23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಾರಾವಿ ಜನಜಾಗೃತಿ ವಲಯಾಧ್ಯಕ್ಷರ ಆಯ್ಕೆ ಸಭೆ ಜನಜಾಗೃತಿಯ ನೂತನ ವಲಯಾಧ್ಯಕ್ಷರಾಗಿ ಮೋಹನ್ ಅಂಡಿಂಜೆ ಆಯ್ಕೆ

ನಾರಾವಿ: ಸೂರ್ಯನಾರಾಯಣ ದೇವಸ್ಥಾನದಲ್ಲಿ ಜನಜಾಗೃತಿ ವಲಯಾಧ್ಯಕ್ಷರ ಆಯ್ಕೆ ಸಭೆಯು ನಡೆಯಿತು.

ಈ ಸಭೆಯಲ್ಲಿ ಜನಜಾಗೃತಿ ವಲಯಾಧ್ಯಕ್ಷರಾದ ನಿತ್ಯಾನಂದ ನಾವರ, ತಾಲೂಕು ಯೋಜನಾಧಿಕಾರಿ ಯಶವಂತ್ ಸರ್, ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸದಾನಂದ ಬಂಗೇರ, ಹಾಗೂ ತಾಲೂಕು ಜನಜಾಗೃತಿ ಸಮಿತಿಯ ಸದಸ್ಯರಾದ ಮೋಹನ್ ಅಂಡಿಂಜೆ, ಸದಾನಂದ ಗೌಡ, ಜಯರಾಜ್ ಹೆಗ್ಡೆ , ವಲಯದ ಮೇಲ್ವಿಚಾರಕರಾದ ದಮಯಂತಿ ಮೇಡಂ, ಒಕ್ಕೂಟದ ಅಧ್ಯಕ್ಷರುಗಳು, ಗ್ರಾಮ ಸಮಿತಿ ಅಧ್ಯಕ್ಷರುಗಳು, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

ನಂತರ ನೂತನ ಜನಜಾಗೃತಿ ಸಮಿತಿಯನ್ನು ರಚಿಸಲಾಯಿತು. ಇದರಲ್ಲಿ ನಿತ್ಯಾನಂದ ನಾವರ, ಮೋಹನ್ ಅಂಡಿಂಜೆ, ಸದಾನಂದ ಗೌಡ, ಜಯರಾಜ್ ಹೆಗ್ಡೆ, ರಾಜು ಶೆಟ್ಟಿ, ವಸಂತ ಗುಣನಿಲ, ರತ್ನಾಕರ, ಆನಂದ ಶೆಟ್ಟಿ, ಆಯ್ಕೆ ಮಾಡಲಾಯಿತು. ನೂತನ ಜನಜಾಗೃತಿ ವಲಯಾಧ್ಯಕ್ಷರಾಗಿ ಮೋಹನ್ ಅಂಡಿಂಜೆ ಇವರನ್ನು ಆಯ್ಕೆ ಮಾಡಲಾಯಿತು. ನಿತ್ಯಾನಂದ ನಾವರ ಮತ್ತು ಮೋಹನ್ ಅಂಡಿಂಜೆ ಇವರು ಜನಜಾಗೃತಿ ಬಗ್ಗೆ ಮಾತನಾಡಿದರು.

ಕೊಕ್ರಾಡಿ ಸಾವ್ಯದ ಸೇವಾ ಪ್ರತಿನಿಧಿ ಶಶಿಧರ್ ಕುಲಾಲ್ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಯಶವಂತ್ ಇವರು ಮಾತನಾಡಿದರು. ದಮಯಂತಿ ವಂದಿಸಿದರು.

Related posts

ಕನ್ಯಾಡಿ ಶ್ರೀ ರಾಮಕ್ಷೇತ್ರಕ್ಕೆ ಧರ್ಮಸ್ಥಳ ಗ್ರಾಮದ ಭಕ್ತರಿಂದ ಹೊರೆಕಾಣಿಕೆ ಪ್ರಯುಕ್ತ ಅಕ್ಕಿ ಸಮರ್ಪಣೆ

Suddi Udaya

ಲಾಯಿಲ: ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ

Suddi Udaya

ವೇಣೂರು: ದಶಲಕ್ಷಣ ಪರ್ವ ಉದ್ಘಾಟನಾ ಸಮಾರಂಭ: ಮಹಾಮಸ್ತಕಾಭಿಷೇಕದೊಂದಿಗೆ ಜನಮಂಗಳ ಕಾರ್ಯಕ್ರಮ : ಡಾ. ಪದ್ಮಪ್ರಸಾದ ಅಜಿಲ

Suddi Udaya

ನಿಟ್ಟಡೆ ಕುಂಭಶ್ರೀ ಆಂ.ಮಾ. ಶಾಲಾ ಕಾಲೇಜಿಗೆ ಫ್ಯಾನ್ ಕೊಡುಗೆ

Suddi Udaya

ಕಳೆಂಜ: ಶಿಬರಾಜೆಯ ಬ್ರಹ್ಮಲಿಂಗ ದೇವರಿಗೆ ವೃಶ್ಚಿಕ ಸಂಕ್ರಮಣದ ಪ್ರಯುಕ್ತ ವಿಶೇಷ ಅಭಿಷೇಕ ಪೂಜೆ

Suddi Udaya

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಶ್ರೀ ಶಾಸ್ತಾರ ದೇವರ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವ ಸಿದ್ಧತಾ ಸಭೆ

Suddi Udaya
error: Content is protected !!