39.2 C
ಪುತ್ತೂರು, ಬೆಳ್ತಂಗಡಿ
March 29, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿ

ಬೆಳಾಲು ಪ್ರೌಢಶಾಲಾ ಮಕ್ಕಳಿಂದ ಬಳಂಜ ಫಾರ್ಮ್ ಭೇಟಿ

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ, ಹಳೆ ವಿದ್ಯಾರ್ಥಿ ಸಂಘ ಮತ್ತು ಶಿಕ್ಷಕ ರಕ್ಷಕ ಸಂಘದ ವತಿಯಿಂದ ಅಂತಾರಾಷ್ಟ್ರೀಯ ಖ್ಯಾತಿಯ ಹಣ್ಣು ಹಂಪಲು ಕೃಷಿಕರಾದ ಅನಿಲ್ ಬಳಂಜರವರ ಕೃಷಿತೋಟದ ಸಂದರ್ಶನ ಆಯೋಜನೆಗೊಂಡಿತು.

ಆಸ್ಟ್ರೇಲಿಯಾ, ಸಿಂಗಾಪುರ, ಬ್ರೆಜಿಲ್, ಥಾಯ್ಲ್ಯಾಂಡ್, ಮಲೇಶಿಯಾ, ಅಮೇರಿಕಾ, ಆಫ್ರಿಕಾ, ಶ್ರೀಲಂಕಾ ಮೊದಲಾದ ವಿದೇಶೀ ತಳಿಗಳ ಜೊತೆಗೆ ಸ್ವದೇಶೀ ತಳಿಗಳೂ ಸರಿ ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ಹಣ್ಣು ಹಂಪಲುಗಳ ಕೃಷಿಯನ್ನು ಮಾಡಿರುವ ಅನಿಲ್ ರವರ ಮಾದರಿ ತೋಟ ವೀಕ್ಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಳಂಜ ಫಾರ್ಮ್ ನ ಮ್ಯಾನೇಜರರಾದ ರಾಜ್ ನಾರಾಯಣರವರು ಮಾಹಿತಿ ನೀಡಿದರು.

ಭೇಟಿ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್, ಶಿಕ್ಷಕರಾದ ರಾಜಶ್ರೀ, ಕೃಷ್ಣಾನಂದ, ರವಿಚಂದ್ರ , ಚಿತ್ರಾ ಪಿ ಎಚ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಸುಲೈಮಾನ್ ಭೀಮಂಡೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ್ ಕನಿಕ್ಕಿಲ, ಸದಸ್ಯರಾದ ಶೇಖರ್ ಕೊಲ್ಲಿಮಾರು, ಸುರೇಶ್ ಕನಿಕ್ಕಿಲರವರು ಜೊತೆಗಿದ್ದರು.

Related posts

ಉಜಿರೆ : ನಿವೃತ್ತ ಶಿಕ್ಷಕ ದೇವಪ್ಪ ಗೌಡ ನಿಧನ

Suddi Udaya

ಕೊಕ್ಕಡ: ಕಾರು ಹಾಗೂ ಬೈಕ್ ನಡುವೆ ಅಪಘಾತ: ಬೈಕ್ ಸವಾರರಿಗೆ ಗಾಯ

Suddi Udaya

ಉಜಿರೆ : ಅನುಗ್ರಹ ಶಾಲೆಯಲ್ಲಿ ಹುತಾತ್ಮರ ದಿನಾಚರಣೆ

Suddi Udaya

ಗುರುವಾಯನಕೆರೆ: ನಾರಾಯಣ ಆಚಾರ್ಯ ರವರಿಗೆ ನುಡಿ ನಮನ ಕಾರ್ಯಕ್ರಮ

Suddi Udaya

ಅಂಡಿಂಜೆ: ಕೈಪಿಜಾಲು ಮನೆಯ ಹರೀಶ್ ಕೆ. ಆಚಾರ್ಯ ನಿಧನ

Suddi Udaya

ಎಸ್.ಡಿ.ಎಂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ “ಮಾಮ್” ಪ್ರಶಸ್ತಿಯ ಗರಿ

Suddi Udaya
error: Content is protected !!