ನೆರಿಯ: ಕಳೆದೈದು ವರ್ಷಗಳಿಂದ ಶಿಕ್ಷಣಕ್ಕೆ ರಾಜ್ಯ ಸರಕಾರದ ಮಹತ್ವರ ಕೊಡುಗೆಗಳನ್ನು ನೀಡಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತಾದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯವಿದೆ. ವಿಶೇಷವಾಗಿ ಹಿಂದುಳಿದ ಜನಾಂಗದ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡುವ ನೆಲೆಯಲ್ಲಿ ಸರಕಾರ ಆಶ್ರಯ ಶಾಲೆಗಳ ಸ್ಥಾಪನೆಗೆ ಉತ್ತೇಜನ ನೀಡಿದೆ. ಬೆಳ್ತಂಗಡಿ ತಾಲೂಕಿನಲ್ಲೂ ಶಾಲಾ, ಕಾಲೇಜುಗಳ ಕಟ್ಟಡ ರಚನೆ ಹಾಗೂ ದುರಸ್ತಿಗೆ ಅತೀ ಹೆಚ್ಚು ಅನುದಾನ ಒದಗಿಸಿದ್ದೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಇತ್ತೀಚೆಗೆ ನೆರಿಯದ ಆಲಂಗಾಯಿಯಲ್ಲಿ ರೂ. 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ವಾಲ್ಮೀಕಿ ಆಶ್ರಮ ಶಾಲೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿ, ವಸತಿ, ಆಶ್ರಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣ ದೊರಕುತ್ತದೆ ಎಂದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್‌ಸಿಂಹ ನಾಯಕ್, ನೆರಿಯ ಗ್ರಾ.ಪಂ. ಅಧ್ಯಕ್ಷೆ ವಸಂತಿ, ಉಪಾಧ್ಯಕ್ಷೆ ಕುಶಲಾ, ಬೆಳ್ತಂಗಡಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಹೇಮಚಂದ್ರ, ಗಿರಿಜನ ಕಲ್ಯಾಣ ವಿಸ್ತರಣಾಧಿಕಾರಿ ಹೇಮಲತಾ, ನೆರಿಯ ಗ್ರಾ.ಪಂ. ಸದಸ್ಯರಾದ ಬಾಬು ಗೌಡ ಪರ್ಪಲ, ಮಾಲತಿ, ಸವಿತಾ, ಸಚಿನ್, ಸಜಿತಾ, ಮರಿಯಮ್ಮ, ವಿಶ್ವನಾಥ ಗೌಡ, ಶಾಲಾ ಮುಖ್ಯ ಶಿಕ್ಷಕ ಕೃಷ್ಣಪ್ಪ, ಸ್ಥಳೀಯ ಪ್ರಮುಖರಾದ ಎಂ.ಜಿ. ವರ್ಗೀಸ್, ಅಜಯ್ ಕಲಿಕಟ್, ಬೂತ್ ಸಮಿತಿ ಅಧ್ಯಕ್ಷ ಸಂದೀಪ್, ಕಾಂತಪ್ಪ ಆಲಂಗಾಯಿ, ಹರೀಶ್ ಆಲಂಗಾಯಿ, ಹರಿಪ್ರಸಾದ್ ಆಲಂಗಾಯಿ, ನೆರಿಯ ಶಕ್ತಿಕೇಂದ್ರದ ಅಧ್ಯಕ್ಷ ವಿಶ್ವನಾಥ ಹಾಗೂ ಊರಿನ ಗ್ರಾಮಸ್ಥರು ಇತರರರು ಉಪಸ್ಥಿತರಿದ್ದರು.