April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿ

ಎ.9: ಉಜಿರೆಯಲ್ಲಿ ಕೇರಳ ಸಂಪ್ರದಾಯ ವಿಷು ಕಣಿ ಉತ್ಸವ

ಉಜಿರೆ: ಪ್ರತಿ ಕುಟುಂಬಗಳೂ ತಮ್ಮಲ್ಲಿ ಬೆಳೆದಂತಹ ದವಸ- ಧಾನ್ಯಗಳನ್ನು, ತರಕಾರಿ ಬೆಳೆಗಳನ್ನು ದೇವರಿಗೆ ಕಾಣಿಕೆ ಇಡುವಂತಹ ಸಂಪ್ರದಾಯ ಎಲ್ಲ ಕಡೆಗಳಲ್ಲೂ ನಾವು ಕಾಣುತ್ತೇವೆ. ಈ ರೀತಿಯ ಕಾಣಿಕೆ ಇಡುವುದನ್ನು ವಿಷು ಕಣಿ ಎಂದು ಕರೆಯುತ್ತಿದ್ದು ಹೆಚ್ಚಾಗಿ ಕೃಷಿ ಕುಟುಂಬಗಳಲ್ಲಿ ಈ ಆಚರಣೆ ತೊಡಗಿಕೊಂಡಿದೆ.

ತಾಲೂಕಿನ ವಿವಿಧ ಭಾಗಗಳಲ್ಲಿ ನೆಲೆಸಿರುವ ಹಿಂದೂ ಮಲಯಾಳಿ ಬಾಂಧವರು ಒಂದಡೆ ಸೇರಿ ಸಂತೋಷದಿಂದ ಸಂಭ್ರಮಿಸುವ ಒಂದು ದಿನ ಎ. 9ರಂದು ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಲಿದೆ.

ಬೆಳ್ತಂಗಡಿ ತಾಲೂಕು ವಿಷು ಕಣಿ ಆಚಾರಣ ಸಮಿತಿಯಿಂದ ವಿಷು ಕಣಿ 2.0 ಕಾರ್ಯಕ್ರಮ ಆಯೋಜಿಸಿದ್ದು ಪ್ರತಿಷ್ಠಿತ ಕಲಾವಿದರಿಂದ ಹಾಗೂ ಸಿನೆಮಾ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ.

ಕಾರ್ಯಕ್ರಮದಲ್ಲಿ ಕೇರಳ ಸಂಪ್ರದಾಯದಂತೆ ವಿವಿಧ ತಿಂಡಿ ತಿನಸುಗಳು, ಪೂಕಲಂ, ವಿವಿಧ ಆಟೋಟ ಸ್ಪರ್ದೆಗಳು,ಕೇರಳ ಚೆಂಡೆ, ಗೊಂಬೆಗಳು ಎಲ್ಲರ ಗಮನ ಸೆಳೆಯಲಿದೆ ಎಂದು ಸಮಿತಿ ಪ್ರಮುಖರಾದ ಅನಿಲ್ ಕುಮಾರ್ ತಿಳಿಸಿದ್ದಾರೆ.

Related posts

ಉಜಿರೆ ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಕಳಿಯ ಗ್ರಾಮದ ವಾರ್ಡ್ ಗಳಲ್ಲಿ ಅಗತ್ಯವಿದ್ದ ಸ್ಥಳಗಳಲ್ಲಿ ಗ್ರಾಮ ಪಂಚಾಯತ್ ನ 15ನೇ ಹಣಕಾಸು ಯೋಜನೆಯಲ್ಲಿ ಸೋಲಾರ್ ದೀಪ ಅಳವಡಿಕೆ

Suddi Udaya

ನೀರಿನ ಮಟ್ಟ ಹಾಗೂ ಭೂ ಕುಸಿತದ ಲಕ್ಷಣ ಕಂಡರೆ ಕೂಡಲೇ ಸಂಪರ್ಕಿಸುವಂತೆ ಶಾಸಕ ಹರೀಶ್ ಪೂಂಜ ಮನವಿ

Suddi Udaya

ವೇಣೂರಿನಲ್ಲಿ ಪ್ರಥಮ ದರ್ಜೆ ಕಾಲೇಜನ್ನು ಆರಂಭಿಸಲು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಶಾಸಕ ಹರೀಶ್ ಪೂಂಜ

Suddi Udaya

ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಶ್ರೀಮತಿ ತಾರಾಕೇಸರಿ ನೇಮಕ

Suddi Udaya

ಅಳದಂಗಡಿಯಲ್ಲಿ ಸಂಭ್ರಮದ ಪಟ್ಟದ ಕಂಬಳ

Suddi Udaya
error: Content is protected !!