ಉಜಿರೆ: ತಾಲೂಕಿನ ವಿವಿಧ ಬಾಗಗಳಲ್ಲಿ ನೆಲೆಸಿರುವ ಹಿಂದೂ ಮಲಯಾಳಿ ಬಾಂಧವರು ಒಂದಡೆ ಸೇರಿ ಸಂತೋಷದಿಂದ ಸಂಭ್ರಮಿಸುವ ಒಂದು ದಿನ ಕೇರಳ ಸಾಂಪ್ರದಾಯಿಕ ವಿಷು ಕಣಿ ಉತ್ಸವ ಎ. 9ರಂದು ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉಜಿರೆ ಜನಾರ್ಧನ ದೇವಸ್ಥಾನದ ಅನುವಂಶೀಯ ಆಡಳಿತ ಮೋಕ್ತೇಶರ ಶರತ್ ಕೃಷ್ಣ ಪಡ್ವೆಟ್ನಾಯ ತೆಂಗಿನ ಗರಿ ಒಡೆಯುವ ಮೂಲಕ ಉದ್ಘಾಟಿಸಿ ಶುಭ ಕೋರಿದರು.
ವಿಷು ಕಣಿಯನ್ನು ಶಾಸಕ ಹರೀಶ್ ಪೂಂಜ ನೇರವೇರಿಸಿ ಶುಭ ಕೋರಿದರು.
ಬೆಳ್ತಂಗಡಿ ತಾಲೂಕು ವಿಷು ಕಣಿ ಆಚರಣ ಸಮಿತಿಯಿಂದ ವಿಷು ಕಣಿ 2.0 ಕಾರ್ಯಕ್ರಮ ಆಯೋಜಿಸಿದ್ದು ಪ್ರತಿಷ್ಠಿತ ಕಲಾವಿದರಿಂದ ಹಾಗೂ ಸಿನೆಮಾ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು.
ಪ್ರತಿ ಕುಟುಂಬಗಳೂ ತಮ್ಮಲ್ಲಿ ಬೆಳೆದಂತಹ ದವಸ- ಧಾನ್ಯಗಳನ್ನು, ತರಕಾರಿ ಬೆಳೆಗಳನ್ನು ದೇವರಿಗೆ ಕಾಣಿಕೆ ಇಡುವಂತಹ ಸಂಪ್ರದಾಯ ಎಲ್ಲ ಕಡೆಗಳಲ್ಲೂ ನಾವು ಕಾಣುತ್ತೇವೆ. ಈ ರೀತಿಯ ಕಾಣಿಕೆ ಇಡುವುದನ್ನು ವಿಷು ಕಣಿ ಎಂದು ಕರೆಯುತ್ತಿದ್ದು ಹೆಚ್ಚಾಗಿ ಕೃಷಿ ಕುಟುಂಬಗಳಲ್ಲಿ ಈ ಆಚರಣೆ ತೊಡಗಿಕೊಂಡಿದೆ.
ಕಾರ್ಯಕ್ರಮದಲ್ಲಿ ಕೇರಳ ಸಂಪ್ರದಾಯದಂತೆ ವಿವಿಧ ತಿಂಡಿ ತಿನಸುಗಳು,ಪೂಕಲಂ,ವಿವಿಧ ಆಟೋಟ ಸ್ಪರ್ದೆಗಳು,ಕೇರಳ ಚೆಂಡೆ,ಗೊಂಬೆಗಳು ಎಲ್ಲರ ಗಮನ ಸಳೆಯಿತು.
ಈ ಸಂದರ್ಭದಲ್ಲಿ ಚಾರ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸಾದ್, ಸಮಿತಿ ಪ್ರಮುಖರಾದ ಅನಿಲ್ ಕುಮಾರ್,ಪ್ರಸಾದ್ ಬಿಎಸ್ ಹಾಗೂ ಇತರರು ಉಪಸ್ಥಿತರಿದ್ದರು.