ರಂದು ವರದಿಯಾಗಿದೆ.

ಲಾಯಿಲಾ ಗ್ರಾಮದ ಅಂಕಾಜೆ ಮನೆ ಸುಮಲತಾ ಎಂಬವರ ಪುತ್ರಿ ಸಾತ್ವಿಕಾ (7ವ) ಗಾಯಗೊಂಡಿದ್ದು, ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ: ಎಂ.4 ರಂದು ಮಧ್ಯಾಹ್ನ ಸುಮಲತಾ ಮತ್ತು ಅವರ ಮಗಳು ಸಾತ್ವಿಕಾ ಲಾಯಿಲಾ ಗ್ರಾಮದ ಅಂಕಜೆ ಎಂಬಲ್ಲಿ ಬೆಳ್ತಂಗಡಿಗೆ ಹೋಗುವರೇ ಮಣ್ಣು ರಸ್ತೆಯಲ್ಲಿ ಆಟೋ ರಿಕ್ಷಾಕ್ಕಾಗಿ ಕಾಯುತ್ತಾ ನಿಂತಿರುವಾಗ ಸಂದರ್ಭ
ಪಡ್ಲಾಡಿ ಕಡೆಯಿಂದ ಲಾಯಿಲಾ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನವನ್ನು ಅದರ ಸವಾರ ದುಡುಕುತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಸಾತ್ವಿಕಾಳಿಗೆ ಢಿಕ್ಕಿ ಹೊಡೆದನೆನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸಾತ್ವಿಕಾ ಅಲ್ಲಿಯೇ ರಸ್ತೆಗೆ ಬಿದ್ದುದ್ದು, ಗಂಭೀರ ಗಾಯಗೊಂಡರೆಂದು ವರದಿಯಾಗಿದೆ. ದ್ವಿಚಕ್ರ ಸವಾರನು ದ್ವಿಚಕ್ರ ವಾಹನದೊಂದಿಗೆ ರಸ್ತೆಗೆ ಬಿದ್ದಿದ್ದ. ಗಾಯಗೊಂಡ ಸ್ವಾತಿಕಾ ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.
ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ. 34/2023 ಕಲಂ: 279,338 ಭಾದಂ ಸಂ ಯಂತೆ ಪ್ರಕರಣ ದಾಖಲಾಗಿದೆ.

Related posts

ಬಳಂಜ: ಹೃದಯಾಘಾತದಿಂದ ಜಯಂತ ಮಡಿವಾಳ ನಿಧನ

Suddi Udaya

ಸೌತಡ್ಕ ಪಾರ್ಕಿಂಗ್ ಸ್ಥಳದಲ್ಲಿ ನೆಟ್ಟ ಗಿಡಗಳ ಬೇಲಿ ತೆರವು: ಸಂರಕ್ಷಿಸಲಾಗಿದ್ದ ಗಿಡಗಳನ್ನು ಸಾಕು ಪ್ರಾಣಿಗಳು ತಿಂದು ನಾಶ

Suddi Udaya

ಕರಾಟೆ ಪಂದ್ಯಾಟ: ಉಜಿರೆ ಎಸ್.ಡಿ.ಎಂ. ಶಾಲೆಯ ವಿದ್ಯಾರ್ಥಿ ಚರಣ್ ಜೈನ್ ಬಂಗಾಡಿ ಪ್ರಥಮ ಸ್ಥಾನ

Suddi Udaya

ವೇಣೂರು: ಪೋಕ್ಸೋ ಪಕ್ರರಣ, ಆರೋಪಿಗೆ ಜೈಲು ಶಿಕ್ಷೆ ಹಾಗೂ ದಂಡ

Suddi Udaya

ವಕೀಲರ ಸಂಘದ ಕಚೇರಿಗೆ ರಕ್ಷಿತ್ ಶಿವರಾಂ ಸೌಹಾರ್ಧ ಭೇಟಿ, ಸಮಾಲೋಚನೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಧುಮೇಹ ಪರೀಕ್ಷೆಯಲ್ಲಿ ನಿಖರ ವರದಿ ನೀಡಬಲ್ಲ ಮೆಶಿನ್ ಅಳವಡಿಕೆ

Suddi Udaya
error: Content is protected !!