23.6 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಮಕ್ಕಳಿಗೆ ಹಿಂದೂ ಸಂಸ್ಕಾರ ಶಿಬಿರ

ಕೊಕ್ಕಡ : ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ , ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಹಾಗೂ ಪಟ್ಟೂರು ಶ್ರೀ ರಾಮ ವಿದ್ಯಾಸಂಸ್ಥೆ ಇವುಗಳ ಸಹಯೋಗದಲ್ಲಿ 12ರಿಂದ 16 ರ ವಯೋಮಾನದ ಮಕ್ಕಳಿಗೆ ಹಿಂದೂ ಸಂಸ್ಕಾರ ಶಿಬಿರವು ಎ.12ರಿಂದ 16ರವರೆಗೆ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಗಣೇಶ ಕಲಾಮಂದಿರದಲ್ಲಿ ಜರುಗಲಿದ್ದು ಇದರ ಉದ್ಘಾಟನಾ ಸಮಾರಂಭವು ಎ.12 ರಂದು ಜರುಗಿತು.

ಉದ್ಘಾಟನೆಯನ್ನು ಕೊಕ್ಕಡ ಕೆನರಾ ಬ್ಯಾಂಕಿನ ಮೆನೇಜರ್ ಅಂಕಿತ್‌ ಸಿಂಗ್ ನೆರವೇರಿಸಿ, ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್‌ ರಾವ್ ಮುಂಡ್ರುಪ್ಪಾಡಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆರ್.ಎಸ್.ಎಸ್ ಮುಖಂಡ ಕೃಷ್ಣ ಭಟ್ ಆಗಮಿಸಿದ್ದರು.

ಶ್ರೀ ರಾಮ ವಿದ್ಯಾಸಂಸ್ಥೆ ಪಟ್ಟೂರಿನ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ ಶೇಟ್‌ ಸ್ವಾಗತಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಪುರಂದರ ಗೌಡ ಕೆ ಧನ್ಯವಾದವಿತ್ತರು. ಶ್ರೀ ರಾಮ ವಿದ್ಯಾಸಂಸ್ಥೆಯ ಮಾತಾಜಿ ಸುಪ್ರಿತಾ ಎ ಕಾರ್ಯಕ್ರಮ ನಿರೂಪಿಸಿದರು.

Related posts

ಸಿಎ ಪರೀಕ್ಷೆಯಲ್ಲಿ ಸುಕನ್ಯಾ ಕಾಮತ್ ಉತ್ತೀರ್ಣ

Suddi Udaya

ನಿಡ್ಲೆ: ಬರೆಂಗಾಯ ವಣಸಾಯದಲ್ಲಿ ವನದುರ್ಗಾರಾಧನೆ, ಬ್ರಾಹ್ಮಣ ಸಂತರ್ಪಣೆ ಹಾಗೂ ವನಭೋಜನ

Suddi Udaya

ಅ.23, 26 ರಂದು ಬಳಂಜ ಶಾಲೆಯಲ್ಲಿ ವಲಯ ಹಾಗೂ ತಾಲೂಕು ಮಟ್ಟದ ಕ್ರೀಡಾಕೂಟ

Suddi Udaya

ಇಚ್ಚೂರು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿಯ ಪ್ರಯುಕ್ತ ವಿಶೇಷ ಭಜನಾ ಕಾರ್ಯಕ್ರಮ

Suddi Udaya

ಸುದ್ದಿ ಉದಯ ವಾರಪತ್ರಿಕೆ ಲೋಕಾರ್ಪಣೆ ನೂತನ ಕಚೇರಿಯ ಉದ್ಘಾಟನೆ
ಯೂಟ್ಯೂಬ್ ಮತ್ತು ವೆಬ್‌ಸೈಟ್‌ಗೆ ಚಾಲನೆ

Suddi Udaya

ಎಸ್.ಡಿ.ಎಂ. ಪಾಲಿಟೆಕ್ನಿಕ್:‌ ಬಸವರಾಜ ಕಟ್ಟೀಮನಿಯವರ ವ್ಯಕ್ತಿತ್ವ ಮತ್ತು ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ

Suddi Udaya
error: Content is protected !!