25.8 C
ಪುತ್ತೂರು, ಬೆಳ್ತಂಗಡಿ
March 6, 2026
ತಾಲೂಕು ಸುದ್ದಿ

ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್‌ರಿಂದ ಹೇವಾಜೆ ಶಾಲೆಗೆ ಯಾವುದೇ ಅನುದಾನ ಮಂಜೂರಾಗಿಲ್ಲ: ಮಾಹಿತಿ ಹಕ್ಕಿನಲ್ಲಿ ಅಧಿಕಾರಿ ನೀಡಿದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಶಿಶಿಲ: 2022-23 ಮತ್ತು 2023- 24ನೇ ಸಾಲಿನಲ್ಲಿ ಕರ್ನಾಟಕ ಸರಕಾರ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ ಹರಿ ಪ್ರಸಾದ್ ಇವರ ಯೋಜನೆಯಡಿ ಯಾವುದೇ ಅನುದಾನ ಮಂಜೂರಾಗಿರುವುದಿಲ್ಲ ಎಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಬೆಳ್ತಂಗಡಿಯ ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿ ಲಿಖಿತ ಮಾಹಿತಿ ನೀಡಿದ್ದಾರೆ.


ಶಿಶಿಲ ಗ್ರಾಮದ ಪಡ್ಪು ಮನೆ ನಿವಾಸಿ ಕೊರಗಪ್ಪ ಗೌಡ ಇವರು ಮಾಹಿತಿ ಹಕ್ಕಿನಲ್ಲಿ ಕೇಳಿದ ಮಾಹಿತಿಗೆ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಈ ಮಾಹಿತಿಯನ್ನು ನೀಡಿದ್ದು, ಅಧಿಕಾರಿ ನೀಡಿದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಮ್‌ರವರು ಮಾಧ್ಯಮಗಳಿಗೆ ನೀಡಿದ ತಮ್ಮ ಪರಿಚಯದ ವಿವರದಲ್ಲಿ ವಿಧಾನ ಪರಿಷತ್ ಮತ್ತು ಸಂಸದರ ಸಂಪರ್ಕ ಮಾಡಿ ಬೆಳ್ತಂಗಡಿ ತಾಲೂಕಿನಲ್ಲಿ ಅನುದಾನ ನೀಡಿದ ವಿವರ ನೀಡಿದ್ದರು. ಇದರಲ್ಲಿ ಶಿಶಿಲದ ಹೇವಾಜೆ ಶಾಲೆಗೆ ರೂ. 2ಲಕ್ಷ ಅನುದಾನ ಕೊಟ್ಟಿರುವುದಾಗಿ ನಮೂದಿಸಲಾಗಿದ್ದು, ಇದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದಕ್ಕೆ ಕೊರಗಪ್ಪ ಗೌಡರವರು ರಕ್ಷಿತ್ ಶಿವರಾಂ ಹೇವಾಜೆ ಶಾಲೆಗೆ ಯಾವುದೇ ಅನುದಾನ ನೀಡಿಲ್ಲ ಎಂದು ಹೇಳಿರುವ ವಾಯ್ಸ್ ರೆಕಾರ್ಡ್ ಕೂಡಾ ನಂತರ ವೈರಲ್ ಆಗಿತ್ತು.
ಈ ಬಗ್ಗೆ ರಕ್ಷಿತ್ ಶಿವರಾಂ ಕಡೆಯಿಂದ ಮಂಜೂರಾತಿ ಪತ್ರ ನೀಡಿದ್ದನ್ನು ಸ್ಥಳೀಯ ಪತ್ರಿಕೆ ಪ್ರಕಟಿಸಿತ್ತು. ಇದರ ನಂತರದ ಬೆಳವಣಿಗೆಯಾಗಿ ಕೊರಗಪ್ಪ ಗೌಡರು ಮಾಹಿತಿ ಹಕ್ಕಿನಲ್ಲಿ ಈ ವಿವರನ್ನು ಕೇಳಿದ್ದು, ಬಿ.ಕೆ ಹರಿಪ್ರಸಾದ್‌ರವರಿಂದ ಯಾವುದೇ ಅನುದಾನ ಮಂಜೂರಾಗಿರುವುದಿಲ್ಲ ಎಂದು ಅಧಿಕಾರಿ ಕೊಟ್ಟಿರುವ ಲಿಖಿತ ಉತ್ತರ ಈಗ ಇದು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

Related posts

ಶಿರ್ಲಾಲು : ಬಿಲ್ಲವ ಸಮಾಜ ಬಾಂಧವರ 10ನೇ ವರ್ಷದ ‘ಕೆಸರು ಗದ್ದೆ’ ಕ್ರೀಡಾಕೂಟ

Suddi Udaya

ಶಿಬಾಜೆ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ ಭಜನೋತ್ಸವ: ಶೌರ್ಯ ವಿಪತ್ತು ತಂಡದಿಂದ ಶ್ರಮದಾನ

Suddi Udaya

ಸೌಜನ್ಯ ಪ್ರಕರಣ ಮರು ತನಿಖೆ ಕೋರಿದ ಅರ್ಜಿ: ಸರಕಾರ, ಸಿಬಿಐಗೆ ಹೈಕೋರ್ಟ್ ನೋಟಿಸ್ ಜಾರಿ

Suddi Udaya

ಚಾರ್ಮಾಡಿ ಸಾರ್ವಜನಿಕ ಹಿಂದೂ ರುದ್ರ ಭೂಮಿಯ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಶಾಸಕ ಹರೀಶ್ ಪೂಂಜರಿಂದ ಭರವಸೆ

Suddi Udaya

ನಾಪತ್ತೆಯಾಗಿದ್ದ ಬೆಳಾಲಿನ ಯುವಕ ಬಲಿಪೆ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆ

Suddi Udaya

ನಾವೂರು ಸ. ಹಿ. ಪ್ರಾ. ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ಮತ್ತು ಜಾಗೃತಿ ಕಾರ್ಯಕ್ರಮ

Suddi Udaya
error: Content is protected !!