September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ತಿಪ್ಪೇಸ್ವಾಮಿ ಕೆ.ಟಿ. ಮಾಲಾಡಿ ಗ್ರಾ.ಪಂ.ಗೆ ಭೇಟಿ

ಮಾಲಾಡಿ: ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ತಿಪ್ಪೇಸ್ವಾಮಿ ಕೆ.ಟಿ. ಇವರು ಮಾಲಾಡಿ ಗ್ರಾಮ ಪಂಚಾಯತ್ ಕಛೇರಿಗೆ ಭೇಟಿ ನೀಡಿದರು.

ಮಕ್ಕಳ ಮತ್ತು ಮಹಿಳಾ ರಕ್ಷಣಾ ಕಾವಲು ಸಮಿತಿಯ ಸಭಾ ನಡವಳಿ, ಮಕ್ಕಳ ಗ್ರಾಮ ಸಭೆಯ ನಡವಳಿ, ಶಿಕ್ಷಣ ಕಾರ್ಯಪಡೆಯ ವಿವರ, ಶೇಕಡಾ 25ರಲ್ಲಿ ಮಹಿಳೆಯರು ಹಾಗೂ ಮಕ್ಕಳಿಗೆ ಮಾಡಿರುವ ವೆಚ್ಛದ ವಿವರ, ಶೇ.5 ರಲ್ಲಿ ಮಾಡಿರುವ ವೆಚ್ಚದ ವಿವರ ಹಾಗೂ ಶೇ.2 ರ ವೆಚ್ಚದ ವಿವರಗಳನ್ನು ಪರಿಶೀಲಿಸಿ ಪಂಚಾಯತ್ ನ ಕಾರ್ಯ ವೈಖರಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಜಿಲ್ಲಾ ರಕ್ಷಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರೀಯ ಆಗ್ನೇಸ್, ಪಂಚಾಯತ್ ಸದಸ್ಯರಾದ ಎಸ್. ಬೇಬಿ ಸುವರ್ಣ, ಉಮೇಶ್, ಐರಿನ್ ಮೋರಸ್, ವಿದ್ಯಾ ಸಾಲಿಯಾನ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ರೈ, ಕಾರ್ಯದರ್ಶಿ ಯಶೋಧರ ಶೆಟ್ಟಿ, ಗ್ರಾಮ ಸಹಾಯಕ ಗುಣಕರ, ಇನ್ನಿತರ ಅಧಿಕಾರಿಗಳು, ಪಂಚಾಯತ್ ಸಿಬ್ಬಂಧಿಗಳು ಉಪಸ್ಥಿತರಿದ್ದರು.

Related posts

ರಜತ ಮಹೋತ್ಸವದ ಸಂಭ್ರಮದಲ್ಲಿ ವಾಮಂಜೂರಿನ ಎಸ್ ಡಿ ಎಂ ಸಮಗ್ರ ಶಾಲೆ: ಕಲೋತ್ಸವದ ವೇದಿಕೆಯಲ್ಲಿ ಮಿಂಚಿದ ವಿಶೇಷ ಮಕ್ಕಳು

Suddi Udaya

ನಿಡ್ಲೆ ಬಸ್ಟ್ ಸ್ಟಾಂಡ್ ಬಳಿ ಸಂಪೂರ್ಣ ಹದಗೆಟ್ಟ ರಸ್ತೆ: ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಒತ್ತಾಯ

Suddi Udaya

ಕೋರ್ಟ್ ನಲ್ಲಿ ಬುರುಡೆ ಚಿನ್ನಯ್ಯನ ಮೂರು ದಿನಗಳ ಹೇಳಿಕೆ ಇಂದಿಗೆ ಮುಕ್ತಾಯ

Suddi Udaya

ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವದ ಪೂರ್ವಭಾವಿ ಸಭೆ

Suddi Udaya

ಕಾಯರ್ತ್ತಡ್ಕ ಸ.ಹಿ.ಪ್ರಾ. ಶಾಲೆ ಇದರ ಶತಮಾನೋತ್ಸವದ ಅಂಗವಾಗಿ ಉಚಿತ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರ

Suddi Udaya

ಕಡಿರುದ್ಯಾವರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು

Suddi Udaya
error: Content is protected !!