April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜಕೀಯರಾಜ್ಯ ಸುದ್ದಿ

ಎ.13ರ ಒಳಗೆ ಪೊಲೀಸ್ ಠಾಣೆಗೆ ಶಸ್ತ್ರಾಸ್ತ್ರ ಒಪ್ಪಿಸಲು ಸೂಚನೆ

ಬೆಳ್ತಂಗಡಿ: ಪರವಾನಗಿ ಹೊಂದಿರುವ ಆಯುಧಗಳನ್ನು ಪೊಲೀಸ್ ಠಾಣೆ ಸುಪರ್ದಿಗೆ ಒಪ್ಪಿಸುವ ವಿಚಾರದಲ್ಲಿ ಜಿಲ್ಲಾಧಿಕಾರಿ ಎ.6ರಂದು ಪರಿಷ್ಕೃತ ಆದೇಶ ಹೊರಡಿಸಿದ್ದು, ಜಿಲ್ಲೆಯ ಎಲ್ಲಾ ಆಯುಧಗಳ ಪರವಾನಗಿದಾರರು ಏ.13ರ ಮೊದಲು ಆಯುಧ ಶಸ್ತಾಸ್ತ್ರಗಳನ್ನು ಠೇವಣಿ ಮಾಡದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿಯುತ ಚುನಾವಣೆ ನಡೆಸುವ ಉದ್ದೇಶದಿಂದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 1959 ರ ಕಲಂ 17(3) (ಬಿ) ಅನ್ವಯ, ಮಾ.30ರಂದು ಹೊರಡಿಸಿದ್ದ ಆದೇಶದಲ್ಲಿ ಜಿಲ್ಲೆಯಲ್ಲಿರುವ ಬೆಳೆ ರಕ್ಷಣೆ ಹಾಗೂ ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವವರು ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಅಥವಾ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಸ್ಥರಲ್ಲಿ ಎ.24ರ ಒಳಗಾಗಿ ಜಮಾ ಮಾಡುವಂತೆ ಆದೇಶ ಹೊರಡಿಸಿದ್ದರು. ಎ.6ರಂದು ಆದೇಶವನ್ನು ಮಾರ್ಪಡಿಸಲಾಗಿದ್ದು, ಎ.13ರ ಒಳಗಾಗಿ ಪೊಲೀಸ್ ಠಾಣಿ ಅಥವಾ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಸ್ಥರಲ್ಲಿ ಆಯುಧ ಇಡುವಂತೆ ಪ್ರಕಟಣೆ ಹೊರಡಿಸಲಾಗಿದೆ.

Related posts

ವಲಯ ಮಟ್ಟದ ತ್ರೋಬಾಲ್ ಪಂದ್ಯಾಟ: ಶ್ರೀ ಭಾರತೀ ಆಂ.ಮಾ.ಪ್ರೌ. ಶಾಲೆಯ ಬಾಲಕಿಯರ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಶಿಬಾಜೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವತಿಯ ಮನೆಗೆ ಬಿಜೆಪಿ ಮಂಡಲ ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಭೇಟಿ

Suddi Udaya

ಡಿ.28 (ನಾಳೆ) ವಿದ್ಯುತ್ ನಿಲುಗಡೆ

Suddi Udaya

ಗೇರುಕಟ್ಟೆ: ಕೃಷಿಕ ಪೆರಾಜೆ ಬಳ್ಳಿದಡ್ಡ ಕಾಂ ತಪ್ಪ ಗೌಡ ನಿಧನ

Suddi Udaya

ಕೊಕ್ಕಡ: ಹಿರಿಯರ ಸೇವಾ ಪ್ರತಿಷ್ಠಾನದಿಂದ ದಶ ಸಾಧಕರಿಗೆ ಗೌರವಾರ್ಪಣೆ     

Suddi Udaya

ವೇಣೂರು ಆರಕ್ಷಕ ಠಾಣೆಯಲ್ಲಿ ಮಿಲಾದುನ್ನೆಭಿ ಪ್ರಯುಕ್ತ ಶಾಂತಿ ಸಭೆ

Suddi Udaya
error: Content is protected !!