26.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಅಶಕ್ತ ಕುಟುಂಬಗಳಿಗೆ ರೂ.46 ಸಾವಿರ ಆರ್ಥಿಕ ನರೆವು

ಬಳಂಜ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಒಟ್ಟುಗೂಡಿಸಿ ಎರಡು ಕುಟುಂಬಗಳಿಗೆ ರೂ 46 ಸಾವಿರ ಆರ್ಥಿಕ ನೆರವು ನೀಡಲಾಯಿತು.

ಬಳಂಜ ಗ್ರಾಮದ ಬಿರ್ಮನೊಟ್ಟು ನಿವಾಸಿ ಶಿವಾನಂದ ಅವರು ಬ್ರೈನ್ ಎಮರೇಜ್ ನಿಂದ ನಿಧನರಾಗಿದ್ದು ಆರ್ಥಿಕವಾಗಿ ತೀರಾ ಹಿಂದುಳಿದಿದ್ದು ಅವರ ಕುಟುಂಬಕ್ಕೆ ರೂ 30 ಸಾವಿರ ಹಾಗೂ ಕಾಪಿನಡ್ಕ ಗಾಂಧೀನಗರ ನಿವಾಸಿ ಮೀನಾಕ್ಷಿಯವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಅವರ ವೈದ್ಯಕೀಯ ಚಿಕಿತ್ಸೆಗೆ ರೂ 16 ಸಾವಿರವನ್ನು ಸಂಘದ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಪ್ರವೀಣ್ ಕುಮಾರ್ ಹೆಚ್ ಎಸ್,ಸಂತೋಷ್ ಕುಮಾರ್ ಕಾಪಿನಡ್ಕ, ರಂಜಿತ್ ಪೂಜಾರಿ ಮಜಲಡ್ಡ, ಕೃಷ್ಣಪ್ಪ ಪೂಜಾರಿ ಬೊಂಟ್ರೋಟ್ಟು, ಶರತ್ ಅಂಚನ್ ಬಾಕ್ಯರಡ್ಡ,ಜಗದೀಶ್ ಪೂಜಾರಿ ಬಳ್ಳಿದಡ್ಡ,ಯೋಗೀಶ್ ಪೂಜಾರಿ ಕೊಂಗುಳ,ಪ್ರವೀಣ್ ಡಿ ಕೋಟ್ಯಾನ್, ಸಂಪತ್ ಪಿ ಕೋಟ್ಯಾನ್, ಮುತ್ತಪ್ಪ ಪೂಜಾರಿ ಗಾಂಧಿನಗರ ಉಪಸ್ಥಿತರಿದ್ದರು.

Related posts

ರಾಜ್ಯ ಮಟ್ಟದ ಪುರುಷರ ನೆಟ್ ಬಾಲ್ ಪಂದ್ಯಾಟ : ಎಸ್.ಡಿ.ಎಂ ತಂಡಕ್ಕೆ ಪ್ರಶಸ್ತಿ

Suddi Udaya

ಕೊಕ್ಕಡ: ಮಾಯಿಲಕೋಟೆ ಸೀಮೆ ದೈವಸ್ಥಾನದಲ್ಲಿ ನಾಗಪ್ರತಿಷ್ಠೆ, ಆಶ್ಲೇಷ ಬಲಿ

Suddi Udaya

ಬೆನ್ನುಹುರಿ ಅಪಘಾತದ ಬಗ್ಗೆ ಮಾಹಿತಿ ಕಾರ್ಯಗಾರ

Suddi Udaya

ಹಿರಿಯ ಪತ್ರಕರ್ತ ವಿನಯ ಕುಮಾರ್ ಸೇಮಿತ ಹೃದಯಾಘಾತದಿಂದ ನಿಧನ

Suddi Udaya

ಉಜಿರೆ: ಶ್ರೀ ಧ.ಮಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಜೀವನ ಕೌಶಲ್ಯ ಕಾರ್ಯಾಗಾರ

Suddi Udaya

ಪುದುವೆಟ್ಟು ಶ್ರೀ ಧ.ಮಂ. ಅ.ಹಿ.ಪ್ರಾ. ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya
error: Content is protected !!