ಕಾಶಿಪಟ್ಣ : ಎನ್.ಎಸ್.ಎಸ್ ಶಿಬಿರವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಸ್ವಚ್ಛತೆ ಭಾಂದವ್ಯ ಸಮಯ ಪರಿಪಾಲನೆ ಮುಂತಾದ ಗುಣಗಳನ್ನು ಅಭಿವೃದ್ಧಿ ಪಡಿಸುತ್ತದೆ. ಇಂಥಹ ಗುಣಗಳು ಒಬ್ಬ ವ್ಯಕ್ತಿಯನ್ನು ಸಮಾಜದಲ್ಲಿ ಉತ್ತಮ ನಾಗರಿಕನಾಗುವಂತೆ ಮಾಡಲು ಒಂದು ದಾರಿಯಾಗಿದೆ. ವಿದ್ಯಾರ್ಥಿಗಳ ಪ್ರತಿಭೆಗಳ ಅನಾವರಣಕ್ಕೆ ಎನ್.ಎಸ್.ಎಸ್ ಒಂದು ಉತ್ತಮ ವೇದಿಕೆ ಎಂದು ಯು. ನಾರಾಯಣ ಭಟ್ ಕೆಲ್ಲಗುತ್ತು ಅವರು ಹೇಳಿದರು.
ಇವರು ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಕೇಳದಪೇಟೆ ಕಾಶಿಪಟ್ಣ ಇಲ್ಲಿ ನಡೆಯುತ್ತಿರುವ ಸಂತ ಅಂತೋನಿ ಪದವಿ ಕಾಲೇಜು ನಾರಾವಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ 2022-23 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂತ ಅಂತೋನಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ವಂ ಡಾ. ಅಲ್ವಿನ್ ಸರಾವೋ ಶಿಬಿರದ ಯಶಸ್ಸಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ದ.ಕ.ಜಿ, ಪಂ ಹಿರಿಯ ಪ್ರಾಥಮಿಕ ಶಾಲೆ ಕೇಳದಪೇಟೆಯ ಮುಖ್ಯೋಪಾಧ್ಯಾಯ ಪ್ರಶಾಂತ್ ಎ ಮಾತನಾಡಿ “ಮಕ್ಕಳಿಗೆ ಭೌತಿಕ ಕಲಿಕೆಯ ಜೊತೆಗೆ ಪ್ರಾಯೋಗಿಕ ಕಲಿಕೆಯು ಆತೀಮುಖ್ಯ” ಎಂದರು.
ವೇದಿಕೆಯಲ್ಲಿ ದ.ಕ.ಜಿ. ಈ ಹಿರಿಯ ಪ್ರಾಥಮಿಕ ಶಾಲೆ ಕೇಳದಪೇಟೆ ಇಲ್ಲಿನ ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರಕಾಶ್ ಮಜಲಡ್ಕ, ಹರೀಶ್ ಗೊಲ್ಲ ಕುಕ್ಕಾಜೆ, ಸುಭಾಶ್ ಶೆಟ್ಟಿ, ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ದಿನೇಶ್ ಬಿ.ಕೆ ಸ್ವಾಗತಿಸಿದರು. ಸಹಶಿಬಿರಾಧಿಕಾರಿ ಅವಿನಾಶ್ ಲೋಬೋ ಎಲ್ಲರಿಗೂ ಧನ್ಯವಾದವಿತ್ತರು. ಉಪನ್ಯಾಸಕರಾದ ಸಂತೋಷ್ ಕಾರ್ಯಕ್ರಮವನ್ನು ನಿರೂಪಿಸಿದರು. ನಿಕಟಪೂರ್ವ ಯೋಜನಾಧಿಕಾರಿ ಅವಿಲ್ ಮೋರಾಸ್, ಉಪನ್ಯಾಸಕ ಪ್ರದೀಪ್ ಬಿ.. ಕುಮಾರಿ ಆಶ್ವಿತಾ ಸೆರಾವೋ ಹಾಗೂ ಎನ್.ಎಸ್.ಎಸ್ ಕಾರ್ಯದರ್ಶಿ ಸುಹಾಸ್ ಹೆಗ್ಡೆ, ಕುಮಾರಿ ನವ್ಯಶ್ರೀ ಸಹಕರಿಸಿದರು.