ಉಜಿರೆ ಸ್ನಾತಕೋತ್ತರ ವಿಭಾಗ ಮತ್ತು ಸೈಕಾಲಜಿಯಲ್ಲಿ ಸಂಶೋಧನೆ ವಿಭಾಗ ಆಯೋಜಿಸಿದ ರಾಷ್ಟ್ರೀಯ ಸೆಮಿನಾರ್ “ಸಮಾಜಕ್ಕೆ ಮನಶ್ಶಾಸ್ತ್ರಜ್ಞರ ಪಾತ್ರ ಮತ್ತು ಸಾಮಾಜಿಕ ಕಾಳಜಿ” ಎಂಬ ವಿಷಯದ ಕುರಿತು ಸೆಮಿನಾರ್ ಎ.12 ರಂದು ಉಜಿರೆ ಎಸ್.ಡಿ.ಎಮ್ ಪಿಜಿ ಸೆಂಟರ್ ನಲ್ಲಿ ಜರುಗಿತು.
ಯೆನೆಪೋಯ ವೈದ್ಯಕೀಯ ಕಾಲೇಜಿನ ಮನೋವೈದ್ಯಶಾಸ್ತ್ರ ವಿಭಾಗ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಅನಿಲ್ ಕಾಕುಂಜೆ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲರು ಡಾ.ಕುಮಾರ ಹೆಗಡೆ ಬಿ.ಎ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಡೀನ್ ಪಿಜಿ ವಿಭಾಗದ ಡಾ. ವಿಶ್ವನಾಥ ಪಿ , ಬೆಂಗಳೂರು ಮುಕ್ತ ಫೌಂಡೇಶನ್ ನಿರ್ದೇಶಕರು ಡಾ. ಅಶ್ವಿನಿ ಎನ್.ವಿ ಭಾಗವಹಿಸಿದ್ದರು.
ವಂದನಾ ಜೈನ್ , ಸಂಘಟನಾ ಕಾರ್ಯದರ್ಶಿ ಡಾ.ಮಹೇಶ ಬಾಬು. ಎನ್, ಮುಖ್ಯೋಪಾಧ್ಯಾಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.